

ಉತ್ತರಪ್ರದೇಶ: ನವದೆಹಲಿಯಿಂದ ಬಿಹಾರದ ದರ್ಭಾಂಗಕ್ಕೆ ಪ್ರಯಾಣಿಸುತ್ತಿದ್ದ ದರ್ಭಾಂಗಾ ಕ್ಲೋನ್ ವಿಶೇಷ ರೈಲಿನ ಬೋಗಿಯೊಳಗೆ ಬೆಂಕಿ ಕಾಣಿಸಿಕೊಂಡಿದ್ದು, ಸದ್ಯದ ವರದಿಯ ಪ್ರಕಾರ ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ.
ಘಟನೆಯ ಬೆನ್ನಲ್ಲೇ ಸಿಆರ್ಪಿಓ (CPRO), ಉತ್ತರ ಮಧ್ಯ ರೈಲ್ವೇಸ್, "ರೈಲು ಸಂಖ್ಯೆ 02570 ದರ್ಭಾಂಗಾ ಕ್ಲೋನ್ ಸ್ಪೆಷಲ್ ಉತ್ತರ ಪ್ರದೇಶದ ಸರಾಯ್ ಭೋಪಾತ್ ರೈಲು ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದಾಗ, S1 ಕೋಚ್‌ನಲ್ಲಿ ದಟ್ಟ ಹೊಗೆಯನ್ನು ಕಂಡ ಸ್ಟೇಷನ್ ಮಾಸ್ಟರ್ ಕೂಡಲೇ ರೈಲನ್ನು ನಿಲ್ಲಿಸಿದ್ದಾರೆ. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ದುರ್ಘಟನೆಯಲ್ಲಿ ಯಾವುದೇ ಗಾಯ ಅಥವಾ ಪ್ರಾಣಹಾನಿ ಸಂಭವಿಸಿಲ್ಲ" ಎಂದು ತಿಳಿಸಿದರು.
ರೈಲಿನ ಬೋಗಿಗೆ ತಗುಲಿದ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ತೊಡಗಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).