ಧಾರವಾಡದಲ್ಲಿ ಯುವತಿಯರಿಬ್ಬರ ನಡುವೆ ಬೀದಿ ರಂಪಾಟ: ವಿಡಿಯೋ ವೈರಲ್​

Girls Fight in Dharwad
Published on

ಧಾರವಾಡ: ಯುವತಿಯರಿಬ್ಬರ ಮಧ್ಯೆ ಬೀದಿ ರಂಪಾಟ ನಡೆದ ಘಟನೆ ಧಾರವಾಡದ ಓಲ್ಡ್​ ಡಿಎಸ್ಪಿ ಸರ್ಕಲ್ ಬಳಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಯುವತಿಯರಿಬ್ಬರು ಒಂದೇ ಕಾರಿನಲ್ಲಿ ಜೊತೆಯಾಗಿ ಬಂದಿದ್ದರು. ಮೊದಲು ಕಾರಿನಲ್ಲಿ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ಬಳಿಕ ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ಕಾರಿನ ಒಳಗೆ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಇದಾದ ನಂತರ ಕಾರಿನಿಂದ ಕೆಳಗೆ ಇಳಿದು ಬಡಿದಾಡಿದ್ದಾರೆ. ಪರಸ್ಪರ ಕೂದಲನ್ನು ಹಿಡಿದು ಎಳೆದಾಡಿದ್ದಾರೆ. ಅಲ್ಲದೆ, ಇಬ್ಬರು ಕೆಟ್ಟ ಪದಗಳಿಂದ ನಿಂದಿಸಿಕೊಂಡಿದ್ದಾರೆ.

ಯುವತಿಯರ ಹೊಡೆದಾಟವನ್ನು ಅದೇ ರಸ್ತೆಯಲ್ಲಿ ಹೋಗುತ್ತಿದ್ದವರು ಮೊಬೈಲ್‌ನಲ್ಲಿ ರೆಕಾರ್ಡ್​ ಮಾಡಿದ್ದಾರೆ. ಸ್ಥಳೀಯರು ಮಧ್ಯ ಪ್ರವೇಶಿಸಿ ಇಬ್ಬರ ಜಗಳವನ್ನು ಬಿಡಿಸಿದ್ದಾರೆ. ಓರ್ವ ಯುವತಿ ಕಾರನ್ನು ಬಿಟ್ಟು ಅಲ್ಲಿಂದ ಹೊರಟು ಹೋದಳು. ಇನ್ನೊರ್ವ ಯುವತಿ ಕಾರು ತೆಗೆದುಕೊಂಡು ಅಲ್ಲಿಂದ ಹೊರಟಳು.

ಯಾವ ಕಾರಣಕ್ಕೆ ಇಬ್ಬರು ಹೊಡೆದಾಡಿಕೊಂಡಿದ್ದಾರೆ ಎಂಬುದು ತಿಳಿದುಬಂದಿಲ್ಲ. ಆದರೆ, ವಿಡಿಯೋ ಮಾತ್ರ ಜಾಲತಾಣದಲ್ಲಿ ವೈರಲ್​ ಆಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net