ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಕೆ.ಎಸ್‌ ಈಶ್ವರಪ್ಪ ವಿರುದ್ದ ಪ್ರಕರಣ ದಾಖಲು

KS Eshwarappa
Published on

ಶಿವಮೊಗ್ಗ:  ಲೋಕಸಭಾ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಚುನಾವಣಾಧಿಕಾರಿಯಿಂದ ಅಗತ್ಯ ಅನುಮತಿ ಪಡೆಯದೆ ರಾಜಕೀಯ ಕಾರ್ಯಕ್ರಮ ಆಯೋಜಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಶುಕ್ರವಾರ ತೀ‍ರ್ಥಹಳ್ಳಿ ತಾಲ್ಲೂಕು ನೊಣಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಂಬುತೀರ್ಥದ ದೇವಸ್ಥಾನ ಒಂದರಲ್ಲಿ ಪೂಜಾ ಕಾ‍ರ್ಯಕ್ರಮ ನೆರವೇರಿಸಿ ಅಲ್ಲೇ ಹತ್ತಿರದಲ್ಲೇ ಅರ್ಚಕರ ಮನೆ ಅಂಗಳದಲ್ಲಿ ಸುಮಾರು ೫೦ರಿಂದ ೬೦ ಜನರನ್ನು ಸೇರಿಸಿಕೊಂಡು ೫೦ ಕುರ್ಚಿಗಳು ಹಾಗೂ ಹ್ಯಾಂಡ್‌ ಮೈಕ್‌ ಒಳಗೊಂಡಂತೆ ಸಣ್ಣ ವೇದಿಕೆ ರೀತಿಯಲ್ಲಿ ಸಭೆ ನಡೆಸಿ ಅವರು ರಾಜಕೀಯ ಪ್ರೇರಿತ ಭಾಷಣವನ್ನು ಮಾಡಿದ್ದಾರೆ.

ಚುನಾವಣಾಧಿಕಾರಿಗಳ ಕಚೇರಿಯಿಂದ ಯಾವುದೇ ರೀತಿಯ ಅನುಮತಿ ಪಡೆದಿಲ್ಲ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಪರಾದ ಪ್ರಕರಣವಾದ್ದರಿಂದ ನ್ಯಾಯಾಲಯದ ಅನುಮತಿ ಪಡೆದು ಈಶ್ವರಪ್ಪ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net