More

    ಅಯೋಧ್ಯೆಯಲ್ಲಿ ಪ್ರಾರಂಭವಾಗಲಿದೆ ಕೆಎಫ್‌ಸಿ ಮಳಿಗೆ; ಷರತ್ತು ಅನ್ವಯ

    ಉತ್ತರಪ್ರದೇಶ: ಅಯೋಧ್ಯೆ ರಾಮ ಮಂದಿರ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗ್ತಿದೆ. ಅಯೋಧ್ಯೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊಟೇಲ್​​ ಹಾಗೂ ಆಹಾರ ಮಳಿಗೆಗಳು ತಲೆ ಎತ್ತುತ್ತಿವೆ.  ಚಿಕನ್​ಗೆ ಪ್ರಸಿದ್ಧಿಯಾಗಿರುವ ಕೆಎಫ್​​ಸಿ ಕೂಡಾ ತನ್ನ ಮಳಿಗೆಯನ್ನು ಪ್ರಾರಂಭಿಸಲಿದೆ ಎನ್ನುವ ಸುದ್ದಿಯಾಗಿದೆ.

    ಅಮೆರಿಕನ್ ಫಾಸ್ಟ್ ಫುಡ್ ಚೈನ್ ಕೆಂಟುಕಿ ಫ್ರೈಡ್ ಚಿಕನ್  ಅಯೋಧ್ಯೆಯಲ್ಲಿ ಶಾಖೆ ತೆರೆಯಲು ಆಸಕ್ತಿ ತೋರಿದೆ. ಕೆಎಫ್​​ಸಿ ಶಾಖೆ ತೆರೆಯಲು ಯಾವುದೇ ಸಮಸ್ಯೆ ಇಲ್ಲ. ಆದ್ರೆ ಒಂದು ಷರತ್ತನ್ನು ಅದು ಪಾಲಿಸಬೇಕಾಗುತ್ತದೆ. ಅಯೋಧ್ಯೆ ವ್ಯಾಪಾರಸ್ಥರಿಗೆ ಒಳ್ಳೆಯ ಆದಾಯ ತಂದುಕೊಂಡ್ತಿದೆ. ಡೊಮಿನೋಸ್, ಫಿಜ್ಜಾ ಹಟ್ ಕೂಡ ಇಲ್ಲಿ ತಲೆ ಎತ್ತಿದೆ.

    ವರದಿಗಳ ಪ್ರಕಾರ,  ಯುಎಸ್ ಮೂಲದ ಕೆಂಟುಕಿ ಫ್ರೈಡ್ ಚಿಕನ್ (ಕೆಎಫ್‌ಸಿ) ಕೋಳಿಗೆ ಪ್ರಸಿದ್ಧವಾಗಿದೆ. ಫಾಸ್ಟ್ ಫುಡ್ ದೈತ್ಯ ಸಸ್ಯಾಹಾರಿ ಆಯ್ಕೆಗಳನ್ನು ನೀಡಬೇಕು. ಪವಿತ್ರ ನಗರವನ್ನು ಪ್ರವೇಶಿಸಲು ಸ್ಥಳೀಯ ಆದ್ಯತೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಅಯೋಧ್ಯೆಯಲ್ಲಿ ಡೊಮಿನೊ ಯಶಸ್ಸಿನ ನಂತರ, ಹೊಸದಾಗಿ ನಿರ್ಮಿಸಲಾದ ರಾಮ ಮಂದಿರದ ಬಳಿ ಕೆಎಫ್‌ಸಿ ಮಳಿಗೆ ತೆರೆಯಲು ಅಧಿಕಾರಿಗಳು ಪರಿಗಣಿಸುತ್ತಾರೆ. ವಿಶೇಷವಾಗಿ ಸಸ್ಯಾಹಾರಿ ವಸ್ತುಗಳನ್ನು ಒಳಗೊಂಡಿರುವ ಮೆನು ಆಗಿರಬೇಕಾಗಿದೆ.

    ಪವಿತ್ರ ನಗರವಾಗಿರುವುದರಿಂದ ಅಯೋಧ್ಯೆಯಿಂದ 15 ಕಿಮೀ ಯಾತ್ರಾಸ್ಥಳದೊಳಗೆ ಮಾಂಸ ಮತ್ತು ಮದ್ಯ ಎರಡನ್ನೂ ನಿಷೇಧಿಸಲಾಗಿದೆ. ಇಲ್ಲಿರುವ ಯಾವುದೇ ಉಪಾಹಾರ ಗೃಹವು ಮಾಂಸವನ್ನು ನೀಡುವಂತಿಲ್ಲ. ನಿರ್ಬಂಧಿತ ಕ್ಷೇತ್ರದಿಂದ ಹೊರಗೆ ಮಾಂಸಹಾರವನ್ನು ಮಾರಾಟ ಮಾಡಬಹುದು. ಒಂದ್ವೇಳೆ ಈ ನಿರ್ಬಂಧಿತ ಪ್ರದೇಶದಲ್ಲಿ ಕೆಎಫ್ ಸಿ ತನ್ನ ಶಾಖೆ ಶುರು ಮಾಡುತ್ತಿದ್ದಲ್ಲಿ  ಅದು ತನ್ನ ಶಾಖೆಯಲ್ಲಿ ಮಾಂಸಹಾರ ನೀಡುವಂತಿಲ್ಲ. ಚಿಕನ್ ಗೆ ಫೇಮಸ್ ಆಗಿರುವ ಕೆಎಫ್ ಸಿ, ಅಯೋಧ್ಯೆ ಶಾಖೆಯಲ್ಲಿ ಚಿಕನ್ ಸೇರಿದಂತೆ ಯಾವುದೇ ಮಾಂಸಾಹಾರ ನೀಡುವಂತಿಲ್ಲ. ಸಸ್ಯಹಾರವನ್ನು ಮಾತ್ರ ಕೆಎಫ್ ಸಿ ಒದಗಿಸುತ್ತದೆ ಎಂದಾದ್ರೆ ನಾವು ಸ್ಥಳ ನೀಡಲು ಸಿದ್ಧರಿದ್ದೇವೆ ಎಂದು ಅಯೋಧ್ಯೆಯ ಸರ್ಕಾರಿ ಅಧಿಕಾರಿ ವಿಶಾಲ್ ಸಿಂಗ್ ಹೇಳಿದ್ದಾರೆ.

    ಪತ್ನಿಯ ಆಸೆ ಪೂರೈಸಲು ‘ಸೂಪರ್ ಕಳ್ಳ’ನಾದ ಪತಿ; ಈತ ಕದ್ದಿದ್ದು 111 ಬೈಕ್

    ಹಗಲಿನಲ್ಲಿ ಮಲಗಬೇಕಾ.. ಬೇಡವಾ? ಈ ಸುದ್ದಿ ಓದಿ ನಿರ್ಧಾರ ಮಾಡಿ… 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts