

Video Viral: ಏರ್ಪೋರ್ಟ್ನ ಶೌಚಾಲಯದಲ್ಲಿ ಒಂದು ಹನಿ ನೀರಿಲ್ಲ ಎಂದು ಪಾಕಿಸ್ತಾನಿ ನಟಿಯೊಬ್ಬರು ಹೇಳಿರುವ ವಿಡಿಯೋ ಇದೀಗ ಸೋಶಿಯಲ್ ಮಿಡೀಯಾದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನಿ ನಟಿ ಹಿನಾ ಬಯಾತ್ ಈ ವಿಡಿಯೋ ಹಂಚಿಕೊಂಡಿದ್ದು, ಕರಾಚಿ ವಿಮಾನ ನಿಲ್ದಾಣದ ಶೌಚಾಲಯದಲ್ಲಿರುವ ನಲ್ಲಿಗಳೆಲ್ಲಾ ಒಣಗಿ ಹೋಗಿದೆ. ವಿಮಾನ ನಿಲ್ದಾಣದಲ್ಲಿನ ಆತಂಕಕಾರಿ ಪರಿಸ್ಥಿತಿಯ ಬಗ್ಗೆ ಎಚ್ಚರಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅನೇಕರು ವ್ಯಂಗ್ಯವಾಡಿದ್ದಾರೆ.
ಈ ವಿಡಿಯೋದಲ್ಲಿ ನಟಿ ಹೀನಾ ಬಾಯತ್ ‘‘ ನಾನು ಕರಾಚಿ ಇಂಟರ್ನ್ಯಾಷನಲ್ ಏರ್ಪೋರ್ಟ್ನಲ್ಲಿದ್ದೇನೆ, ಇಂದು ನಾವು ಪಾಕಿಸ್ತಾನದ ಸಾಧನೆಗಳನ್ನು ಸೆಲೆಬ್ರೇಟ್ ಮಾಡಲೇ ಬೇಕಿದೆ. ಇಲ್ಲಿರುವ ಯಾವುದೇ ಶೌಚಾಲಯದಲ್ಲೂ ನೀರಿಲ್ಲ.ಜನರು ನಮಾಜ್ ಮಾಡಲು, ಮಕ್ಕಳನ್ನು ಕರೆದುಕೊಂಡು ವಾಶ್ರೂಮ್ಗೆ ಹೋಗುತ್ತಿದ್ದಾರೆ ಆದರೆ ಇಲ್ಲಿ ಒಂದು ಹನಿಯೂ ನೀರಿಲ್ಲ’’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ವಿಮಾನ ನಿಲ್ದಾಣಗಳು, ನಮ್ಮ ಸಂಸ್ಥೆಗಳು ಮತ್ತು ನಮ್ಮ ವ್ಯವಸ್ಥೆಗಳು ಏಕೆ ಈ ಮಟ್ಟಿಗೆ ಹದಗೆಟ್ಟಿವೆ? ಮತ್ತು ಇವು ಸರಿಪಡಿಸಬೇಕಾದ ತಪ್ಪುಗಳು ಎಂದು ಯಾರೂ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಹಲವು ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗುತ್ತಿದೆ, ಹೊಸ ರೈಲುಗಳನ್ನು ಚರ್ಚಿಸಲಾಗುತ್ತಿದೆ ಆದರೆ ಹಳೆಯ ವ್ಯವಸ್ಥೆಗಳು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಶೌಚಾಲಯಗಳಲ್ಲಿ ನೀರು ಇಲ್ಲದೆ ಇರುವ ಪರಿಸ್ಥಿತಿ ನಿಜಕ್ಕೂ ದುರದೃಷ್ಟಕರ ಎಂದು ಹೇಳಿದ್ದಾರೆ. (ಏಜೆನ್ಸೀಸ್)