ಸಖತ್ ಫಿಟ್ ಅಂಡ್ ಫೈನ್​ ಆಗಿದ್ದ ಅಣ್ಣಾಮಲೈ ಈಗ ಹೇಗಾಗಿದ್ದಾರೆ ನೋಡಿ..

Annamalai
Published on

ಬೆಂಗಳೂರು: ತಮಿಳುನಾಡು ಬಿಜೆಪಿ ಅಧ್ಯಕ್ಷ ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ. ಸಖತ್​ ಫಿಟ್​ ಆಗಿದ್ದ ಅಣ್ಣಾಮಲೈ ಅವರು ಇದೀಗ ಕೊಂಚ ದಪ್ಪವಾಗಿದ್ದಾರೆ. ಈ ಕುರಿತಾದ ವಿಡಿಯೋವೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ರಾಜಕೀಯಕ್ಕೆ ಬರುವ ಮೊದಲು ಕೆ. ಅಣ್ಣಾಮಲೈ ಅವರು ಐಪಿಎಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಅಣ್ಣಾಮಲೈ ಸರ್ಕಾರಿ ಅಧಿಕಾರಿಯಾಗಿದ್ದಾಗ ಫಿಟ್ನೆಸ್​ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ತಮ್ಮ ಆರೋಗ್ಯ ಹಾಗೂ ಫಿಟ್ನೆಸ್ ಮೂಲಕವಾಗಿ ಜನರ ಗಮನ ಸೆಳೆಯುತ್ತಿದ್ದ ಅಣ್ಣಾಮಲೈ ಅವರು ಗಡ್ಡ, ತಲೆಕೂದಲು ಬಿಟ್ಟು ಕೊಂಚ ದಪ್ಪವಾಗಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಂಡ ಅಣ್ಣಾಮಲೈ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

K Annamalai

ಅಣ್ಣಾಮಲೈ ಕೊಂಚ ದಪ್ಪವಾಗಿದ್ದಾರೆ!, ರಾಜಕಾರಣಿ ಅಂತೆ ಕಾಣಬೇಕು ಅಂದ್ರೆ ದಪ್ಪಾ ಆಗಬೇಕಾ? ಈಗ.. ಈಗ ರಾಜಕಾರಣಿ ಅಂತೆ ಕಾಣ್ತಾ ಇದ್ದೀರಾ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ. ಕೆಲವರಿಗಂತೂ ಇವರು ನಿಜ್ವಾಗಲೂ ಅಣ್ಣಾಮಲೈ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

ಸರ್ಕಾರಿ ಹುದ್ದೆಯಲ್ಲಿದ್ದಾಗ ತಮ್ಮ ಕರ್ತವ್ಯಕ್ಕೆ ಹೆಸರುವಾಸಿಯಾಗಿದ್ದ ಅಣ್ಣಾಮಲೈ ರಾಜಕೀಯಕ್ಕೆ ಬರುವ ಉದ್ದೇಶದಿಂದಾಗಿ ಸರ್ಕಾರಿ ಹುದ್ದೆಯನ್ನು ತೊರೆದು ಸಾಮಾಜಿಕ ಕಾರ್ಯಗಳತ್ತ ಮುಖ ಮಾಡಿದ್ದಾರೆ. ಬಿಜೆಪಿ ಪಕ್ಷವನ್ನು ಸೇರಿದ್ದಾರೆ.

2020ರ ಆಗಸ್ಟ್ 25ರಂದು ಅಣ್ಣಾಮಲೈ ಬಿಜೆಪಿ ಸೇರಿದರು. ಬಳಿಕ ಅವರನ್ನು ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. 1984ರ ಜೂನ್ 6ರಂದು ಕೆ. ಅಣ್ಣಾಮಲೈ ಕರೂರ ಜಿಲ್ಲೆಯಲ್ಲಿ ಜನಿಸಿದರು. ಅವರು ಕುಟುಂಬದವರು ಕೃಷಿಕರು. ಸರ್ಕಾರಿ ಹುದ್ದೆ ತೊರೆದ ಅಣ್ಣಾಮಲೈ ಇದೀಗ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net