ಕಂಬದಲ್ಲಿ ಹಗ್ಗ ಎಳೆದರೂ ಬಿಚ್ಚಿಕೊಳ್ಳದ ರಾಷ್ಟ್ರಧ್ವಜ.. ಮಿಂಚಿನಂತೆ ಬಂದ ಹಕ್ಕಿ ಮಾಡಿದ್ದಾದರೂ ಏನು?

flog
Published on

ತಿರುವನಂತಪುರಂ: ಸ್ವಾತಂತ್ರ್ಯ ದಿನದಂದು ಕೇರಳದ ಶಾಲೆಯೊಂದರಲ್ಲಿ ಅಪರೂಪ ಮತ್ತು ಅದ್ಭುತವೆನ್ನಬಹುದಾದ ಘಟನೆಯೊಂದು ನಡೆದಿದೆ. ರಾಷ್ಟ್ರ ಧ್ವಜಾರೋಹಣ ಮಾಡುವಾಗ ಕಂಬದ ತುದಿಯಲ್ಲಿ ಸಿಲುಕಿಕೊಂಡಿದ್ದು, ಶರವೇಗದಲ್ಲಿ ಹಾರಿಬಂದ ಪಕ್ಷಿಯೊಂದು ಹಾರಿಸಿ ಅಷ್ಟೇ ವೇಗದಲ್ಲಿ ಹಾರಿಹೋಗಿದೆ. ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿದೆ.

ಟ್ವಿಟ್ಟರ್​ನಲ್ಲಿ @ಶಿಲ್ಪಾ_ಸಿಎನ್​ ನಲ್ಲಿ ಹಂಚಿಕೊಳ್ಳಲಾಗಿರುವ ವೈರಲ್ ವಿಡಿಯೋದಲ್ಲಿ ಶಾಲೆಯೊಂದರಲ್ಲಿ ಶಿಕ್ಷಕರು ಮತ್ತು ಮಕ್ಕಳು ರಾಷ್ಟ್ರಧ್ವಜವನ್ನು ಹಾರಿಸುವಾಗ ಅದು ಮೇಲ್ಭಾಗದಲ್ಲಿ ಸಿಲುಕಿಕೊಂಡಿದೆ. ಎಷ್ಟೇ ಹಗ್ಗ ಎಳೆದರೂ ಬಾವುಟ ಬಿಚ್ಚಿಕೊಂಡಿಲ್ಲ. ಅಷ್ಟರಲ್ಲಿ ಅಲ್ಲಿಗೆ ಬಂದ ಹಕ್ಕಿಯೊಂದು ಧ್ವಜಾರೋಹಣ ಮಾಡಿ ತಕ್ಷಣ ಹಾರಿಹೋಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಕೆಲವೇ ಗಂಟೆಗಳಲ್ಲಿ 14 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಇನ್ನು ಈ ವೈರಲ್ ವಿಡಿಯೋವನ್ನು 51 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ವಿಡಿಯೋಗೆ ನೆಟಿಜನ್‌ಗಳು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ``ಇದು ಮಾಂತ್ರಿಕ'', ``ಇದೊಂದು ದೈವಿಕ ಘಟನೆ'', ``ಈ ಪ್ರಕೃತಿಯಲ್ಲಿ ಏನೋ ಅಡಗಿದೆ''. ಮನುಷ್ಯರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ``ಇದು ಸಂಭವಿಸುವ ಸಾಧ್ಯತೆ ಇದೆಯೇ? ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net