

ಸೊರಬ: ಏಳನೇ ವೇತನ ಆಯೋಗದಲ್ಲಿ ನಿವೃತ್ತ ನೌಕರರಿಗೆ ಆಗಿರುವ ಆರ್ಥಿಕ ನಷ್ಟ ಭರಿಸಬೇಕು ಮತ್ತು ಇದಕ್ಕಾಗಿ ಒಂದು ವಾರದೊಳಗೆ ದಿನಾಂಕ ನಿಗದಿಪಡಿಸಿ ನಮ್ಮ ವೇದಿಕೆ ಮುಖಂಡರು ಜತೆ ಚರ್ಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ತಾಲೂಕು ಶಾಖೆ ಪದಾಧಿಕಾರಿಗಳು ತಹಸೀಲ್ದಾರ್ ಮಂಜುಳಾ ಹೆಗಡಾಳ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
2022ರ ಜು.1ರಿಂದ 2024ರ ಜು.31ರ ಅವಧಿಯಲ್ಲಿ ನಿವೃತ್ತರಾದವರಿಗೆ ಆರ್ಥಿಕ ಸೌಲಭ್ಯ ನೀಡಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು. ಈ ಹಿಂದೆಯೂ ಹಲವು ಬಾರಿ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಇನ್ನಾದರೂ ನಿವೃತ್ತರ ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ಶಾಖೆ ಸಂಚಾಲಕ ಶಿವಾನಂದ ಪಾಣಿ, ಎಂ.ಆರ್.ಶಿವಪ್ಪ, ಯಶೋಧರ, ರಾಮಚಂದ್ರಪ್ಪ, ಮಂಜಪ್ಪ, ಕೆ.ಆರ್.ಶಿವಾನಂದಪ್ಪ, ಗಜೇಂದ್ರ, ಶೇಖರಪ್ಪ, ಲಕ್ಷ್ಮಣಪ್ಪ, ಮಹೇಶ್, ಸರೋಜಾ, ವಸುಧಾ, ಬಂಗಾರಪ್ಪ, ಮಲ್ಲೇಶಪ್ಪ, ರಾಧಮ್ಮ, ಕಸ್ತೂರಮ್ಮ, ಬಸವರಾಜಪ್ಪ, ವಿಜಯಾ, ಕುಸುಮಾ, ಮಂಜುಳಾ, ಕಾಮಾಕ್ಷಿ, ಯುವರಾಜ್, ಶೇಖರಪ್ಪ ಇತರರಿದ್ದರು.