ಅವಕಾಶ ಕೊಡದೇ ಇದ್ದರೂ ಬೇಸರ ಇಲ್ಲ... ಆದರೆ ಹೆಸರು ಬದಲಿಸುವುದಿಲ್ಲ: ನಟ ದರ್ಶನ್

Darshan
Published on

ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​, ಬಾಕ್ಸ್​​ಆಫೀಸ್​ ಸುಲ್ತಾನ, ಅಭಿಮಾನಿಗಳ ಒಡೆಯ ಎಂದೇ ಖ್ಯಾತಿ ಪಡೆದಿರುವ ನಟ ದರ್ಶನ್​ ತೂಗುದೀಪ ಅವರಿಗೆ ದೊಡ್ಡ ಫ್ಯಾನ್​ ಬೇಸ್​ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೆಸರಿನ ಅನೇಕ ಫ್ಯಾನ್ಪೇಜ್​ಗಳಿದ್ದು, ಆಗಿಂದಾಗೆ ಅವರ ಫೋಟೋ ಹಾಗೂ ವಿಡಿಯೋಗಳು ವೈರಲ್​ ಆಗುತ್ತಿರುತ್ತವೆ. ಅದಕ್ಕೆ ಪೂರಕವೆಂಬಂತೆ ಈಗ ದರ್ಶನ್​ ಅವರ ಸಂದರ್ಶನದ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

ಸ್ಟಾರ್​ನಟನ ಪುತ್ರನಾಗಿದ್ದರು ದರ್ಶನ್​ ಅವರು ಒಂದು ಕಾಲದಲ್ಲಿ ಲೈಟ್​ಬಾಯ್​ ಆಗಿ ಕೆಲಸ ಮಾಡಿದ್ದರು. ದಿನ ಕಳೆದಂತೆ ಚಿತ್ರ ಹಾಗೂ ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುವ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿದ ದರ್ಶನ್​ ಅವರು ಹೀರೋ ಆಗಿ ನಟಿಸಿದ ಮೊದಲ ಸಿನಿಮಾದಲ್ಲೇ ಗೆಲುವು ದಕ್ಕಿತ್ತು. ಇದಾದ ಬಳಿಕ ಅವರನ್ನು ಆಫರ್​ಗಳು ಹುಡುಕಿಕೊಂಡು ಬರಲು ಶುರು ಮಾಡಿದವು. ಈ ಅವಧಿಯಲ್ಲಿ ಅವರಿಗೆ ಬಂದ ಸಿನಿಮಾ ಆಫರ್ ಬಗ್ಗೆ ದರ್ಶನ್ ಮಾತನಾಡಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಯಾವುದೋ ಸಿನಿಮಾಗಾಗಿ ಓರ್ವ ದೊಡ್ಡ ಡೈರೆಕ್ಟರ್​ನ ಭೇಟಿ ಮಾಡೋಕೆ ಹೋಗಿದ್ದೆ. ಆಗ ವಿಲನ್ ಪಾತ್ರ ಮಾಡುತ್ತಿದ್ದೆ. ಮಾತುಕತೆ ವೇಳೆ ನಿರ್ದೇಶಕರು ಸಿನಿಮಾ ಮಾಡೋಕೆ ಒಪ್ಪಿದ್ದರು. ಆದರೆ, ಹೆಸರು ಚೆನ್ನಾಗಿಲ್ಲ. ಹೆಸರು ಚೇಂಜ್ ಮಾಡೋಣ ಎಂದರು. ದೊಡ್ಡ ಡೈರೆಕ್ಟರ್ ಆದರೂ ನಾನು ಮಾತನಾಡಲೇಬೇಕು ಎಂದುಕೊಂಡೆ.

ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ಅವಕಾಶ ಕೊಡದೇ ಇದ್ದರೂ ಬೇಸರ ಇಲ್ಲ. ಕೊಟ್ರೆ ಬಂದು ಮಾಡ್ತೀನಿ. ಇದು ಅಪ್ಪ ಅಮ್ಮ ಇಟ್ಟ ಹೆಸರು. ಅದನ್ನೇ ಮುಂದುವರಿಸಿಕೊಂಡು ಹೋಗುತ್ತೇನೆ. ನೀವು ಕೊಟ್ಟ ಕ್ಯಾರೆಕ್ಟರ್​ಗಾಗಿ ಹೆಸರು ಬದಲಿಸಿಕೊಳ್ಳುವುದಿಲ್ಲ. ಧನ್ಯವಾದ ಹೇಳಿ ಬಂದೆ. ಆ ಬಳಿಕ ಆ ಸಿನಿಮಾನ ಬಿಟ್ಟೆ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಕಳೆದ ವರ್ಷಾಂತ್ಯದಲ್ಲಿ ತೆರೆಕಂಡ ದರ್ಶನ್​ ಅಭಿನಯದ ಕಾಟೇರ ಚಿತ್ರವು ಬಾಕ್ಸ್​ಆಫೀಸ್​ನಲ್ಲಿ 200 ಕೋಟಿ ರೂಪಾಯಿ ಕಮಾಯಿ ಮಾಡುವಲ್ಲಿ ಯಶಸ್ವಿಯಾಯಿತು. ಸದ್ಯ ಡೆವಿಲ್​ ಚಿತ್ರೀಕರಣದಲ್ಲಿ ಬ್ಯುಸಿ ಇರುವ ನಟ ದರ್ಶನ್​ ಆ ಬಳಿಕ ಜೋಗಿ ಪ್ರೇಮ್​ ನಿರ್ದೇಶನದ ಚಿತ್ರದಲ್ಲಿ ಬ್ಯುಸಿಯಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net