More

    ಕೇರಳಕ್ಕೆ ಲಗ್ಗೆ ಇಟ್ಟಿದೆ ಮತ್ತೊಂದು ಸಾಂಕ್ರಾಮಿಕ ರೋಗ: ಈ ಹೊಸ ವೈರಸ್​ ಇಬ್ಬರು ವಿದ್ಯಾರ್ಥಿಗಳಲ್ಲಿ ದೃಢ

    ತಿರುವನಂತಪುರಂ: ದೇವರ ನಾಡು ಕೇರಳದಲ್ಲಿ ಹೊಸ ವೈರಸ್​ ಕಾಣಿಸಿಕೊಂಡಿದ್ದು, ಇಬ್ಬರು ವಿದ್ಯಾರ್ಥಿಗಳಲ್ಲಿ ಹೊಸ ಸೋಂಕು ಕಂಡುಬಂದಿರುವುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ.

    ತಿರುವನಂತಪುರಂನ ವಿಝಿಂಜಮ್​​ನಲ್ಲಿ 12 ವಿದ್ಯಾರ್ಥಿಗಳನ್ನು ಫುಡ್​ ಪಾಯ್ಸನ್​ ಆಗಿ, ಹೊಟ್ಟೆನೋವು, ವಾಂತಿ, ಬೇಧಿಯಿಂದ ಬಳಲುತ್ತಿದ್ದ ಈ ಇಬ್ಬರನ್ನು ತಪಾಸಣೆಗೊಳಪಡಿಸಲಾಗಿತ್ತು. ಈ ಪೈಕಿ ಇಬ್ಬರು ವಿದ್ಯಾರ್ಥಿಗಳಲ್ಲಿ ಈ ಸೋಂಕು ದೃಢವಾಗಿದೆ.

    ಸೋಮವಾರ ವರದಿ ಬಂದಿದ್ದು, ಇದರಲ್ಲಿ ನೊರೊವೈರಸ್​​​ ಇರುವುದು ಪತ್ತೆಯಾಗಿದೆ. ಇದೂ ಕೂಡ ಸಾಂಕ್ರಾಮಿಕ ರೋಗದ ವೈರಸ್​ಗಳೆಂದು ವೈದ್ಯರು ಹೇಳಿದ್ದಾರೆ.

    ಸದ್ಯ ಈ ಬಗ್ಗೆ ವರದಿ ನೀಡುವಂತೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್​​ ಸೂಚಿಸಿದ್ದು, ನಾಗರಿಕರು ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ.ಇದು ಸಾಂಕ್ರಾಮಿಕ ರೋಗವಾಗಿರುವುದರಿಂದ ಅತಿ ವೇಗವಾಗಿ ಹರಡುವ ಸಾಧ್ಯತೆ ಇದ್ದು, ಕೂಡಲೇ ಜನರು ಎಚ್ಚೆತ್ತುಕೊಂಡು ಸಹಕರಿಸಬೇಕೆಂದು ಅವರು ಹೇಳಿದ್ದಾರೆ. (ಏಜೆನ್ಸೀಸ್​)

    ಲಡಾಖ್​​ನಲ್ಲೂ ಟ್ರಾಫಿಕ್​ ರೂಲ್ಸ್​​ ಪಾಲಿಸದಿದ್ದರೆ ಬೀಳುತ್ತೆ ದಂಡ : ಈವರೆಗೆ 1.50 ಕೋಟಿ ರೂ. ಸಂಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts