'ಕ್ಯಾಪ್ಟನ್ ಮಿಲ್ಲರ್' ಟೀಸರ್ ರಿಲೀಸ್​​; ಆ್ಯಕ್ಷನ್‌ ಚಿತ್ರದಲ್ಲಿ ಮಿಂಚಿದ ಧನುಷ್, ಶಿವರಾಜಕುಮಾರ್!

Untitled design - 2023-07-28T112530.598
Published on

ತಮಿಳುನಾಡು: ಕಾಲಿವುಡ್​ನ ಸ್ಟಾರ್​ ನಟ ಧನುಷ್​ ಅಭಿನಯದ ಬಹುನಿರೀಕ್ಷಿತ 'ಕ್ಯಾಪ್ಟನ್​ ಮಿಲ್ಲರ್' ಚಿತ್ರದ ಟೀಸರ್ ಅನ್ನು ಅವರ ಜನ್ಮದಿನದಂದೇ ಚಿತ್ರತಂಡ​ ಬಿಡುಗಡೆಗೊಳಿಸಿದ್ದು, ಇದೀಗ ಟೀಸರ್​ ನೋಡಿದ ಸಿನಿಪ್ರೇಕ್ಷಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

40ನೇ ವಸಂತಕ್ಕೆ ಕಾಲಿಟ್ಟ ನಟ ಧನುಷ್​​ ಅವರ ಜನ್ಮದಿನಕ್ಕೆ ಉಡುಗೊರೆಯಾಗಿ ಚಿತ್ರತಂಡ ಇಂದು ಕ್ಯಾಪ್ಟನ್​ ಮಿಲ್ಲರ್​ ಚಿತ್ರದ ಟೀಸರ್​ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಟೀಸರ್​ನಲ್ಲಿ ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿರುವ ಧನುಷ್​, ಐತಿಹಾಸಿಕ ಕಥೆಯೊಂದನ್ನು ಹೇಳಲು ಹೊರಟಿರುವಂತೆ ಕಾಣುತ್ತದೆ. ರಗಡ್​ ಪಾತ್ರದಲ್ಲಿ ಮಿಂಚಿರುವ ಧನುಷ್​​ ಜತೆಯಲ್ಲಿ ಸ್ಯಾಂಡಲ್​ವುಡ್​ನ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವುದು ಇದೀಗ ಅಭಿಮಾನಿಗಳಿಗೆ ಸಂತಸ ನೀಡಿದೆ.

ಕ್ಯಾಪ್ಟನ್ ಮಿಲ್ಲರ್ ಚಿತ್ರದ ಟೀಸರ್​ ಕಂಡ ಸಿನಿಪ್ರೇಕ್ಷಕರು ಮತ್ತು ಅಭಿಮಾನಿಗಳು, ಧನುಷ್​ ಅವರ ಮಾಸ್​ ಲುಕ್​ಗೆ ಫಿದಾ ಆಗಿದ್ದು, ವಿಡಿಯೋ ಲಿಂಕ್ ಅನ್ನು ಶೇರ್ ಮಾಡುವ ಮುಖೇನ ಧನುಷ್​ ಚಿತ್ರಕ್ಕೆ ಮತ್ತು ಜನ್ಮದಿನಕ್ಕೆ ಶುಭಾಶಯ ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net