ಮುಂಬೈ ಐಷಾರಾಮಿ ಕಟ್ಟಡದಲ್ಲಿ ಅಗ್ನಿ ಅವಘಡ: ಓರ್ವ ಸಾವು, ರಕ್ಷಣಾ ಕಾರ್ಯಾಚರಣೆ ಚುರುಕು

Fire Accident
Published on

ಮುಂಬೈ: ದಕ್ಷಿಣ ಮುಂಬೈನ ಲಾಲ್​ಬೌಗ್​ ಏರಿಯಾದ 64 ಅಂತಸ್ತಿನ 19ನೇ ಮಹಡಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, 7 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ. ಈ ಘಟನೆ ದಕ್ಷಿಣ ಮುಂಬೈನ ಐಷಾರಾಮಿ ಅಪಾರ್ಟ್​ಮೆಂಟ್​ ಅವಿಘ್ ಪಾರ್ಕ್​ ಸೊಸೈಟಿಯಲ್ಲಿ ನಡೆದಿದೆ.

ಬಹುಮಹಡಿಯ ಕಟ್ಟಡಿಯಲ್ಲಿ ಬೆಂಕಿ ಧಗಧಗನೇ ಉರಿಯುತ್ತಿರುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಭಾರೀ ಪ್ರಮಾಣದ ಬೆಂಕಿಯಿಂದ ಕಟ್ಟಡದಲ್ಲಿ ದಟ್ಟ ಹೊಗೆ ಆವರಿಸಿದ್ದು, ಗಾಳಿಯಲ್ಲಿ ಹೊಗೆ ಹಾರುತ್ತಿರುವ ದೃಶ್ಯ ಹಲವು ಮೈಲಿಗಳವರೆಗೆ ಕಾಣುತ್ತದೆ.

ಮುಂಬೈ ಮೇಯರ್​ ಕಿಶೋರಿ ಪಡ್ನೇಕರ್​ ಮತ್ತು ಇತರೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಅಗ್ನಿಶಾಮಕ ಮತ್ತು ಪೊಲೀಸ್​ ಸಿಬ್ಬಂದಿ ಸ್ಥಳದಲ್ಲಿ ತಮ್ಮ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಓರ್ವ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net