ಮಳೆಯಲ್ಲಿ ಒದ್ದೆಯಾಗುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದೇ? Monsoon health tips

Delhi Rain
Published on: 

Monsoon health tips : ಈ ಬಾರಿ ಮಳೆಗಾಲ ಬಹಳ ಬೇಗ ಆರಂಭವಾಗಿದೆ. ಮಳೆ ಅಂದ್ರೆ ಹಲವರಿಗೆ ಇಷ್ಟ.  ಅನೇಕ ಜನರು ಮಳೆಯ ನೀರಿನಲ್ಲಿ ನೆನೆಯುತ್ತಾ ಸಂತೋಷಪಡುತ್ತಾರೆ.  ಈ ರೀತಿ ಮಳೆನೀರಿನಲ್ಲಿ ಸ್ನಾನ ಮಾಡುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದೇ?  ಎನ್ನುವ ಪ್ರಶ್ನೆಗೆ ಆರೋಗ್ಯ ತಜ್ಞರು ಏನು ಹೇಳುತ್ತಾರೆಂದು ವಿವರವಾಗಿ ತಿಳಿದುಕೊಳ್ಳೋಣ.

ಮಳೆಯಲ್ಲಿ ಒದ್ದೆಯಾಗುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದು ನಮ್ಮ ಮನಸ್ಸಿಗೆ ಶಾಂತಿಯನ್ನು ತರುವುದಲ್ಲದೆ, ನಮ್ಮ ದೈಹಿಕ ಆರೋಗ್ಯವನ್ನು ಸಹ ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ.

ಮಳೆಯಲ್ಲಿ ಒದ್ದೆಯಾಗುವುದು ಬಹಳಷ್ಟು ಸಂತೋಷವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಇದು ದೇಹ ಮತ್ತು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ಇದು ಚರ್ಮದ ಮೇಲೆ ಸಂಗ್ರಹವಾಗಿರುವ  ಕೊಳೆಯನ್ನು ತೆಗೆದುಹಾಕುತ್ತದೆ.

ಮಳೆನೀರು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಿಶೇಷವಾಗಿ ಮಳೆನೀರಿನ pH ಮಟ್ಟ ಕಡಿಮೆ ಇರುವುದರಿಂದ, ಅದು ದೇಹದಲ್ಲಿ ಎಂಡಾರ್ಫಿನ್‌ಗಳು ಮತ್ತು ಸಿರೊಟೋನಿನ್ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇವು ಮನಸ್ಸು ಮತ್ತು ದೇಹಕ್ಕೆ ಸಂತೋಷವನ್ನು ತರುತ್ತವೆ ಎಂದು ಹೇಳಲಾಗುತ್ತದೆ. ಅದು ನಿಮಗೆ ತುಂಬಾ ಸಂತೋಷವನ್ನು ನೀಡುತ್ತದೆ.

ಮಳೆನೀರಿನಲ್ಲಿ ಸ್ನಾನ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ವ್ಯಕ್ತಿಯನ್ನು ಹೆಚ್ಚು ಕ್ರಿಯಾಶೀಲನನ್ನಾಗಿ ಮಾಡುತ್ತದೆ.

ಮಳೆನೀರಿನಿಂದ ಇಷ್ಟೆಲ್ಲಾ ಪ್ರಯೋಜನಗಳಿದ್ದರೂ, ದೀರ್ಘಕಾಲ ಮಳೆಯಲ್ಲಿ ಒದ್ದೆಯಾಗಿರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.