

PM Kisan Instalment: ಕೇಂದ್ರ ಸರ್ಕಾರ ರೈತರಿಗೆಂದೇ ಜಾರಿಗೊಳಿಸಿರುವ ಪಿಎಂ ಕಿಸಾನ್ ಯೋಜನೆಯ 20ನೇ ಕಂತು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಪಿಎಂ ಕಿಸಾನ್ ಫಲಾನುಭವಿ ರೈತರು ಈಗ 2 ಸಾವಿರ ರೂ. ಪಡೆಯಲು ಅರ್ಹರಿದ್ದಾರೆಯೇ ಎಂಬುದನ್ನು ತಿಳಿಯಲು ಮೊದಲು ಕೆಲವು ಹಂತಗಳನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ, ಪಿಎಂ ಕಿಸಾನ್ ಹಣ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ.
ಪಿಎಂ ಕಿಸಾನ್ ಯೋಜನೆಯ ನಿಯಮಗಳ ಪ್ರಕಾರ, ಮೊದಲ ಕಂತು ಏಪ್ರಿಲ್-ಜುಲೈ, ಎರಡನೇ ಕಂತು ಆಗಸ್ಟ್-ನವೆಂಬರ್ ಮತ್ತು ಮೂರನೇ ಕಂತನ್ನು ಡಿಸೆಂಬರ್-ಮಾರ್ಚ್ ನಡುವೆ ಬಿಡುಗಡೆಗೊಳಿಸಲಾಗುತ್ತದೆ. ಪಿಎಂ ಕಿಸಾನ್ನ 20ನೇ ಕಂತನ್ನು ಈ ವರ್ಷದ ಜೂನ್-ಜುಲೈ ನಡುವೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಯೋಜನೆಯ ಹಣ ವಿತರಣೆ ದಿನಾಂಕ ಮುಂದಿನ ತಿಂಗಳು ಘೋಷಣೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಅಥವಾ ಯಾವುದೇ ಸಮಸ್ಯೆ ಇದ್ದಲ್ಲಿ, ನೀಡಲಾದ ಇಮೇಲ್ ಐಡಿ (pmkisan-ict@gov.in), ಸಹಾಯವಾಣಿ ಸಂಖ್ಯೆಗೆ 155261 ಅಥವಾ 1800115526 (ಟೋಲ್-ಫ್ರೀ) 011-2338109 ಕರೆ ಮಾಡಬಹುದು.
ನಿಮ್ಮ ಹತ್ತಿರದ ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಿ ಅಗತ್ಯವಿರುವ ಅರ್ಜಿ ನಮೂನೆಯನ್ನು ಪಡೆಯಿರಿ. ಸೂಚನೆಗಳ ಪ್ರಕಾರ ಅಗತ್ಯ ದಾಖಲೆಗಳನ್ನು ಸಲ್ಲಿಸಿ. ಇದರಲ್ಲಿ ಪಿಎಂ ಕಿಸಾನ್ ನೋಂದಣಿ ಸಂಖ್ಯೆ ಮತ್ತು ಕೃಷಿ ಸಂಬಂಧಿತ ದಾಖಲೆಗಳು ಒಳಗೊಂಡಿರಬಹುದು. ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಆಯ್ಕೆ ಮಾಡಲಾಗುತ್ತದೆ. ನಿಮ್ಮ ಅರ್ಜಿ ಅನುಮೋದನೆಗೊಂಡರೆ, ಭೂಮಿ ಪರಿಶೀಲನೆಯೂ ಪೂರ್ಣಗೊಂಡಿದೆ ಎಂದರ್ಥ.
ರೈತರು ತಮ್ಮ ಬ್ಯಾಂಕ್ ಖಾತೆಯಲ್ಲಿ ಎನ್‌ಪಿಸಿಐ ಪಡೆಯಬೇಕು. ಎನ್‌ಪಿಸಿಐ ಲಿಂಕ್ ಮಾಡಲು, ಬ್ಯಾಂಕ್ ಪಾಸ್‌ಬುಕ್ ಮತ್ತು ಆಧಾರ್ ಕಾರ್ಡ್‌ನೊಂದಿಗೆ ಬ್ಯಾಂಕ್ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು. ಇದರಿಂದ ನಿಮ್ಮ ಪಿಎಂ ಕಿಸಾನ್ನ 2,000 ರೂ. ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.
ನೀವು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಬಳಿಕ ಗ್ರಾಮದಿಂದ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ನಿಮ್ಮ ಹೆಸರು ಈ ಪಟ್ಟಿಯಲ್ಲಿದ್ದರೆ, ನಿಮ್ಮ ಬ್ಯಾಂಕ್ ಖಾತೆಗೆ ಯೋಜನೆಯ 2 ಸಾವಿರ ಹಣ ಜಮಾ ಆಗಲಿದೆ,(ಏಜೆನ್ಸೀಸ್).