More

    ವಿರಾಟ್ ಕೊಹ್ಲಿಯ ರೆಕಾರ್ಡ್ ಬ್ರೇಕಿಂಗ್​ ಆಟಕ್ಕೆ ಮೆಚ್ಚುಗೆಯ ಮಹಾಪೂರ; ಯಾರ್ಯಾರು, ಏನಂದ್ರು?

    ಮುಂಬೈ: ಏಕದಿನ ವಿಶ್ವಕಪ್​ನ ಒಂದೇ ಇನ್ನಿಂಗ್ಸ್​ನಲ್ಲಿ ಸಚಿನ್ ತೆಂಡುಲ್ಕರ್ ಅವರ ಎರಡು ದಾಖಲೆಗಳನ್ನು ಮುರಿಯುವ ಜತೆಗೆ ಹೆಗ್ಗಳಿಕೆಯೊಂದಕ್ಕೂ ಪಾತ್ರರಾಗಿರುವ ವಿರಾಟ್ ಕೊಹ್ಲಿಗೆ ಭಾರಿ ಮೆಚ್ಚುಗೆಯ ಮಹಾಪೂರವೇ ಹರಿದುಬರಲಾರಂಭಿಸಿದೆ.

    ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಚಿತ್ರ ನಿರ್ದೇಶಕ ಎಸ್​.ಎಸ್.ರಾಜಮೌಳಿ ಸೇರಿದಂತೆ ಹಲವರು ಮೆಚ್ಚುಗೆ ಸೂಚಿಸಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

    ಇದನ್ನೂ ಓದಿ: ವಿರಾಟ ರೂಪ, ಶ್ರೇಯಸ್​ ಸಿಡಿಲಬ್ಬರಕ್ಕೆ ತತ್ತರಿಸಿದ ಕಿವೀಸ್​ ಬೌಲರ್ಸ್​: 398 ರನ್​ಗಳ ಬೃಹತ್​ ಗುರಿ ನೀಡಿದ ಭಾರತ

    ವಿರಾಟ್ ಕೊಹ್ಲಿ ಏಕದಿನದ ಪಂದ್ಯಗಳಲ್ಲಿ 50ನೇ ಶತಕವನ್ನಷ್ಟೇ ಸಾಧಿಸಿ ದಾಖಲೆ ಮಾಡಿಲ್ಲ, ಜೊತೆಗೆ ಅತ್ಯುತ್ತಮ ಕ್ರೀಡಾ ಮನೋಭಾವವನ್ನು ವ್ಯಾಖ್ಯಾನಿಸುವ ಶ್ರೇಷ್ಠತೆ ಮತ್ತು ಪರಿಶ್ರಮದ ಮನೋಭಾವವನ್ನೂ ಪ್ರದರ್ಶಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

    ಈ ಗಮನಾರ್ಹ ಮೈಲಿಗಲ್ಲು ಅವರ ನಿರಂತರ ಸಮರ್ಪಣೆ ಮತ್ತು ಅಸಾಧಾರಣ ಪ್ರತಿಭೆಗೆ ಸಾಕ್ಷಿಯಾಗಿದೆ. ನಾನು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದು, ಅವರು ಮುಂದಿನ ಪೀಳಿಗೆಗೆ ಮಾನದಂಡ ಸ್ಥಾಪಿಸುವುದನ್ನು ಮುಂದುವರಿಸಲಿ ಎಂದು ಮೋದಿ ಹೇಳಿದ್ದಾರೆ.

    ಇದನ್ನೂ ಓದಿ: ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?

    ದಾಖಲೆಗಳಿರುವುದೇ ಮುರಿಯಲಿಕ್ಕೆ.. ಆದರೆ ಸಚಿನ್ ನಿವೃತ್ತರಾಗುವ ಸಂದರ್ಭದಲ್ಲಿ ಅವರ ದಾಖಲೆಗಳನ್ನು ಯಾರಾದರೂ ಮುರಿಯುತ್ತಾರೆ ಎಂದು ಯಾರೂ ಕನಸು ಕೂಡ ಕಂಡಿರಲಿಲ್ಲ ಎಂದಿರುವ ನಿರ್ದೇಶಕ ರಾಜಮೌಳಿ, ರಾಜನೊಬ್ಬ ಹೊರಹೊಮ್ಮಿದ್ದಾನೆ ಎಂದು ವಿರಾಟ್​ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ‘ದೇವ್ರು’ ಮೆಚ್ಚೋ ಆಟ ಆಡಿದ ವಿರಾಟ್​: ‘ಆ ದಿನ ನನಗೆ ನಗು ತಡೆಯಲು ಆಗಲಿಲ್ಲ’ ಎಂದ ಸಚಿನ್

    ಒಂದೇ ಇನ್ನಿಂಗ್ಸ್​ನಲ್ಲಿ ‘ಕ್ರಿಕೆಟ್ ದೇವರ’ 2 ದಾಖಲೆ ಮುರಿದ ಕೊಹ್ಲಿ!; ಜತೆಗೆ ಇನ್ನೊಂದು ಹೆಗ್ಗಳಿಕೆಗೂ ಪಾತ್ರರಾದ ವಿರಾಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts