ಯುವ ವಿಚ್ಛೇದನ ಅರ್ಜಿ ಕೌನ್ಸಲಿಂಗ್‌ಗೆ

Yuva Sridevi
Published on

ಬೆಂಗಳೂರು: ಡಾ. ರಾಜ್‌ಕುಮಾರ್ ಮೊಮ್ಮಗ ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಬೈರಪ್ಪ ವಿಚ್ಛೇದನ ಅರ್ಜಿಯನ್ನು ಕೌನ್ಸಲಿಂಗ್‌ಗೆ ವರ್ಗಾವಣೆ ಮಾಡಿ ಕೌಟುಂಬಿಕ ನ್ಯಾಯಾಲಯ ಆದೇಶಿಸಿದೆ.

ವಿಚ್ಛೇದನ ಕೋರಿ ಯುವ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಗುರುವಾರ ನ್ಯಾಯಾಲಯ ಕೈಗೆತ್ತಿಕೊಂಡಿತ್ತು.

ವಿಚ್ಛೇದನ ಅರ್ಜಿಗೆ ಶ್ರೀದೇವಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿ ವಾದ ಮಂಡಿಸಲು ಅವಕಾಶ ಕೋರಿದರು. ಆಕ್ಷೇಪಣೆಗೆ ಸಮ್ಮತಿಸಿದ ನ್ಯಾಯಾಧೀಶರು, ಕೌಟುಂಬಿಕ ಕಲಹವಾದ್ದರಿಂದ ಮೊದಲು ಕೌನ್ಸಲಿಂಗ್ ಆಗಬೇಕು. ಅದು ಮುಕ್ತಾಯವಾದ ಬಳಿಕವಷ್ಟೆ ಆಕ್ಷೇಪಣೆ ಕೇಳಲಾಗುತ್ತದೆ. ಆದ್ದರಿಂದ ಈ ಅರ್ಜಿಯನ್ನು ಮೀಡಿಯೇಷನ್‌ಗೆ ವರ್ಗಾವಣೆ ಮಾಡಲಾಗಿದೆ. ಆನಂತರ ಇಬ್ಬರ ವಾದ- ಪ್ರತಿವಾದ ಆಲಿಸಲಾಗುತ್ತದೆ ಎಂದು ತಿಳಿಸಿದ್ದು, ಅರ್ಜಿ ವಿಚಾರಣೆಯನ್ನು ಆಗಸ್ಟ್ 23ಕ್ಕೆ ಮುಂದೂಡಿದೆ.

ಇದೀಗ ಯುವ ಮತ್ತು ಶ್ರೀದೇವಿಯನ್ನು ಮೀಡಿಯೇಷನ್‌ಗೆ ಕರೆದು ಇಬ್ಬರಿಗೆ ತಜ್ಞರ ಮೂಲಕ ಕೌನ್ಸಲಿಂಗ್ ನಡೆಸಲಾಗುತ್ತದೆ. ಒಂದು ವೇಳೆ ಇಲ್ಲಿ ಒಟ್ಟಿಗೆ ಇರಲು ಬಯಸಿದರೆ ಕೋರ್ಟ್ ಅನುಮತಿ ನೀಡಲಿದೆ. ವಿಚ್ಛೇದನವೇ ಬೇಕೆಂದು ನಿರ್ಧರಿಸಿದರೆ ವಿಚಾರಣೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net