ಬಿಹಾರಕ್ಕೆ ಮುಸ್ಲಿಂ ಡಿಸಿಎಂ!

Tejashwi Yadav 1
Published on

ಪಟನಾ: ಬಿಹಾರದ ಚುನಾವಣೆ ಹಿನ್ನೆಲೆಯಲ್ಲಿ ವಿಪಕ್ಷಗಳ ಮಹಾಘಟಬಂಧನದ ಆರ್​ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ಬೆನ್ನಿಗೆ ರಾಜ್ಯದಲ್ಲಿ ಅವರು ಚುರುಕಿನ ಪ್ರಚಾರ ಕೈಗೊಂಡಿದ್ದಾರೆ. ಈ ಮಧ್ಯೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಿತೀಶ್ ಕುಮಾರ್ ನೇತೃತ್ವದ ಎನ್​ಡಿಎ ಸರ್ಕಾರ ಸಾರ್ವಜನಿಕರ ವಿಶ್ವಾಸ ಕಳೆದುಕೊಂಡಿದ್ದು, ಬಿಹಾರ ಬದಲಾವಣೆಗೆ ಸಜ್ಜಾಗಿದೆ ಎಂದಿದ್ದಾರೆ.

ವಿಕಾಸಶೀಲ ಇನ್ಸಾನ್ ಪಕ್ಷದ ಮುಕೇಶ್ ಸಹಾನಿ ಡಿಸಿಎಂ ಅಭ್ಯರ್ಥಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ದೊಡ್ಡ ಪ್ರಮಾಣದ ಜನಸಂಖ್ಯೆಯನ್ನು ಪ್ರತಿನಿಧಿಸಲು ಯಾಕೆ ಮುಸ್ಲಿಂ ಡಿಸಿಎಂ ಅಭ್ಯರ್ಥಿ ಆಗಬಾರದು?’ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ ಎಂದಿದ್ದಾರೆ. ಹಾಗಾದರೆ, ಮುಸ್ಲಿಂ ಡಿಸಿಎಂ ಅಭ್ಯರ್ಥಿ ಆಗಿರಲಿದ್ದಾರೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಸಾಧ್ಯತೆಯನ್ನೂ ನಾವು ತಳ್ಳಿಹಾಕುತ್ತಿಲ್ಲ. ಕಾದು ನೋಡೋಣ, ಯಾವ ಸಮುದಾಯದವರೂ ಡಿಸಿಎಂ ಆಗಬಹುದು ಎನ್ನುವ ಮೂಲಕ ಮುಸ್ಲಿಂ ವ್ಯಕ್ತಿಯೂ ಡಿಸಿಎಂ ಆಗಬಹುದು ಎನ್ನುವ ಸುಳಿವು ನೀಡಿದ್ದಾರೆ. ಆರ್​ಜೆಡಿ ಹಾಗೂ ಕಾಂಗ್ರೆಸ್ ಸೇರಿ ಏಳು ಪಕ್ಷಗಳು ಒಗ್ಗೂಡಿ ವಿಪಕ್ಷಗಳ ಮಹಾಘಟಬಂಧನ ರಚಿಸಿಕೊಂಡಿವೆ. ಇವು ಅಧಿಕಾರದಲ್ಲಿರುವ ಜೆಡಿಯು-ಬಿಜೆಪಿ ಮೈತ್ರಿಕೂಟದ ಎನ್​ಡಿಎಗೆ ಸವಾಲು ಹಾಕುತ್ತಿವೆ. ಬಿಹಾರದಲ್ಲಿ ನ.6 ಮತ್ತು ನ.11ರಂದು ಮತದಾನ ನಡೆಯಲಿದ್ದು, ನ.14ರಂದು ಫಲಿತಾಂಶ ಪ್ರಕಟವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net