

ಕೇರಳ: ಕೆ. ಹೇಮಾ ಸಮಿತಿ ವರದಿ ಬಿಡುಗಡೆಯಾದ ಬಳಿಕ ಅನೇಕ ಸ್ಟಾರ್ ನಟಿಯರು ತಮಗಾದ ಕಾಸ್ಟಿಂಗ್ ಕೌಚ್ ಅನುಭವಗಳ ಬಗ್ಗೆ ಮುಕ್ತವಾಗಿ ಕ್ಯಾಮರಾ ಮುಂದೆ ಮಾತನಾಡಿದರು. ಚಿತ್ರರಂಗದಲ್ಲಿ ಯಾರಿಂದ ತಾವು ಇಂತಹ ಕೆಟ್ಟ ಪರಿಸ್ಥಿತಿ ಎದುರಿಸಿದೆವು ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಚಿತ್ರರಂಗದ ಕರಾಳ ಮುಖವನ್ನು ಬಟಾಬಯಲು ಮಾಡ್ತಿದರು. ಒಬ್ಬರಲ್ಲ, ಇಬ್ಬರಲ್ಲ ಹಲವು ನಟಿಮಣಿಯರು ಚಿತ್ರರಂಗದ ಕಹಿಸತ್ಯವನ್ನು ಈಗಾಗಲೇ ಬಿಚ್ಚಿಟ್ಟಿದ್ದು, ಕಷ್ಟಕರ ಪರಿಸ್ಥಿತಿ ನೆನೆದು ಕಣ್ಣೀರಿಟ್ಟರು. ಈ ಸಮಯದಲ್ಲಿ ಇಂತಹದ್ದೇ ಕೆಟ್ಟ ಅನುಭವಗಳು ನನಗೂ ಆಗಿದೆ ಎಂದು ಧ್ವನಿ ಎತ್ತಿದ್ದ ಮಲಯಾಳಂ ನಟಿ ಮಿನು ಮುನೀರ್ (Minu Muneer), ಹಲವು ನಟರು ಮತ್ತು ನಿರ್ದೇಶಕರ (Director) ಕುರಿತು ಸ್ಫೋಟಕ ಸಂಗತಿಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದರು. ಸದ್ಯ ಸಾಲು ಸಾಲು ಆರೋಪಗಳು ಕಡಿಮೆಯಾಗಿವೆ, ದೂರುಗಳು ಹೆಚ್ಚಾಗಿ ಸದ್ದು ಮಾಡುತ್ತಿಲ್ಲ ಎಂದು ಭಾವಿಸಿದ ಚಿತ್ರರಂಗದವರಿಗೆ ಇದೀಗ ಮತ್ತೊಂದು ಶಾಕಿಂಗ್ ವಿಚಾರ ಹೊರಬಿದ್ದಿದೆ.
ಅಂದು ಹೇಮಾ ಕಮಿಟಿ ವರದಿ ಹೊರಬಿದ್ದ ಬಳಿಕ ನಟರು ಮತ್ತು ನಿರ್ದೇಶಕರ ವಿರುದ್ಧ ಗಂಭೀರ ಆರೋಪ ಎಸಗಿದ್ದ ಮಲಯಾಳಂ ಚಿತ್ರರಂಗದ ಹೆಸರಾಂತ ಹಿರಿಯ ನಟಿ ಮಿನು ಮುನೀರ್, ಇದೀಗ ಮತ್ತೊಂದು ಸ್ಫೋಟಕ ಸಂಗತಿಯನ್ನು ಬಾಯ್ಬಿಡುವ ಮೂಲಕ ಮಾಲಿವುಡ್ ನಿರ್ದೇಶಕನ ವಿರುದ್ಧ ದೊಡ್ಡ ಆರೋಪ ಹೊರಿಸಿದ್ದಾರೆ. ಮತ್ತೊಮ್ಮೆ ಲೈಂಗಿಕ ದೌರ್ಜನ್ಯ ವಿಚಾರಕ್ಕೆ ಸಂಬಂಧಿಸಿದಂತೆ ಧ್ವನಿ ಎತ್ತಿರುವ ಮಿನು, ಇದೀಗ ಮಾಲಿವುಡ್ನಲ್ಲಿ ತಮ್ಮ ಹೇಳಿಕೆಯಿಂದಲೇ ಹೊಸ ಸಂಚಲನ ಸೃಷ್ಟಿಸಿದ್ದಾರೆ. ನಿರ್ದೇಶಕ ಬಾಲಚಂದ್ರ ಮೆನನ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮುನೀರ್ ಆರೋಪಿಸಿದ್ದಾರೆ.
ಫೇಸ್ ಬುಕ್ ಪೋಸ್ನಲ್ಲಿ ತನಗಾದ ಸಂಕಷ್ಟವನ್ನು ಹಂಚಿಕೊಂಡಿದ್ದ ನಟಿ, "2007ರಲ್ಲಿ ನಿರ್ದೇಶಕ ಬಾಲಚಂದ್ರ ತನ್ನ ರೂಮ್ನಲ್ಲಿ ನನಗೆ ಅಶ್ಲೀಲ ಚಲನಚಿತ್ರಗಳನ್ನು ನೋಡುವಂತೆ ಒತ್ತಾಯಿಸಿದರು. ಅಸಲಿಗೆ ಆ ಕೊಠಡಿನಲ್ಲಿ ಕೆಲವು ಪುರುಷರು ಮತ್ತು ಮೂವರು ಹುಡುಗಿಯರಿದ್ದರು. ಅದನ್ನು ನೋಡಲಾರದೆ ನಾನು ಹೊರಗೆ ಎದ್ದುಬಂದೆ. ಇಷ್ಟಾದರೂ ಮಾತ್ರ ಬಾಲಚಂದ್ರನ್ ನನ್ನನ್ನು ಕುಳಿತು ವೀಕ್ಷಿಸುವಂತೆ ಒತ್ತಾಯಿಸಿದರು" ಎಂದು ಮುನೀರ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಎನ್ಡಿಎ ಪರೀಕ್ಷೆಯಲ್ಲಿ ಉತ್ತೀರ್ಣ
"ಈ ಹಿಂದೆ ಫೇಸ್‌ಬುಕ್ ಮೂಲಕ ತಮ್ಮ ಕಷ್ಟಗಳನ್ನು ಹಂಚಿಕೊಂಡಿದ್ದೆ. ಆಗ ನನಗೆ ನ್ಯಾಯ ಸಿಗಲಿಲ್ಲ. 2013ರಲ್ಲಿ ಒಂದು ಪ್ರಾಜೆಕ್ಟ್ನಲ್ಲಿ ಕೆಲಸ ಮಾಡುತ್ತಿದ್ದಾಗ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಲಾಗಿತ್ತು. ಇದರಿಂದಲೇ ನಾನು ಮಲಯಾಳಂ ಇಂಡಸ್ಟ್ರಿ ತೊರೆಯಬೇಕಾಯಿತು. ಈಗ ಚೆನ್ನೈಗೆ ಶಿಫ್ಟ್ ಆಗಿದ್ದೇನೆ" ಎಂದು ಬಹಿರಂಗವಾಗಿ ಸಂದರ್ಶನವೊಂದರಲ್ಲಿ ತಾವು ಅನುಭವಿಸಿದ ಕಹಿ ಘಟನೆಗಳನ್ನು ನೆನೆದು ಭಾವುಕರಾಗಿದ್ದಾರೆ,(ಏಜೆನ್ಸೀಸ್).