ಅಂಗಡಿಯೊಳಗೆ ನುಗ್ಗಿ ಮಾಲೀಕನಿಗೆ ಚಪ್ಪಲಿ ಏಟು ಕೊಟ್ಟ ಮಹಿಳೆಯರು! ಅಷ್ಟಕ್ಕೂ ಕಾರಣವೇನು?

wife
Published on

ಲಖನೌ: ಅಂಗಡಿಯೊಳಗೆ ನುಗ್ಗಿದ ಮಹಿಳೆಯರು ಅಂಗಡಿ ಮಾಲೀಕನಿಗೆ ಚಪ್ಪಲಿ ಏಟು ಕೊಟ್ಟಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್​ನಲ್ಲಿ ನಡೆದಿದೆ. ಈ ರೀತಿಯ ಹಲ್ಲೆ ನಡೆಸಿದವರು ಆತನ ಹೆಂಡತಿಯೇ ಎಂದು ಹೇಳಲಾಗಿದೆ.

ಫಿರೋಜಾಬಾದ್‌ನ ಶಿಕೋಹಾಬಾದ್ ನಗರದ ಅಂಗಡಿಯೊಳಗೆ ಇತ್ತೀಚೆಗೆ ಮಹಿಳೆಯರು ನುಗ್ಗಿ ಅಲ್ಲಿದ್ದ ಮಾಲೀಕನಿಗೆ ಸರಿಯಾಗಿ ಏಟು ಕೊಟ್ಟಿದ್ದಾರೆ. ಸುತ್ತ ಮುತ್ತಲಿನವರು ಅದನ್ನು ತಡೆದು ಪ್ರಶ್ನಿಸಿದಾಗ ಅದರಲ್ಲಿದ್ದ ಮಹಿಳೆ ತನ್ನ ಕಥೆಯನ್ನು ಹೇಳಿದ್ದಾಳೆ. 2012ರಲ್ಲೇ ನಮ್ಮಿಬ್ಬರ ಮದುವೆಯಾಗಿದೆ. ಆದರೆ 2013ರಲ್ಲಿ ಆತ ನನಗೆ ಸಾಕಷ್ಟು ಹಿಂಸೆ ಕೊಟ್ಟು ಮನೆಯಿಂದ ಹೊರ ಹಾಕಿದ. ನಮ್ಮಿಬ್ಬರ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಆದರೆ ಇದೀಗ ಈತ ಬೇರೊಂದು ಹಳ್ಳಿಗೆ ಹೋಗಿ ಮತ್ತೊಂದು ಮದುವೆ ಮಾಡಿಕೊಂಡು ಬಂದಿದ್ದಾನೆ ಎಂದು ಆಕೆ ದೂರಿದ್ದಾಳೆ.

ಆರೋಪಿ ಸ್ಥಾನದಲ್ಲಿರುವ ವ್ಯಕ್ತಿ ಮೇ 14ರಂದು ಮತ್ತೊಂದು ಮದುವೆಯಾಗಿರುವುದಾಗಿ ಹೇಳಲಾಗಿದೆ. ಮೊದಲನೇ ಹೆಂಡತಿ ಇರುವಾಗಲೇ, ಆಕೆಗೆ ಮೋಸ ಮಾಡಿದ ಎನ್ನುವ ಕಾರಣಕ್ಕೆ ಆತನ ಮೊದಲನೇ ಹೆಂಡತಿ ಸೇರಿ ಅನೇಕ ಮಹಿಳೆಯರು ಆತನಿಗೆ ಸರಿಯಾಗಿ ಏಟು ಕೊಟ್ಟಿದ್ದಾರೆ. ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಇಬ್ಬರನ್ನೂ ಕೂರಿಸಿ, ರಾಜಿ ಮಾಡುವುದಾಗಿ ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net