

Gold: ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಗಳು ಗಗನಕ್ಕೇರುತ್ತಿವೆ. ಸಾಮಾನ್ಯವಾಗಿ ಅದು ಮದುವೆಯಾಗಿರಲಿ, ಹಬ್ಬವಾಗಲಿ ಅಥವಾ ಹೂಡಿಕೆಗೆ ಆಗಲಿ ಜನರು ತಮ್ಮ ಹಣವನ್ನು ಸುರಕ್ಷಿತವಾಗಿಡಲು ಬಯಸುತ್ತಾರೆ. ಚಿನ್ನಕ್ಕಿಂತ ಉತ್ತಮ ಆಯ್ಕೆಗಳು ಕಡಿಮೆ. ಆದರೆ, ಹೆಚ್ಚುತ್ತಿರುವ ಬೇಡಿಕೆಯೊಂದಿಗೆ, ವಂಚನೆ ಮತ್ತು ನಕಲಿ ಚಿನ್ನದ ಘಟನೆಗಳು ಸಹ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಿಂದ ಖರೀದಿಸಿದ ಚಿನ್ನ ನಿಜವೇ ಅಥವಾ ನಕಲಿಯೇ ಎಂದು ಮನೆಯಲ್ಲೇ ಸರಳ ಪರೀಕ್ಷೆಗಳ ಮೂಲಕ ಪರಿಶೀಲಿಸಬಹುದು.
ಹೌದು, ಆದರೆ ಈ ಪರೀಕ್ಷೆಗಳು 100% ನಿಖರವಲ್ಲ. ಸರಿಯಾದ ಫಲಿತಾಂಶಕ್ಕಾಗಿ ಚಿನ್ನದ ಗುಣಮಟ್ಟ ಪರೀಕ್ಷಿಸುವ ಅಭರಣದ ಅಂಗಡಿ ಮತ್ತು ತಜ್ಞರ ಬಳಿ ಕೊಂಡೊಯ್ಯುವುದೆ ಒಳಿತು. ಇನ್ನು ಕೆಲವು ಸಾಮಾನ್ಯ ಮನೆಯ ವಸ್ತುಗಳನ್ನು ಬಳಸಿ ಮಾಡಬಹುದಾದ ಪರೀಕ್ಷೆಗಳಿವೆ. ಅದು ಹೇಗೆ ಕಾರ್ಯ ಮಾಡುತ್ತದೆ ಎಂದು ತಿಳಿಯೋಣ.
1. ಆಯಸ್ಕಾಂತ ಪರೀಕ್ಷೆ(Magnet Test): ಒಂದು ಶಕ್ತಿಶಾಲಿ ಆಯಸ್ಕಾಂತ ಅನ್ನು ಚಿನ್ನದ ವಸ್ತುವಿನ ಬಳಿ ಹಿಡಿಯಿರಿ. ನಿಜವಾದ ಚಿನ್ನ ಚೈಮಗ್ನೆಟ್ಗೆ ಆಕರ್ಷಿತವಾಗುವುದಿಲ್ಲ. ಆಕರ್ಷಿತವಾದರೆ, ಅದು ನಕಲಿ (ಇದರಲ್ಲಿ ಇತರ ಲೋಹಗಳು ಇರಬಹುದು). ಗಮನಿಸಿ: ಕೆಲವು ನಕಲಿ ಚಿನ್ನಗಳು ಸಹ ಚೈಮಗ್ನೆಟ್ಗೆ ಆಕರ್ಷಿತವಾಗುವುದಿಲ್ಲ, ಆದ್ದರಿಂದ ಇದು ಸಂಪೂರ್ಣ ನಿರ್ಧಾರವಲ್ಲ.
2. ಉಪ್ಪು ನೀರು ಅಥವಾ ವಿನೆಗೆರ್ ಪರೀಕ್ಷೆ (Vinegar Test): ಉಪ್ಪು ನೀರಿನಲ್ಲಿ (ಅಥವಾ ವೈಟ್ ವಿನೆಗರ್ನಲ್ಲಿ) ಚಿನ್ನವನ್ನು ಇಡಿ, ಈ ಉಪ್ಪು ನೀರಿನಲ್ಲಿ 5-10 ನಿಮಿಷಗಳು ಇಟ್ಟುಕೊಳ್ಳಿ. ನಿಜವಾದ ಚಿನ್ನದ ಬಣ್ಣ ಬದಲಾಗುವುದಿಲ್ಲ. ಬಣ್ಣ ಬದಲಾದರೆ (ಹಸಿರು ಅಥವಾ ಕಪ್ಪು), ಅದು ನಕಲಿ. ಇದು ಸುಲಭ ಮತ್ತು ಸುರಕ್ಷಿತ ಪರೀಕ್ಷೆ.
3. ಬೆಂಕಿ ಅಥವಾ ಲೈಟರ್ ಪರೀಕ್ಷೆ (Flame Test)ಲೈಟರ್ ಅಥವಾ ಬೆಂಕಿಯನ್ನು ಬಳಸಿ ಚಿನ್ನವನ್ನು 10-15 ಸೆಕೆಂಡುಗಳು ಬೆಚ್ಚಗಿ ಮಾಡಿ. ನಿಜವಾದ ಚಿನ್ನ ಬಣ್ಣ ಬದಲಾಗುವುದಿಲ್ಲ ಮತ್ತು ಆಕಾರ ಬದಲಾಗುವುದಿಲ್ಲ. ನಕಲಿ ಚಿನ್ನ ಕಪ್ಪು ಅಥವಾ ಬಣ್ಣ ಬದಲಾಗಬಹುದು.
4.ಹಾಲ್ಮಾರ್ಕ್ ಪರಿಶೀಲಿಸಿ : ಹಾಲ್ಮಾರ್ಕ್ ಪರಿಶೀಲಿಸುವುದು ಗುರುತಿಸಲು ಸುಲಭ ಮತ್ತು ಅತ್ಯಂತ ವಿಶ್ವಾಸಾರ್ಹ ಮಾರ್ಗವಾಗಿದೆ. ಹಾಲ್ಮಾರ್ಕ್ ಎಂದರೆ ಚಿನ್ನದ ಶುದ್ಧತೆಯ ಶೇಕಡಾವಾರು ಪ್ರಮಾಣವನ್ನು ಸೂಚಿಸುವ ಸರ್ಕಾರಿ ಪ್ರಮಾಣೀಕರಣ. ಭಾರತದಲ್ಲಿ, ಬಿಐಎಸ್ ಹಾಲ್ಮಾರ್ಕ್ಗಳನ್ನು ಪ್ರಮಾಣೀಕರಿಸುತ್ತದೆ. ಆಭರಣಗಳನ್ನು ಹಾಲ್ಮಾರ್ಕ್ ಮಾಡದಿದ್ದರೆ, ಅದು ನಕಲಿ ಅಥವಾ ಕಲಬೆರಕೆಯಾಗಿರಬಹುದು.