ಧಾಕಡ್ ಹೀನಾಯ ಸೋಲಿನ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಕಂಗನಾ!

Kangana
Published on

ಮುಂಬೈ: ತಮ್ಮ ವೃತ್ತಿ ಜೀವನದಲ್ಲೇ ಅತ್ಯಂತ ಕಳಪೆ ಪ್ರದರ್ಶನ ಕಂಡಿರುವ ಧಾಕಡ್​​ ಚಿತ್ರದ ಬಗ್ಗೆ ಮೊದಲ ಬಾರಿಗೆ ನಟಿ ಕಂಗನಾ ರನೌತ್ ಪ್ರತಿಕ್ರಿಯೆ ನೀಡಿದ್ದಾರೆ.

ಈವರೆಗೂ ನಟಿಸಿದ ಯಾವೊಂದು ಚಿತ್ರವೂ ಇಷ್ಟು ಕಳಪೆ ಪ್ರದರ್ಶನ ಕಂಡಿರಲಿಲ್ಲ. ಬಾಕ್ಸಾಫಿಸ್​​ನಲ್ಲಿ ಹೇಳ ಹೆಸರಿಲ್ಲದಂತಾಗಿರುವ ಧಾಕಡ್​ ಬಗ್ಗೆ ಕಂಗನಾ ಈ ರೀತಿ ಹೇಳಿಕೊಂಡಿದ್ದಾರೆ.

ಬಿಡುಗಡೆಯಾದಾಗಿನಿಂದ ಈವರೆಗೆ ಈ ಚಿತ್ರ ಕೇವಲ 4 ಕೋಟಿ ರೂ.ಮಾತ್ರ ಗಳಿಸಿದೆ. ಆದರೆ ಚಿತ್ರಕ್ಕೆ ವ್ಯಯಿಸಿರುವ ಹಣ ಬರೋಬ್ಬರಿ 95 ಕೋಟಿ ರೂ. ಆಗಿದೆ. ಇನ್ನು ಇಡೀ ದೇಶಾದ್ಯಂತ ಕೇವಲ 20 ಟಿಕೆಟ್ ಮಾತ್ರ ಖರೀದಿಯಾಗುವ ಮೂಲಕ ಇತ್ತೀಚೆಗೆ ಧಾಕಡ್​ ಸಿನಿಮಾ ಸುದ್ದಿಯಲ್ಲಿತ್ತು.

ಆದರೆ ಈ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ಕಂಗನಾ ಈ ವರ್ಷ ಇನ್ನೂ ಮುಗಿದಿಲ್ಲ, ನಾನಿನ್ನು ಭರವಸೆ ಹೊಂದಿದ್ದೇನೆ ಎಂದು ಹೇಳುವ ಮೂಲಕ ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

2019ರಲ್ಲಿ ಬಿಡುಗಡೆಯಾದ ಮಣಿಕರ್ಣಿಕಾ, ನಂತರ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಜೀವನಾಧಾರಿತ ತಲೈವಿ ಚಿತ್ರ ಭಾರೀ ಗಳಿಕೆಯನ್ನು ಕಂಡಿತ್ತು. ಈ ಮೂಲಕ ಬಾಕ್ಸಾಫೀಸ್​ ಕ್ವೀನ್​ ಎಂದೇ ಖ್ಯಾತಿಯಾಗಿದ್ದ ಕಂಗನಾ ಸಿನಿಮಾ ಈಗ ಹೀನಾಯ ಸೋಲು ಕಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net