ಜನ್ಮದಿನದಂದು 'ಗರ್ಲ್​​ಫ್ರೆಂಡ್'​ ಕಡೆಯಿಂದ ರಶ್ಮಿಕಾಗೆ ಸಿಗಲಿದೆ ವಿಶೇಷ ಗಿಫ್ಟ್​

Rashmika
Published on

ಬೆಂಗಳೂರು: ಕಳೆದ ವರ್ಷಾಂತ್ಯದಲ್ಲಿ ತೆರೆಕಂಡು ಬಾಕ್ಸ್​ಆಫೀಸ್​ನಲ್ಲಿ ಭರ್ಜರಿ ಕಮಾಯಿ ಮಾಡಿದ್ದ ಅನಿಮಲ್​ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಸ್ಟಾರ್​ ನಟರ ಜತೆ ತೆರೆ ಹಂಚಿಕೊಂಡು ಯಶಸ್ಸಿನ ಉತ್ತುಂಗದಲ್ಲಿ ಇರುವ ಅವರು ಈಗ ಪುಷ್ಪ-2, ಕುಬೇರ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸ್ಟಾರ್​ ನಟರ ಸಿನಿಮಾಗಳ ಜೊತೆಗೆ ರಶ್ಮಿಕಾ ಮಂದಣ್ಣ ಸೋಲೋ ಸಿನಿಮಾ ಬಗ್ಗೆ ಗಮನ ಹರಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಇದರ ನಡುವೆಯೇ ರಶ್ಮಿಕಾ ಮಂದಣ್ಣ ಅವರ ಜನ್ಮದಿನ ಸಮೀಪಿಸಿದೆ. ಏಪ್ರಿಲ್​ 05ರಂದು ಅವರು ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಅದಕ್ಕೆ ಪೂರಕವೆಂಬಂತೆ ಗರ್ಲ್​ಫ್ರೆಂಡ್​ ಕಡೆಯುಂದ ವಿಶೇಷ ಉಡುಗೊರೆ ಸಿಗಲಿದೆ ಎಂದು ತಿಳಿದು ಬಂದಿದೆ.

ರಶ್ಮಿಕಾ ಅವರ ಜನ್ಮದಿನದ ಪ್ರಯುಕ್ತ ಗರ್ಲ್​​ಫ್ರೆಂಡ್​ ಚಿತ್ರತಂಡದ ವತಿಯಿಂದ ವಿಶೇಷ ಪೋಸ್ಟರ್​ ಒಂದು ಟೀಸರ್​ ಬಿಡುಗಡೆಯಾಗುತ್ತಿದ್ದು, ಇದಕ್ಕಾಗಿ ರಶ್ಮಿಕಾ ಮಲಯಾಳಂ ಡಬ್ಬಿಂಗ್​ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ವಿಶೇಷ ಎಂದರೆ ಈ ಚಿತ್ರ ಪ್ಯಾನ್​ ಇಂಡಿಯಾ ಸಿನಿಮಾ ಆಗಿದ್ದು, ದಕ್ಷಿಣದ ಎಲ್ಲ ಭಾಷೆಗಳಿಗೆ ಡಬ್​ ಆಗಿ ಬಿಡುಗಡೆ ಆಗಲಿದೆ.

ಇನ್ನು ರಶ್ಮಿಕಾ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿಗಳು ಭರ್ಜರಿ ಸಿದ್ಧತೆ ನಡೆಸಿದ್ದು, ತಮ್ಮ ನೆಚ್ಚಿನ ನಟಿಗೆ ಶುಭಕೋರಲು ಭರ್ಜರಿ ತಯಾರಿ ನಡೆಸಿದ್ದಾರೆ.  ರಶ್ಮಿಕಾ ಮಂದಣ್ಣ ಅವರನ್ನು ಭೇಟಿಯಾಗಿ ಹುಟ್ಟುಹಬ್ಬದ ಶುಭಾಶಯ ಕೋರಬೇಕು ಎಂಬುದು ಅಭಿಮಾನಿಗಳ ಆಸೆ. ಆದರೆ ಅದು ಈಡೇರುವುದು ಕಷ್ಟ. ಯಾಕೆಂದರೆ, ಅಂದು ರಶ್ಮಿಕಾ ಮಂದಣ್ಣ ಅವರು ಭಾರತದಲ್ಲಿ ಇರುವುದಿಲ್ಲ ಎನ್ನಲಾಗುತ್ತಿದೆ. ಸಣ್ಣ ಬ್ರೇಕ್​ ಪಡೆದು ಅವರು ವಿದೇಶಕ್ಕೆ ಹಾರಲಿದ್ದಾರೆ ಎಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಅವರು ಸಿನಿಮಾದ ಟೀಸರ್​ಅನ್ನು ಹಂಚಿಕೊಳ್ಳಲಿದ್ದು, ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net