

IndiGo flight: ಅಹಮದಬಾದ್ನಿಂದ 60 ಪ್ರಯಾಣಿಕರನ್ನು ಡಿಯುಗೆ ಕರೆದೊಯ್ಯಲು ಸಿದ್ಧವಾಗಿದ್ದ ಇಂಡಿಗೋ ವಿಮಾನದ ಇಂಜಿನ್ವೊಂದರಲ್ಲಿ ಟೇಕಾಫ್ ಆಗುವ ಮುಂಚೆ ಬೆಂಕಿ ಕಾಣಿಸಿಕೊಂಡಿದೆ ಎಂದು ಬುಧವಾರ ವರದಿಯಾಗಿದೆ.
ವಿಮಾನ ಟೇಕಾಫ್ ಆಗುವ ಕೆಲವೇ ಕ್ಷಣಗಳ ಮೊದಲು ಈ ಘಟನೆ ಬೆಳಕಿಗೆ ಬಂದಿದ್ದು, ಪೈಲಟ್‌ಗಳು ಪ್ರಯಾಣವನ್ನು ಸ್ಥಗಿತಗೊಳಿಸಿ ಪ್ರಯಾಣಿಕರನ್ನು ತಕ್ಷಣವೇ ಇಳಿಸುವಂತೆ ಸೂಚಿಸಿದರು.
ವಿಮಾನವು ಟೇಕಾಫ್ ಆಗಲು ರನ್ವೇ ಇಂದ ಚಲಿಸಲು ಮುಂದಾದಾಗ ಪೈಲಟ್ ವಾಯು ಸಂಚಾರ ನಿಯಂತ್ರಣಕ್ಕೆ 'ಮೇಡೇ' ಕರೆ ಕಳುಹಿದ್ದಾರೆ ಎಂದು ವರದಿ ಉಲ್ಲೇಖಿಸಿದ್ದಾರೆ.
ಅಹಮದಾಬಾದ್ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 11 ಗಂಟೆಗೆ ನಿರ್ಗಮಿಸುವ ಮುನ್ನ ATR76 ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ತಾಂತ್ರಿಕ ದೋಷ ಕಂಡುಬಂದ ಕೂಡಲೇ ಪೈಲಟ್‌ಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ.
ಮೇಡೇ ಅರ್ಥವೇನು..?
ಮೇಡೇ ಎಂದ್ರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ ಒಂದು ಪದವಾಗಿದ್ದು, ಜೀವಕ್ಕೆ ಸಂಕಷ್ಟ ಬಂದಾಗ ಅಥವಾ ವಿಮಾನ ಬೃಹತ್ ಗಾತ್ರದ ಸಮಸ್ಯೆಯಲ್ಲಿ ಸಿಲುಕಿಕೊಂಡಾಗ ಈ ಕರೆ ಮಾಡಲಾಗುತ್ತದೆ. ಇದಕ್ಕೆ ಮೇಡೇ ತುರ್ತು ಕರೆ ಎನ್ನುತ್ತಾರೆ. ಮೇಡೇ ಎಂದ್ರೆ Help ಮಾಡಿ ಎಂದರ್ಥ.(ಏಜೆನ್ಸೀಸ್)