ಒಂದೇ ಚಿತ್ರದಲ್ಲಿ 2 ಲಿಪ್​ಲಾಕ್: ನೋ ಕಿಸ್ಸಿಂಗ್ ನೀತಿಗೆ ಕಾಜೋಲ್​ ಬ್ರೇಕ್​, ವಿಡಿಯೋ ವೈರಲ್​

Actress Kajol
Published on

ಮುಂಬೈ: ಸಿನಿಮಾ ರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಕೆಲವೇ ಸಿನಿಮಾಗಳಲ್ಲಿ ಚುಂಬನದ ದೃಶ್ಯಗಳಲ್ಲಿ ನಟಿಸಿ, ಬಳಿಕ 23 ವರ್ಷಗಳ ಕಾಲ ಚುಂಬನದ ದೃಶ್ಯಗಳಿಂದ ಅಂತರ ಕಾಯ್ದುಕೊಂಡಿದ್ದ ನಟಿ ಕಾಜೋಲ್​, ಇದೀಗ ಲಿಪ್​ಲಾಕ್​ ದೃಶ್ಯದಲ್ಲಿ ನಟಿಸುವ ಮೂಲಕ ಬಾಲಿವುಡ್​ ಮಂದಿಯ ಹುಬ್ಬೇರಿಸಿದ್ದಾರೆ.

ಇತ್ತೀಚೆಗಷ್ಟೇ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಬಿಡಗಡೆಯಾಗಿರುವ "ದಿ ಟ್ರಯಲ್​" ಹೆಸರಿನ ವೆಬ್​ ಸರಣಿಯಲ್ಲಿ ಕಾಜೋಲ್​ ಲಿಪ್​ಲಾಕ್​ ದೃಶ್ಯದಲ್ಲಿ ನಟಿಸಿದ್ದು, 23 ವರ್ಷಗಳ ನೋ ಕಿಸ್ಸಿಂಗ್​ ಪಾಲಿಸಿಯನ್ನು ಇದೀಗ ಮುರಿದಿದ್ದಾರೆ.

ಈ ವೆಬ್​ ಸರಣಿಯಲ್ಲಿ ಕಾಜೋಲ್​ ವಕೀಲೆ ನೊಯೊನಿಕಾ ಸೆಂಗುಪ್ತ ಪಾತ್ರವನ್ನು ನಿರ್ವಹಿಸಿದ್ದಾರೆ. ಸಹ ಪಾತ್ರಧಾರಿಗಳಾದ ಅಲಿ ಖಾನ್ ಮತ್ತು ಜಿಶು ಸೆಂಗುಪ್ತ ಜತೆ ಎರಡು ವಿಭಿನ್ನ ಎಪಿಸೋಡ್​ಗಳಲ್ಲಿ ಲಿಪ್​ಲಾಕ್​ ದೃಶ್ಯಗಳಲ್ಲಿ ನಟಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಕೆಲವರು ಕಾಜೋಲ್ ಮತ್ತು ಸಹ-ನಟರ ನಡುವಿನ ಕೆಮಿಸ್ಟ್ರಿಯನ್ನು ಶ್ಲಾಘಿಸಿದ್ದಾರೆ.

ಈ ವೆಬ್​ ಸರಣಿಯಲ್ಲಿ ಕಾಜೋಲ್ ಹೆಂಡತಿ ಮತ್ತು ಇಬ್ಬರು ಮಕ್ಕಳ ತಾಯಿಯ ಪಾತ್ರವನ್ನು ನಿರ್ವಹಿಸಿದ್ದು, ಭಾವನಾತ್ಮಕ ಕ್ಷಣಗಳಲ್ಲಿ ನಡೆಯುವ ಎರಡು ಲಿಪ್-ಲಾಕ್ ದೃಶ್ಯಗಳು ಯಾವುದೇ ಮಿತಿಯನ್ನು ಮೀರದೆ, ಕತೆಗೆ ಪೂರಕವಾಗಿರುವುದರಿಂದ ಕಾಜೋಲ್​ ಅವರ ಪಾತ್ರದ ಬಗ್ಗೆ ಯಾವುದೇ ದ್ವೇಷ ಅಥವಾ ತಕಾರರು ಕಂಡುಬಂದಿಲ್ಲ.

ಅಂದಹಾಗೆ ಈ ವೆಬ್​ ಸರಣಿ ಅಮೆರಿಕದ ದಿ ಗುಡ್​ ವೈಫ್ ಸರಣಿಯ​ ರಿಮೇಕ್​ ಆಗಿದೆ. ಪತಿಯು ಭ್ರಷ್ಟಾಚಾರ ಮತ್ತು ಲೈಂಗಿಕ ಹಗರಣದಲ್ಲಿ ಜೈಲು ಪಾಲಾದ ನಂತರ ಗೃಹಿಣಿ ತನ್ನ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊರಲು ಒತ್ತಾಯಿಸುವ ಕತೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net