ಕೇಂದ್ರ ಬಜೆಟ್​ 2020: ಹೌದಪ್ಪಾ.. ಭಾಷಣ ಉದ್ದ ಆಯಿತು ನಿಜ, ರಾಹುಲ್ ಗಾಂಧಿ ಟೀಕೆಗೆ ಪ್ರತ್ಯುತ್ತರಿಸಿದ ನಿರ್ಮಲಾ ಸೀತಾರಾಮನ್!

NIRMALA REACTS
Published on

ನವದೆಹಲಿ: ಹೌದಪ್ಪಾ... ನನ್ನ ಬಜೆಟ್​ ಭಾಷಣ ತುಂಬ ಉದ್ದ ಆಯಿತೆಂದು ಒಪ್ಪುತ್ತೇನೆ. ಆದರೆ ಆಯವ್ಯಯದಲ್ಲಿ ಯುವಜನರ ವಿಚಾರಕ್ಕೆ ಹೆಚ್ಚು ಒತ್ತು ಕೊಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ರಾಹುಲ್ ಗಾಂಧಿ ಅವರ ಟೀಕೆಗೆ ಪ್ರತ್ಯುತ್ತರಿಸಿದ್ದಾರೆ.

ಬಜೆಟ್​ನಲ್ಲಿ ಯುವಜನರಿಗೆ ಸಂಬಂಧ ಪಟ್ಟ ಯೋಜನೆಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಈ ಯೋಜನೆಗಳಿಂದ ಯುವಜನರಿಗೆ ಉಪಯುಕ್ತವಾಗಲಿದೆ ಎಂದು ಹೇಳಿದರು.

ಈ ಮೊದಲು ಬಜೆಟ್​ನ ಭಾಷಣ ಮುಗಿದ ನಂತರ ಸಂಸತ್​ನ ಹೊರಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ, ಇದು ಭಾರತದ ಬಜೆಟ್​ ಇತಿಹಾಸದಲ್ಲೇ ಅತಿ ಉದ್ದವಾದ ಬಜೆಟ್​ ಭಾಷಣ ಎಂದು ಟೀಕಿಸಿದ್ದರು.

ಭಾರತದಲ್ಲಿ ನಿರುದ್ಯೋಗವೇ ಪ್ರಮುಖ ಸಮಸ್ಯೆಯಾಗಿದೆ. ನಮ್ಮ ಯುವಕರು ಉದ್ಯೋಗ ಪಡೆಯಲು ನೆರವಾಗುವ ಯಾವುದೇ ಕಾರ್ಯತಂತ್ರ ಯೋಜನೆಯನ್ನು ಬಜೆಟ್​ನಲ್ಲಿ ನೋಡಲಿಲ್ಲ. ಸರ್ಕಾರ ಬಜೆಟ್​ ಅನ್ನು ಚೆನ್ನಾಗಿ ವಿವರಿಸಿದೆ. ಆದರೆ ಯುವಕರಿಗೆ ಉಪಯೋಗವಾಗುವುದು ಏನೂ ಇಲ್ಲ ಎಂದಿದ್ದರು.

ಹಿಂದಿನ ಬಜೆಟ್​ ಅಂಶವನ್ನೇ ಮತ್ತೆ ಹೇಳಲಾಗಿದೆ. ಇದು ಸರ್ಕಾರದ ಮನಸ್ಥಿತಿಯನ್ನು ತೋರಿಸುತ್ತದೆ. ಎಲ್ಲವೂ ಕೂಡ ಕೇವಲ ಮಾತಾಗಿದ್ದು, ಯಾವುದು ಕೂಡ ಜಾರಿಯಾಗುವುದಿಲ್ಲ ಎಂದು ಟೀಕಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net