'ಕ್ರಿಕೆಟ್​ ದೇವರು ನುಡಿದ ಮಾತು ಇಂದು ಸತ್ಯವಾಯಿತು'!; ಥೇಟ್​ ಸಚಿನ್​ರಂತೆ ಕಾಣುವ ವ್ಯಕ್ತಿ ಹೇಳಿದ್ದೇನು?

Untitled design (58)
Published on

ಮುಂಬೈ: ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್​ ರೋಚಕವಾಗಿ ಸಾಗುತ್ತಿದೆ. ಸೆಮಿಫೈನಲ್ ಪಂದ್ಯದಲ್ಲಿ ರನ್​ ಮಷಿನ್​ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್​ನಲ್ಲಿ ವಿರಾಟರೂಪ ತೋರಿಸಿದ್ದು, ಇದೀಗ ಸಚಿನ್​ ತೆಂಡೂಲ್ಕರ್​ ಅವರ 20 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.

ಏಕದಿನ ವಿಶ್ವಕಪ್ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ ಗಳಿಸುವ ಮೂಲಕ ಕೊಹ್ಲಿ ಈ ದಾಖಲೆ ಮುರಿದಿದ್ದಾರೆ. ಸಚಿನ್ ತೆಂಡೂಲ್ಕರ್ 2003ರ ಏಕದಿನ ವಿಶ್ವಕಪ್​ನಲ್ಲಿ 673 ರನ್ ಗಳಿಸಿದ್ದರು. ಆದರೆ ಇದೀಗ ವಿರಾಟ್​ ಕೊಹ್ಲಿ 674 ರನ್​ಗಳನ್ನು ಗಳಿಸಿ ಅಜೇಯರಾಗಿ ಆಟ ಮುಂದುವರಿಸುವ ಮುಖೇನ ಸಚಿನ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಏಕದಿನ ಪಂದ್ಯಗಳಲ್ಲಿ 50 ಶತಕ ಸಿಡಿಸಿ, ಹೊಸ ಮೈಲಿಗಲ್ಲು ಸಾಧಿಸಿದ ವಿರಾಟ್​ಗೆ ದೇಶವ್ಯಾಪಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ತಮ್ಮ ನೆಚ್ಚಿನ ಕ್ರಿಕೆಟ್​ ದೇವರಾದ ಸಚಿನ್​ ಅವರ ಮಾತನ್ನು ನೆನಪಿಸಿಕೊಂಡು ಮಾತನಾಡಿದ ತೆಂಡೂಲ್ಕರ್​ ಅವರಂತೆಯೇ ಹೋಲುವ ಅಭಿಮಾನಿ ಬಲವೀರ್ ಚಂದ್, "ನನ್ನ ದಾಖಲೆಯನ್ನು ಮುರಿಯುವವರು ಯಾರಾದರೂ ಇದ್ದರೆ ಅದು ವಿರಾಟ್ ಕೊಹ್ಲಿ ಎಂದು ಸ್ವತಃ ಸಚಿನ್ ತೆಂಡೂಲ್ಕರ್ ಹೇಳಿದ್ದರು. ಇಂದು ಅವರ ಮಾತು ನಿಜವಾಗಿದೆ" ಎಂದು ಸಂತಸದಿಂದ ಹೇಳಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net