ಕೊರೊನಾ ಸಂದರ್ಭದ ಬಿಜೆಪಿ ನಾಯಕರ ಪ್ರಕರಣ ರದ್ದತಿ ಅರ್ಜಿ ವಜಾಗೊಳಿಸಿದ Bombay High Court; ನಿಯಮ ಪಾಲಿಸುವಂತೆ ಆದೇಶ

Bombay High Court
Published on

Bombay High Court: ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಬಿಜೆಪಿ ಮಾಜಿ ಸಂಸದ, ಮಾಜಿ ಶಾಸಕರು ಮತ್ತು ಹಾಲಿ ಶಾಸಕರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಎಂಟು ಅರ್ಜಿಗಳನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.

ಮಾಜಿ ಸಂಸದ ಗೋಪಾಲ್ ಶೆಟ್ಟಿ ವಿರುದ್ಧ ಎರಡು, ಮಾಜಿ ಶಾಸಕ ಸುನಿಲ್ ರಾಣೆ ವಿರುದ್ಧ ಐದು ಮತ್ತು ದಹಿಸರ್‌ನ ಹಾಲಿ ಬಿಜೆಪಿ ಶಾಸಕಿ ಮನೀಷಾ ಚೌಧರಿ ವಿರುದ್ಧ ಒಂದು ಎಫ್‌ಐಆರ್ ದಾಖಲಾಗಿವೆ. ಇವೆಲ್ಲವೂ ಕೋವಿಡ್ -19 ಅವಧಿಯಲ್ಲಿ, ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಅಧಿಕಾರದಲ್ಲಿದ್ದಾಗ ಮತ್ತು ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ದಾಖಲಾಗಿದ್ದ ಪ್ರಕರಣಗಳು.

ಮೂವರು ಬಿಜೆಪಿ ನಾಯಕರು ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಎ ಅಂಖದ್ ಅವರ ದ್ವೀಸದಸ್ಯಪೀಠ, ನಿಯಮಗಳ ಪ್ರಕಾರ ರದ್ದುಗೊಳಿಸುವ ಬದಲು ಹಿಂತೆಗೆದುಕೊಳ್ಳುವ ರಾಜಕೀಯ ಎಫ್‌ಐಆರ್‌ಗಳನ್ನು ಎದುರಿಸಲು ಒಂದು ಕಾರ್ಯವಿಧಾನವನ್ನು ರೂಪಿಸಲಾಗಿದೆ ಎಂದು ಅರ್ಜಿದಾರರಿಗೆ ತಿಳಿಸಿದೆ. ರಾಜ್ಯದಲ್ಲಿನ ಸಚಿವ ಸಂಪುಟ ಉಪಸಮಿತಿಯು ಎಫ್‌ಐಆರ್‌ಗಳನ್ನು ರದ್ದುಗೊಳಿಸಲು ಪ್ರಸ್ತಾವನೆಗಳನ್ನು ಆಹ್ವಾನಿಸುತ್ತದೆ ಮತ್ತು ಪ್ರಕರಣದ ಸತ್ಯಗಳನ್ನು ಪರಿಶೀಲಿಸಿದ ನಂತರ ಮತ್ತು ಅವು ಸಾರ್ವಜನಿಕ ಆಸ್ತಿಗೆ ಯಾವುದೇ ಹಾನಿಯಾಗದಂತೆ ಗಂಭೀರ ಅಪರಾಧಗಳಲ್ಲ ಎಂದು ಅವರ ಗಮನಕ್ಕೆ ಬಂದರೆ, ಅಂತಹ ಎಫ್‌ಐಆರ್ ರದ್ದುಗೊಳಿಸಲು ಶಿಫಾರಸುಗಳನ್ನು ಕಳುಹಿಸುತ್ತದೆ. ಪ್ರಕರಣಗಳನ್ನು ಹಿಂಪಡೆಯಲು ಕೆಲವು ಪೂರ್ವಭಾವಿ ಷರತ್ತುಗಳಿವೆ ಎಂದು ಪೀಠ ಹೇಳಿದೆ.

ಬಿಜೆಪಿ ನಾಯಕರ ಪರ ಹಾಜರಿದ್ದ ವಕೀಲರು ಸಾರ್ವಜನಿಕ ಹಿತಾಸಕ್ತಿಯ ಪ್ರತಿಭಟನೆಗಳಿಂದಾಗಿ ಪ್ರಕರಣಗಳನ್ನು ದಾಖಲಿಸಲಾಗಿದೆ, ಇವುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು. ಸಂಸದರು ಮತ್ತು ಶಾಸಕರು ನೇರವಾಗಿ ರದ್ದತಿಗಾಗಿ ಹೈಕೋರ್ಟ್‌ಗೆ ಬರಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ವಕೀಲರಿಗೆ ಸೂಚೆನೆ ನೀಡಿದೆ. ಸಂಪುಟ ಉಪಸಮಿತಿಯ ಶಿಫಾರಸುಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಪ್ರಾದೇಶಿಕ ಸಮಿತಿಗಳಿಗೆ ಮತ್ತು ಪ್ರಾಸಿಕ್ಯೂಟರ್‌ಗಳಿಗೆ ಕಳುಹಿಸಲಾಗುತ್ತದೆ. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಪ್ರಾಸಿಕ್ಯೂಟರ್‌ಗಳ ಸೂಕ್ತವಾಗಿ ಅವುಗಳನ್ನು ಪರಿಶೀಲನೆ ನಡೆಸಿದ ಬಳಿಕ, ಸರ್ಕಾರ ಹೈಕೋರ್ಟ್‌ನಲ್ಲಿ ಅರ್ಜಿಗಳನ್ನು ಹಿಂಪಡೆಯಲು ಅರ್ಜಿಯನ್ನು ಸಲ್ಲಿಸುತ್ತದೆ ಮತ್ತು ಹೈಕೋರ್ಟ್‌ನ ವಾಪಸಾತಿ ಆದೇಶಗಳನ್ನು ಆಯಾ ನ್ಯಾಯಾಲಯಗಳಿಗೆ ಕಳುಹಿಸಲಾಗುತ್ತದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net