

ಉತ್ತರ ಪ್ರದೇಶ: ಉತ್ತರಪ್ರದೇಶದ ಬುದೌನ್ ಜಿಲ್ಲೆಯ ಫೈಜ್‌ಗಂಜ್ ಬಹೇಟಾ ಪ್ರದೇಶದಲ್ಲಿ ಕೋತಿಗೆ ಕೋಲಿನಿಂದ ಹೊಡೆದು ಹಿಂಸೆ ನೀಡಿದ ವ್ಯಕ್ತಿ ವಿರುದ್ಧ ಪೊಲೀಸರು ಇದೀಗ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಆರೋಪಿ ಮಂಗವನ್ನು ಮನಬಂದಂತೆ ಹೊಡೆದು ನಂತರ ಪಕ್ಕದ ಪ್ರದೇಶಕ್ಕೆ ಎಸೆದಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ ಫೈಜ್‌ಗಂಜ್ ಬಹೇಟಾ ಎಸ್‌ಎಚ್‌ಒ (SHO) ಸಿದ್ಧಾಂತ್ ಶರ್ಮಾ, "ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ನಾವು ದಾವ್ರಿ ಗ್ರಾಮದ ರಿಜ್ವಾನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ. ಆರೋಪಿ ಸದ್ಯ ತಲೆಮರೆಸಿಕೊಂಡಿದ್ದಾನೆ. ನಮ್ಮ ತಂಡಗಳು ಆತನನ್ನು ಪತ್ತೆಹಚ್ಚುವಲ್ಲಿ ಶ್ರಮಿಸುತ್ತಿದೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).