ಇಂಡಿಯಾ ಕಂಡು ಬೆರಗಾದ ವಿದೇಶಿ ಮಹಿಳೆ: ಇದು ಭಾರತವೋ ಅಥವಾ ದುಬೈಯೋ? Video ವೈರಲ್​

Untitled design - 2025-10-10T114341.015
Published on: 

Video: ಭಾರತದ ಮೆಟ್ರೋ ನಿಲ್ದಾಣವೊಂದರಲ್ಲಿ ವಿದೇಶಿ ಮಹಿಳೆಯೊಬ್ಬಳು ಸ್ವಚ್ಛತೆ ಬಗ್ಗೆ ಹೊಗಳಿದ್ದಾಳೆ. ಅಲ್ಲದೆ, ಇದು ಭಾರತವೋ ಅಥವಾ ದುಬೈಯೋ ಅವರ ಹೇಳಿಕೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ.

ಹೌದು, ರಾಜಸ್ಥಾನದ ಪಿಂಕ್ ಸಿಟಿ ಎಂದೂ ಕರೆಯಲ್ಪಡುವ ರಾಜಸ್ಥಾನದ ರಾಜಧಾನಿ ಜೈಪುರದ ಮೆಟ್ರೋ ನಿಲ್ದಾಣವು ರಷ್ಯಾದ ವ್ಲಾಗರ್ ಒಬ್ಬರನ್ನು ಬೆರಗುಗೊಳಿಸಿದೆ. ವಿಡಿಯೋದಲ್ಲಿ, ಮಹಿಳೆ ನಿಲ್ದಾಣದ ಸ್ವಚ್ಛತೆಯನ್ನು ಮೆಚ್ಚಿಕೊಂಡು ಅದನ್ನು ಅಪಾರವಾಗಿ ಹೊಗಳಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ.

ವಿಡಿಯೋದಲ್ಲೇನಿದೆ?

ವೀಡಿಯೊದಲ್ಲಿ, ರಷ್ಯಾದ ವ್ಲಾಗರ್ ಜೈಪುರದ ಹವಾ ಮಹಲ್ ಹೊರಡಲು ತನ್ನ ಸಂಗಾತಿಯೊಂದಿಗೆ ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವುದು ಕಂಡುಬರುತ್ತದೆ. ನಿಲ್ದಾಣದ ಹೊಳೆಯುವ ಪ್ಲಾಟ್‌ಫಾರ್ಮ್‌ಗಳು, ಆಧುನಿಕ ಸೌಲಭ್ಯಗಳು ಮತ್ತು ವಿಶೇಷವಾಗಿ ಸ್ವಚ್ಛತೆಯನ್ನು ನೋಡಿ ಅವರು ಆಶ್ಚರ್ಯಚಕಿತರಾಗಿದ್ದಾರೆ.

"ಇಲ್ಲಿನ ಸ್ವಚ್ಛತೆ ಮತ್ತು ವಿನ್ಯಾಸವನ್ನು ನೋಡಿದರೆ, ಇದು ಭಾರತ ಎಂದು ನನಗೆ ಅನಿಸುತ್ತಿಲ್ಲ. ಇದು ದುಬೈ ಮೆಟ್ರೋದಂತೆ ಕಾಣುತ್ತದೆ" ಎಂದು ಹೇಳುತ್ತಾರೆ. ಮಹಿಳೆ ತನ್ನ ಸಂಪೂರ್ಣ ಪ್ರಯಾಣವನ್ನು ತನ್ನ ವ್ಲಾಗ್‌ನಲ್ಲಿ ತೋರಿಸುತ್ತಾರೆ ಮತ್ತು ವೀಡಿಯೊದಲ್ಲಿ ಜೈಪುರ ಮೆಟ್ರೋವನ್ನು ಹಲವಾರು ಬಾರಿ ಹೊಗಳುವುದು ಕೇಳಿಬರುತ್ತದೆ.

ನೆಟ್ಟಿಗರ ಪ್ರತಿಕ್ರಿಯೆ

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ನೆಟ್ಟಿಗರು ಇದು ಭಾರತಕ್ಕೆ ಹೆಮ್ಮೆಯ ವಿಷಯ ಎಂದು ಹಲವರು ಹೇಳುತ್ತಿದ್ದಾರೆ. ಇನ್ನು ಕೆಲವರು ಇದನ್ನು ನೋಡಿದಾಗ ಭಾರತ ಎಷ್ಟು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಕಾಮೆಂಟ್​ ಮಾಡುತ್ತಿದ್ದಾರೆ. ಇದಲ್ಲದೆ, ಜನರು ಈ ವೀಡಿಯೊವನ್ನು ಇಷ್ಟಪಡುತ್ತಿದ್ದಾರೆ ಮತ್ತು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.(ಏಜೆನ್ಸೀಸ್​)