ನಿರುದ್ಯೋಗಿಗಳ ಪರಿಗಣಿಸಿ

student
ಹೂವಿನಹಡಗಲಿಯಲ್ಲಿ ಶಿರಸ್ತೇದಾರ್ ಮಲೇಶಪ್ಪ ಮೇಟಿಗೆ ಯುವಜನ ಫೆಡರೇಷನ್ ತಾಲೂಕು ಘಟಕ ಮನವಿ ಸಲ್ಲಿಸಿತು. ಫೆಡರೇಷನ್ ತಾಲೂಕು ಸಂಚಾಲಕ ಪ್ರಜ್ವಲ್, ಪ್ರಮುಖರಾದ ಹಲಗಿ ಸುರೇಶ್, ಮುಕುಂದಗೌಡ, ಹೇಮಂತ್ ಇತರರಿದ್ದರು.
Published on

ಹೂವಿನಹಡಗಲಿ: ಯುವನಿಧಿ ಯೋಜನೆಗೆ ಐದು ವರ್ಷಗಳ ಹಿಂದೆ ಪದವಿ ಮುಗಿಸಿದವರನ್ನೂ ಪರಿಗಣಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಯುವಜನ ಫೆಡರೇಷನ್ ತಾಲೂಕು ಘಟಕ ಶನಿವಾರ ಪಟ್ಟಣದ ತಹಸಿಲ್ ಕಚೇರಿಯಲ್ಲಿ ಶಿರಸ್ತೇದಾರ್ ಮಲೇಶಪ್ಪ ಮೇಟಿಗೆ ಮನವಿ ಸಲ್ಲಿಸಿತು

ರಾಜ್ಯ ಸರ್ಕಾರದ ಯುವನಿಧಿ ಯೋಜನೆಗೆ ಪ್ರಸಕ್ತ ವರ್ಷ ಪದವಿ ಪೂರ್ಣಗೊಳಿಸಿದವರಿಗೆ ಮಾತ್ರ ಪರಿಗಣಿಸಲು ಮುಂದಾಗಿರುವುದು ನ್ಯಾಯಸಮ್ಮತವಾಗಿಲ್ಲ. ಕಳೆದ ಮೂರು, ನಾಲ್ಕು ವರ್ಷಗಳ ಹಿಂದೆ ಕೋವಿಡ್ ಕಾರಣದಿಂದ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದವರು ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ.

ರಾಜ್ಯದ ಯುವಜನರ ಸಮಗ್ರ ಅಭಿವೃದ್ಧಿಯ ಕಾರಣಕ್ಕಾಗಿ ಕನಿಷ್ಠ 5 ವರ್ಷಗಳ ಹಿಂದಿನ ಅವಧಿಯಲ್ಲಿ ಶಿಕ್ಷಣ ಪೂರೈಸಿದವರಿಗೂ ಯೋಜನೆಯ ಫಲಾನುಭವಿಗಳಾಗುವಂತಹ ಅವಕಾಶ ಕಲ್ಪಿಸಿಕೊಡಬೇಕು. ರಾಜ್ಯದಲ್ಲಿ ಹಿಂದಿನ ಸರ್ಕಾರ ತರಾತುರಿಯಲ್ಲಿ ಜಾರಿಗೆ ತಂದಿರುವ ಅವೈಜ್ಞಾನಿಕ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ರದ್ದುಪಡಿಸಬೇಕು. ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಅರ್ಜಿ ಶುಲ್ಕ ಕಡಿಮೆ ಗೊಳಿಸಬೇಕು ಎಂದು ಒತ್ತಾಯಿಸಿದರು.

ಎಐಟಿಯುಸಿ ಸಂಚಾಲಕ ಹಲಗಿ ಸುರೇಶ್, ಕಿಸಾನ್‌ಸಭಾ ತಾಲೂಕು ಅಧ್ಯಕ್ಷ ಮುಕುಂದಗೌಡ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಜಂಗ್ಲಿಸಾಬ್, ಯುವಜನ ಫೆಡರೇಷನ್ ತಾಲೂಕು ಸಂಚಾಲಕ ಪ್ರಜ್ವಲ್, ಸದಸ್ಯರಾದ ಹೇಮಂತ್, ರಾಜೇಂದ್ರನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net