

ಬೆಂಗಳೂರು : ಮದುವೆ ಆಮಿಷವೊಡ್ಡಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಎ್ಟಿಎಸ್‌ಸಿ 3ನೇ ನ್ಯಾಯಾಲಯ ತೀರ್ಪು ನೀಡಿದೆ.
ಹೊಸಕೆರೆಹಳ್ಳಿ ಮೂಕಾಂಬಿಕಾನಗರ ನಿವಾಸಿ ಎನ್.ಬಿ. ದಿಲೀಪ್ ಕುಮಾರ್ ಶಿಕ್ಷೆಗೆ ಒಳಗಾದ ಅಪರಾಧಿ. 2021ರಲ್ಲಿ ಅಪರಾಧಿ ಸಹೋದರನ ಮಗುವನ್ನು ಆಟವಾಡಿಸಲು ಸಂತ್ರಸ್ತೆ ಬರುತ್ತಿದ್ದಳು. ಆಕೆಯನ್ನು ಪರಿಚಯ ಮಾಡಿಕೊಂಡ ದಿಲೀಪ್, ಮದುವೆ ಆಗುವುದಾಗಿ ಪುಸಲಾಯಿಸಿದ್ದ.
2021ರ ಡಿಸೆಂಬರ್ 15ರ ರಾತ್ರಿ 9.30ರಲ್ಲಿ ಬಾಲಕಿ, ದೇವಸ್ಥಾನದಲ್ಲಿ ಊಟ ಮಾಡಿಕೊಂಡು ಮನೆಗೆ ಹೋಗುತ್ತಿದ್ದಾಗ ದಿಲೀಪ್ ಅಡ್ಡಗಟ್ಟಿದ್ದಾನೆ.
ಅಲ್ಲಿಂದ ಆಕೆಯನ್ನು ಅಪಹರಣ ಮಾಡಿಕೊಂಡು ತಡರಾತ್ರಿ 1 ಗಂಟೆ ವರೆಗೂ ಆಟೋದಲ್ಲಿ ಸುತ್ತಾಡಿಸಿ ಬನಶಂಕರಿ ರಸ್ತೆ ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡ ಗಿರಿನಗರ ಪೊಲೀಸರು, ದಿಲೀಪ್‌ನನ್ನು ಬಂಧಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಗೀತಾ ರಾಮಕೃಷ್ಣ ಗೊರವರ, ಸಂತ್ರಸ್ತೆ ಪರವಾಗಿ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಇಷ್ರತ್ ಜಹಾನ್ ಅರ ಅವರು, ದಿಲೀಪ್ ಅಪರಾಧಿ ಎಂದು ನೀಡಿ 10 ವರ್ಷ ಜೈಲು ಶಿಕ್ಷೆ ಮತ್ತು 30 ಸಾವಿರ ರೂ. ದಂಡ ವಿಧಿಸಿದರು. ನೊಂದ ಬಾಲಕಿಗೆ 4 ಲಕ್ಷ ರೂ. ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ.