

ಕೆಲಸದಾಕೆ ಸೆರಗಲ್ಲಿ ಗಂಟು ಕಟ್ಟಿ ತಂದಿದ್ದ ಎಲ್ಲಾ ಆಹಾರ ಪದಾರ್ಥಗಳನ್ನು ಮನೆಯವರೆಲ್ಲರಿಗೂ ಹಂಚುತ್ತಾಳೆ. ಮನೆಯವರೆಲ್ಲ ಎಲ್ಲವನ್ನೂ ಸೇವಿಸು ತ್ತಾರೆ. ‘ನಿನ್ನ ಯಜಮಾನರ ಮನೆಯವರು ಎಷ್ಟೊಂದು ಒಳ್ಳೆಯವರು, ದಿನಾ ನಮಗೆ ರುಚಿರುಚಿ ಯಾದ ಆಹಾರ ಪದಾರ್ಥಗಳನ್ನು ನಿನ್ನ ಮೂಲಕ ಕಳುಹಿಸುತ್ತಿದ್ದಾರೆ’ ಎಂದು ಹಾಡಿ ಹೊಗಳುತ್ತಾರೆ. ‘ದೇವರು ಅವರನ್ನು ಚೆನ್ನಾಗಿ ಇಡಲಿ’ ಎಂದು ಹರಸುತ್ತಾರೆ. ಈ ವಿಡಿಯೋ ನೋಡಿದ ಮನೆಯವರ ಕಣ್ಣುಗಳು ತೇವಗೊಳ್ಳುತ್ತವೆ. ಏಕೆ ಹೀಗೆ ಮಾಡಿದೆ ಎಂದು ಕೇಳಲಾಗಿ ಆ ಕೆಲಸದವಳು ಹೇಳುತ್ತಾಳೆ: ‘ನಾವು ಬಡವರು. ಇಂತಹ ಸ್ವಾದಿಷ್ಟ
ಆಹಾರವನ್ನು ತಯಾರಿಸುವ ಸಾಮರ್ಥ್ಯ ನಮಗೆ ಇಲ್ಲ. ಮೇಲಾಗಿ ನೀವು ಕೈಯಲ್ಲಿ ಮುಟ್ಟದೆ ಬರೇ ಎರಡು ಮೂರು ಚಮಚೆಗಳಷ್ಟು ತಿಂದು, ಬಿಡುವ ಆಹಾರ ನಮ್ಮ ಪಾಲಿಗೆ ಎಂಜಲು ಅಲ್ಲ;ನಿಮ್ಮ ಕೃಪೆ, ದೇವರ ಕೊಡುಗೆ’.
ಮರುದಿನ ಕೆಲಸದಾಕೆ ಬರುತ್ತಿದ್ದಂತೆ ಆಕೆಗೆ ಮನೆಯವರು ತಿನ್ನದೇ ಉಳಿದಿರುವ ಎಂಜಲನ್ನು ಕಸದ ಡಬ್ಬಿಗೆ ಸುರಿಯುವಂತೆ ಹಾಗೂ ಅವರ ಮನೆಯವರಿಗೂ ಬೇಕಾಗುವಷ್ಟು ಊಟವನ್ನು ತಯಾರಿಸುವಂತೆ ಮನೆಯ ಯಜಮಾನಿ ಆದೇಶಿಸುತ್ತಾಳೆ. ಮಾತ್ರವೇ ಅಲ್ಲ, ಇನ್ನು ಮುಂದೆ ಈ ಮನೆಯಲ್ಲಿ ಯಾರೂ ಆಹಾರವನ್ನು ಪೋಲು ಮಾಡುವಂತಿಲ್ಲ ಎಂಬ ಕಟ್ಟುನಿಟ್ಟಾದ ಸೂಚನೆಯನ್ನು ಮನೆಯವರಿಗೆಲ್ಲಾ ನೀಡುತ್ತಾಳೆ. ಹಾಗೂ ಕೆಲಸದಾಕೆಗೆ ತನ್ನ ಮನೆಯವರಿಗೆ ಬೇಕಾಗುವಷ್ಟು ಆಹಾರವನ್ನು ತೆಗೆದುಕೊಂಡು ಹೋಗುವಂತೆ ಸೂಚಿಸುತ್ತಾಳೆ.
ಹೌದು, ನಾವು ದುಡಿದು ಗಳಿಸಿದ ಅನ್ನವನ್ನು ಉಣ್ಣುವ ಹಕ್ಕು ನಮಗಿದೆ. ಆದರೆ ಅದನ್ನು ಪೋಲು ಮಾಡುವ ಹಕ್ಕು ನಮಗಿಲ್ಲ. ಅದು ಬಡವರ ಪಾಲು. ಆಹಾರದ ಪೋಲು ಒಂದು ಸಾಮಾಜಿಕ ಅಪರಾಧ! ಮೇಲಾಗಿ ಯಾರಾದರೂ ತಾಳಲಾರದ ಹಸಿವನ್ನು ಹಿಂಗಿಸಿಕೊಳ್ಳಲು ಊಟ ತಿಂಡಿಗಳನ್ನು ಕದ್ದರೆ ಅಂತಹವರನ್ನು ಹೊಡೆಯಬಾರದು, ಶಿಕ್ಷಿಸಬಾರದು. ಅದು ಮಾನವೀಯತೆಯಲ್ಲ; ತಾಳಲಾರದ ಹಸಿವಿನ ಎದುರು ಯಾರೂ ಸತ್ಯವಂತರಲ್ಲ; ಸಭ್ಯರಲ್ಲ!