More

    IPL 2024; ಪ್ಲೇಆಫ್​ಗೇರುವ ನಾಲ್ಕು ತಂಡಗಳನ್ನು ಹೆಸರಿಸಿದ ಜಂಬೋ

    ಬೆಂಗಳೂರು: ರಂಗು ರಂಗಿನ ಮಿಲಿಯನ್​ ಡಾಲರ್ ಟೂರ್ನಿ ಆರಂಭಗೊಂಡು ಇಂದಿಗೆ 11 ದಿನಗಳಾಗಿದ್ದು, ಈವರೆಗೆ 13 ಪಂದ್ಯಗಳು ನಡೆದಿವೆ. ಮೊದಲ ವಾರದಲ್ಲೇ ತವರು ಮೈದಾನದಲ್ಲಿ ಬಹುತೇಕ ತಂಡಗಳು ಜಯ ಗಳಿಸಿದ್ದು, ಮುಂಬೈ ಇಂಡಿಯನ್ಸ್​ ಹೊರತುಪಡಿಸಿ ಉಳಿದ ತಂಡಗಳು ಜಯದ ಖಾತೆ ತೆರೆಯುವಲ್ಲಿ ಸಫಲವಾಗಿವೆ.

    ಇತ್ತ ತಂಡಗಳ ಪ್ರದರ್ಶನವನ್ನು ಆಧರಿಸಿ ಟೀಮ್​ ಇಂಡಿಯಾ ಮಾಜಿ ಜಂಬೋ ಎಂದೇ ಹೆಸರುವಾಸಿಯಾಗಿರುವ ಸ್ಪಿನ್​ ದಿಗ್ಗಜ ಅನಿಲ್​ ಕುಂಬ್ಳೆ ಪ್ಲೇ ಆಫ್​ಗೇರುವ ನಾಲ್ಕು ತಂಡಗಳನ್ನು ಹೆಸರಿಸಿದ್ದು, ಈ ಬಾರಿ ಪ್ಲೇಆಫ್ ಹಂತಕ್ಕೇರುವ 4 ತಂಡಗಳಾವುವು ಎಂಬುದನ್ನು ತಿಳಿಸಿದ್ದಾರೆ.

    ಖಾಸಗಿ ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಜಂಬೋ ರಾಜಸ್ಥಾನ ರಾಯಲ್ಸ್ ಈ ಬಾರಿ ಪ್ಲೇಆಫ್​ಗೇರುವುದು ಖಚಿತ ಎಂದು ಹೇಳಿದ್ಧಾರೆ. ಉತ್ತಮ ಸಮತೋಲನದಿಂದ ರಾಜಸ್ಥಾನ ರಾಯಲ್ಸ್​ ಕೂಡಿದ್ದು, ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ ಪ್ರವೇಶಿಸುವುದು ಖಚಿತ ಎಂದಿದ್ದಾರೆ.

    ಇನ್ನು ಟೂರ್ನಿ ಆರಂಭಗೊಂಡರೂ ಗೆಲುವಿನ ಖಾತೆ ತೆರೆಯುವಲ್ಲಿ ವಿಫಲವಾಗಿರುವ ಮುಂಬೈ ಇಂಡಿಯನ್ಸ್​ ತಂಡವು ಈ ಬಾರಿ ಖಚಿತವಾಗಿ ಪ್ಲೇಆಫ್​ಗೇರುತ್ತದೆ. ಈ ಹಿಂದೆ ಕೂಡ ಆರಂಭಿಕ ಪಂದ್ಯಗಳಲ್ಲಿ ಸೋತು, ಆ ಬಳಿಕ ಕಂಬ್ಯಾಕ್ ಮಾಡಿದ ಇತಿಹಾಸ ಹೊಂದಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಸಹ ಪ್ಲೇಆಫ್ ಹಂತಕ್ಕೇರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

    IPL 2024

    ಇದನ್ನೂ ಓದಿ: ಜನ್ಮದಿನದಂದು ‘ಗರ್ಲ್​​ಫ್ರೆಂಡ್’​ ಕಡೆಯಿಂದ ರಶ್ಮಿಕಾಗೆ ಸಿಗಲಿದೆ ವಿಶೇಷ ಗಿಫ್ಟ್​

    ಶ್ರೇಯಸ್​ ಅಯ್ಯರ್​ ನಾಯಕತ್ವದಲ್ಲಿ ಕಲ್ಕತ್ತಾ ನೈಟ್​ರೈಡರ್ಸ್​​ ಪರ ಆ್ಯಂಡ್ರೆ ರಸೆಲ್, ಸುನಿಲ್ ನರೈನ್​, ರಿಂಕು ಸಿಂಗ್ ಸೇರಿದಂತೆ ಆಟಗಾರರು ಆಲ್ರೌಂಡ್​ ಪ್ರದರ್ಶನ ನೀಡುತ್ತಿದ್ದು, ಕಲ್ಕತ್ತಾ ನೈಟ್​ರೈಡರ್ಸ್​ ಕೂಡ ಈ ಬಾರಿ ಖಚಿತವಾಗಿ ಪ್ಲೇಆಫ್​ ಪ್ರವೇಶಿಸುತ್ತದೆ ಎಂದು ಹೇಳಿದ್ದಾರೆ.

    ಇನ್ನು ಪ್ಲೇಆಫ್ ಹಂತಕ್ಕೇರುವ ನಾಲ್ಕನೇ ತಂಡವಾಗಿ ಅನಿಲ್ ಕುಂಬ್ಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹೆಸರಿಸಿದ್ದಾರೆ. ಆರ್​ಸಿಬಿ ಕಳೆದ ಎರಡು ಸೀಸನ್​ಗಳಿಂದ ನಾಕೌಟ್ ಹಂತಕ್ಕೇರಿದೆ. ಈ ಬಾರಿ ಕೂಡ ಆರ್​ಸಿಬಿ ಉತ್ತಮ ತಂಡವನ್ನು ಹೊಂದಿದ್ದು, ಹೀಗಾಗಿ ಪ್ಲೇಆಫ್ ಹಂತಕ್ಕೇರುವುದನ್ನು ನಿರೀಕ್ಷಿಸಬಹುದು ಎಂದು ಅನಿಲ್​ ಕುಂಬ್ಳೆ ಹೇಳಿದ್ದಾರೆ.

    ಅನಿಲ್ ಕುಂಬ್ಳೆ ಪ್ರಕಾರ, ರಾಜಸ್ಥಾನ್ ರಾಯಲ್ಸ್, ಮುಂಬೈ ಇಂಡಿಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ ಪ್ರವೇಶಿಸುವುದು ಖಚಿತ. ಅದರಂತೆ ಈ ನಾಲ್ಕು ತಂಡಗಳು ಪ್ಲೇಆಫ್ ಹಂತಕ್ಕೇರಲಿದೆಯಾ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts