ವಿಜಯವಾಣಿ ಸುದ್ದಿಜಾಲ ಕೋಲಾರ
ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದ ವರ್ಗಾ ಆಟ್ಯಾಚ್ಮೆಂಟ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಒತ್ತಾಯಿಸಿ ಕಾರ್ಖಾನೆಯ ಕಾರ್ಮಿಕರು, ಸಿಐಟಿಯು ಮುಖಂಡರ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.
ಮಾಲೂರು ಕೈಗಾರಿಕಾ ಪ್ರದೇಶದ ವರ್ಗಾ ಆಟ್ಯಾಚ್ಮೆಂಟ್ ಕಾರ್ಖಾನೆಯಿಂದ ಬೈಕ್ ರ್ಯಾಲಿ ಮೂಲಕ ಜಿಲ್ಲಾಧಿಕಾರಿ ಕಛೇರಿಗೆ ಆಗಮಿಸಿದ ಕಾರ್ಮಿಕರು, ಕಾರ್ಖಾನೆ ಆಡಳಿತ ಮಂಡಳಿಯ ವಿರುದ್ದ ಘೋಷಣೆ ಕೂಗಿ ಮಾಲೀಕರ ಧೋರಣೆಯನ್ನು ಖಂಡಿಸಿದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ಹೆಚ್.ಎನ್ ಗೋಪಾಲಗೌಡ ಮಾತನಾಡಿ, ಸುಮಾರು ೨೦ ವರ್ಷದಿಂದ ಕಾರ್ಮಿಕರಾಗಿ ವರ್ಗಾ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಕಾರ್ಮಿಕರನ್ನು ಏಕಾಏಕಿ ಮಾಲೀಕ ವರ್ಗವು ಕೈಗಾರಿಕೆ ಮುಚ್ಚುವುದಾಗಿ ನೋಟೀಸ್ ನೀಡಿದ್ದು, ಇದರಿಂದಾಗಿ ಸುಮಾರು ೮೧ ಖಾಯಂ ಕಾರ್ಮಿಕರನ್ನು ಕೆಲಸದಿಂದ ಹೊರಹಾಕಲು ಮುಂದಾಗಿದ್ದು, ಇದು ಕಾರ್ಮಿಕ ವಿರೋಧಿ ನೀತಿಗಳಾಗಿದ್ದು, ಕೂಡಲೇ ಕಾರ್ಖಾನೆಯನ್ನು ಮುಚ್ಚುವ ಆದೇಶವನ್ನು ವಾಪಸ್ಸು ಪಡೆದು ಕಾರ್ಮಿಕರ ಹಿತ ಕಾಪಾಡುವಂತೆ ಮಾಲೀಕರನ್ನು ಒತ್ತಾಯಿಸಿದರು.
ಈ ಕೈಗಾರಿಕೆಯಲ್ಲಿ ಬುಲ್ಡೋಜರ್ಗೆ ಬೇಕಾಗುವ ವಿವಿಧ ಸಾಮಗ್ರಿಗಳನ್ನು ತಯಾರಿಸಿ ವಿದೇಶಕ್ಕೆ ಕಳಸಲಾಗುತ್ತದೆ. ಇದರಿಂದಾಗಿ ಲಾಭದಾಯಕವಾಗಿ ಕಂಪನಿ ನಡೆಯುತ್ತಿದ್ದರು, ಕಾರ್ಮಿಕರಿಗೆ ಯಾವುದೇ ರೀತಿಯಲ್ಲಿ ಸೌಲಭ್ಯಗಳನ್ನು ನೀಡಿಲ್ಲ. ಸಾಕಷ್ಟು ಬಾರಿ ಬೇಡಿಕೆಗಳಿಗೆ ಸಂಬAಧಿಸಿದAತೆ ಮನವಿ ಮಾಡಿದ್ದರೂ ಮಾಲೀಕರು ಮಾತ್ರ ಕಾರ್ಮಿಕರ ಹಿತಕಾಪಾಡಲಿಲ್ಲ. ಕಾರ್ಮಿಕರ ಮಧ್ಯೆ ಎಷ್ಟೋ ಬಾರಿ ಸಭೆಗಳು ಆಗಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಇಂದು ಏಕಾಏಕಿ ಕಾರ್ಖಾನೆಯನ್ನು ಮುಚ್ಚಲು ನಿರ್ಧರಿಸಿದ್ದಾರೆ ಎಂದು ಆರೋಪಿಸಿದರು.
ಅದೇ ರೀತಿಯಲ್ಲಿ ವರ್ಗ ಕಂಪನಿಯಿAದ ವೀರ್ಯಾ ಕಂಪನಿಗೆ ಆಡಳಿತ ಮಂಡಳಿಗೆ ಹೆಸರು ಬದಲಾವಣೆ ಮಾಡಲು ಹೊರಟಿದ್ದರು. ಇದರಿಂದಾಗಿ ಕಂಪನಿಯ ಹೆಸರಿನಿಂದ ಗೊಂದಲದಿAದಾಗಿ ಕಾರ್ಮಿಕರಿಗೆ ತೊಂದರೆಯಾಗಿದೆ. ಕೂಡಲೇ ಜಿಲ್ಲಾಧಿಕಾರಿ ಮಾಲೀಕ ವರ್ಗವನ್ನು ಕರೆಸಿ ವರ್ಗ ಕಾರ್ಖಾನೆಯಲ್ಲಿ ದುಡಿಯುತ್ತಿರುವ ಖಾಯಂ ಕಾರ್ಮಿಕರಿಗೆ ಕೈಗಾರಿಕೆಯಲ್ಲಿ ಕೆಲಸ ಮುಂದುವರೆಸುವAತೆ ಕ್ರಮ ವಹಿಸುವಂತೆ ಮನವಿ ಮಾಡಿದರು.
ಕಾರ್ಖಾನೆಯ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳಾದ ಪ್ರಭಾಕರ್, ಶ್ರೀಧರ, ಅಂಜನಪ್ಪ, ಅಶ್ವಥ್, ಸುರೇಶ್ ಕುಮಾರ್, ಹರೀಶ್, ಸಿಐಟಿಯು ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಪಿ.ಆರ್ ಸೂರ್ಯನಾರಾಯಣ, ವಿಜಯಕೃಷ್ಣ, ಹೆಚ್.ಬಿ ಕೃಷ್ಣಪ್ಪ, ಅಶೋಕ್, ಭೀಮರಾಜ್, ಚಲಪತಿ, ವೀರಭದ್ರ, ಶಿವಾನಂದ್, ವೆಂಕಟಪ್ಪ ಮುಂತಾದವರು ಇದ್ದರು.
ಚಿತ್ರ ೨೩ ಕೆ.ಎಲ್.ಆರ್. ೦೧ : ಮಾಲೂರು ಕೈಗಾರಿಕಾ ಪ್ರದೇಶದ ವರ್ಗಾ ಆಟ್ಯಾಚ್ಮೆಂಟ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಕಾರ್ಮಿಕರ ಮತ್ತು ಸಿಐಪಿಯು ಮುಖಂಡರು ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.