ಮೈಸೂರು ಎಸ್​ಪಿ ಸೇರಿ ಐವರು ಐಪಿಎಸ್​ ಅಧಿಕಾರಿಗಳ ವರ್ಗಾವಣೆ

IPS
Published on

ಬೆಂಗಳೂರು: ಮೈಸೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಆರ್​.ಚೇತನ್​ ಸೇರಿ ಐವರು ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ಆರ್​.ಚೇತನ್​ ಅವರು ರಾಜ್ಯ ಗುಪ್ತಚರ ಇಲಾಖೆಯ ಬೆಂಗಳೂರು ಎಸ್​ಪಿಯಾಗಿ ವರ್ಗಾವಣೆ ಆಗಿದ್ದು, ಮೈಸೂರು ನೂತನ ಎಸ್​ಪಿ ಆಗಿ ಸೀಮಾ ಲಾಟ್ಕರ್​ ಅವರನ್ನು ನೇಮಕ ಮಾಡಲಾಗಿದೆ.

ಸಿಸಿಬಿ ಬೆಂಗಳೂರು ವಿಭಾಗದ ಎಐಜಿಪಿ ಆಗಿ ಶಿವಪ್ರಕಾಶ್ ದೇವರಾಜ್, ಕಾನೂನು ಸುವ್ಯವಸ್ಥೆ ವಿಭಾಗದ ಮೈಸೂರು ಡಿಸಿಪಿ ಆಗಿ ಎಂ. ಮುತ್ತುರಾಜ್, ಗದಗ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಆಗಿ ಬಾಬಾಸಾಬ್ ನೇಮೇಗೌಡ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net