More

    ಲಡಾಖ್​​ನಲ್ಲೂ ಟ್ರಾಫಿಕ್​ ರೂಲ್ಸ್​​ ಪಾಲಿಸದಿದ್ದರೆ ಬೀಳುತ್ತೆ ದಂಡ : ಈವರೆಗೆ 1.50 ಕೋಟಿ ರೂ. ಸಂಗ್ರಹ

    ಶ್ರೀನಗರ: ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಜಮ್ಮು ಮತ್ತು ಕಾಶ್ಮೀರದ ಲಡಾಖ್​ನಲ್ಲೂ ಟ್ರಾಫಿಕ್​ ನಿಯಮ ಮೀರಿದರೇ ದಂಡ ಪಾವತಿಸಬೇಕಾಗುತ್ತದೆ. ಈವರೆಗೆ ಬರೋಬ್ಬರಿ 1.50 ಕೋಟಿ ರೂ. ದಂಡ ಸಂಗ್ರಹವಾಗಿದೆ.

    ಕೇಂದ್ರಾಡಳಿತ ಪ್ರದೇಶ ಘೋಷಣೆಯಾದ ಬಳಿಕ ಇಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳವಾಗಿರುವುದರಿಂದ ರಸ್ತೆ ಸಂಚಾರ ನಿಯಮವನ್ನು ಇಲ್ಲಿಯೂ ಕಡ್ಡಾಯಗೊಳಿಸಲಾಗಿದೆ.

    ಈವರೆಗೆ ನಿಯಮ ಮೀರಿದ 721 ಮಂದಿಗೆ ಚಲನ್​ ನೀಡಲಾಗಿದ್ದು, 2,82,000 ರೂ. ಹಣದ ರೂಪದಲ್ಲಿ ಶುಲ್ಕ ಸಂಗ್ರಹಿಸಲಾಗಿದೆ ಎಂದು ಇಲ್ಲಿನ ಸಂಚಾರಿ ಪೊಲೀಸ್​ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಮೇ 28 ರಂದು ಇಲ್ಲಿ ಹೊಸ ನಿಯಮವನ್ನು ಜಾರಿಗೆ ತರಲಾಗಿದ್ದು, ಅತಿ ವೇಗದ ಚಾಲನೆ, ಅಪಾಯಕಾರಿ ಚಾಲನೆ, ಲೈಸೆನ್ಸ್​ ಇಲ್ಲದಿರುವುದು ಹಾಗೂ ಪಾರ್ಕಿಂಗ್​ ಸ್ಥಳದಲ್ಲಿ ವಾಹನ ನಿಲ್ಲಿಸದಿರುವುದು ಈ ಎಲ್ಲಾ ನಿಯಮ ಮೀರಿದವರಿಗೆ ಅತಿ ಹೆಚ್ಚು ದಂಡ ತೆರಬೇಕಾಗುತ್ತದೆ. (ಏಜೆನ್ಸೀಸ್​​) 

    ಬೆದರಿಕೆ ಪತ್ರ ಬೆನ್ನಲ್ಲೇ ಬಾಲಿವುಡ್​ ನಟ ಸಲ್ಮಾನ್​ಖಾನ್​​, ತಂದೆ ಸಲೀಂ ಖಾನ್​ಗೆ ಹೆಚ್ಚಾಯ್ತು ಭದ್ರತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts