More

    ಪರಿಸರ ಮಾಲಿನ್ಯದಿಂದ ಗಂಡಸರಲ್ಲಿ ವೀರ್ಯಾಣು ಉತ್ಪತ್ತಿ ಪ್ರಮಾಣ ಕುಸಿತ!

    ಪರಿಸರ ಮಾಲಿನ್ಯದಿಂದ ಗಂಡಸರಲ್ಲಿ ವೀರ್ಯಾಣು ಉತ್ಪತ್ತಿ ಪ್ರಮಾಣ ಕುಸಿತ!ಹಾರ್ಮೋನ್‌ಗಳ ಪ್ರಭಾವದಿಂದ ಮುಗ್ಧತೆ ಕಡಿಮೆಯಾಗಿ ಕಾಮದ ಆಸೆಗಳು ಹೆಚ್ಚಾಗುತ್ತವೆ, ಅನೇಕ ತಪ್ಪುಗಳು ನಡೆಯುತ್ತವೆ. ಟೆಸ್ಟಾಸ್ಟೆರಾನ್ ಎಂಬ ರಾಜ ಮನಸ್ಸೆಂಬ ರಾಜ್ಯವನ್ನು ತನ್ನ ಹತೋಟಿಗೆ ತೆಗೆದುಕೊಂಡು ಮೋಹವೆಂಬ ಮಾಯೆಯ ಶಕ್ತಿಯಿಂದ ಆಳಲು ಆರಂಭಿಸುತ್ತಾನೆ. ಇದನ್ನೇ ವಯಸ್ಸಿನ ಪ್ರಭಾವ ಮೋಹ ಎಂದು ಕರೆಯುತ್ತೇವೆ.


    ಪ್ರತಿನಿತ್ಯ ಎರಡು ವೃಷಣಗಳಲ್ಲಿ ನೂರಾರು ಕೋಟಿ ವೀರ್ಯಾಣುಗಳು ಉತ್ಪತ್ತಿಯಾಗುತ್ತವೆ. ಒಂದು ಬಾರಿ ಸ್ಖಲನವಾದರೆ ಅಂದಾಜು ಇಪ್ಪತ್ತರಿಂದ ಮೂವತ್ತು ಕೋಟಿ ವೀರ್ಯಾಣುಗಳು ಹೊರಬರುತ್ತವೆ. ಅಷ್ಟರಲ್ಲಿ ಅಂದಾಜು ಇನ್ನೂರು ಬದುಕಿರುತ್ತವೆ. ಆ ಇನ್ನೂರರಲ್ಲಿ ಗಟ್ಟಿಮುಟ್ಟಾಗಿರುವ ಕೇವಲ ಒಂದು ವೀರ್ಯಾಣುವು ಸಂತಾನಕ್ರಿಯೆಯ ಸಂದರ್ಭದಲ್ಲಿ ಹೆಣ್ಣಿನ ಫೆಲೋಪಿಯನ್ ಟ್ಯೂಬ್ ಒಳಗೆ ಹೋಗಿ ಮುಂದಿನ ಒಂದು ಅಥವಾ ಎರಡು ದಿವಸದಲ್ಲಿ ಹೆಣ್ಣಿನ ಅಂಡಾಣುವಿನ ಜೊತೆಗೂಡುತ್ತದೆ.


    ಇಂದಿನ ಕಾಲದಲ್ಲಿ ವಿಪರೀತ ಪರಿಸರ ಮಾಲಿನ್ಯ ಮತ್ತು ಇತರ ಕಾರಣಗಳಿಂದ, ಕಳೆದ ಐವತ್ತು ವರ್ಷಗಳಿಂದ ಗಂಡಸರಲ್ಲಿ ವೀರ್ಯಾಣುಗಳ ಉತ್ಪತ್ತಿಯ ಪ್ರಮಾಣವು ಶೇಕಡ ಐವತ್ತರಷ್ಟು ಕಡಿಮೆಯಾಗಿದೆ. ವಯಸ್ಸು ಆದಂತೆ ಟೆಸ್ಟಾಸ್ಟೆರಾನ್ ಹಾರ್ಮೋನ್‌ಗಳ ಉತ್ಪತ್ತಿ ಕಡಿಮೆಯಾಗುತ್ತಾ ರೋಷ ಆವೇಷಗಳು ಕಡಿಮೆಯಾಗುತ್ತವೆ. ಬುದ್ಧಿವಂತಿಕೆ ಅಧ್ಯಾತ್ಮಿಕ ಚಿಂತನೆಗಳು ಮನಸ್ಸನ್ನು ಆಕ್ರಮಿಸಿ ಮೋಹವೆಂಬ ಮಾಯೆಯನ್ನು ಸೋಲಿಸಿ, ಜ್ಞಾನವೆಂಬ ವಿಚಾರಧಾರೆ ಹರಿಸಲು ಆರಂಭವಾಗಿ, ಮನಸ್ಸು ಪಕ್ವಗೊಳ್ಳುತ್ತದೆ. ಇದನ್ನೇ ತಲೆಮಾರಿನ ಅಂತರ (ಜೆನರೇಷನ್ ಗ್ಯಾಪ್) ಎಂದು ಕರೆಯುವುದು.

    ಬಲೆಗೆ ಬಿದ್ದ ಮೀನಿನ ಹೊಟ್ಟೆಯೊಳಗಿತ್ತು ಫುಲ್ ಬಾಟೆಲ್ ವಿಸ್ಕಿ! ಜಾಕ್​ಪಾಟ್ ಎಂದರೆ ಇದೇ ಎಂತಿದ್ದಾನೆ ಆತ

    ಮಗ ಎಂದುಕೊಂಡಿದ್ದವ ನನ್ನ ಚಿಕ್ಕಪ್ಪನಾದ! ಅಜ್ಜನ ಜತೆ ತನ್ನ ಗರ್ಲ್​ಫ್ರೆಂಡ್​ ಆಡುತ್ತಿದ್ದ ಆಟವನ್ನು ಬಿಚ್ಚಿಟ್ಟ ಯುವಕ!

    ವರ್ಜಿನಿಟಿ ಕಳೆದುಕೊಳ್ಳಲು ಸರಿಯಾದ ವಯಸ್ಸು ಯಾವುದು? ಅಮ್ಮನಿಗೇ ಪ್ರಶ್ನಿಸಿದ ಆಲಿಯಾ ಕಶ್ಯಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts