ದಕ್ಷಿಣ ಭಾರತ ಸಿನಿಮಾರಂಗದಿಂದ ಗೋವಾ ಬ್ಯೂಟಿ ಇಲಿಯಾನಾ ಡಿ ಕ್ರೂಸ್ ಬ್ಯಾನ್​! ಕಾರಣ ಹೀಗಿದೆ….

Ileana D'Cruz
ನಟಿ ಇಲಿಯಾನಾ ಡಿ ಕ್ರೂಸ್
Published on

ಮುಂಬೈ: ಗೋವಾ ಬ್ಯೂಟಿ ಇಲಿಯಾನಾ ಡಿ ಕ್ರೂಸ್ ನಟನೆಗಿಂತ ತಮ್ಮ ದೇಹ ಸೌಂದರ್ಯದಿಂದಲೇ ಪ್ರಸಿದ್ಧಿಯಾದವರು. ಬ್ಯೂಟಿಫುಲ್​ ಲುಕ್​, ಸ್ಟೈಲ್​, ಕ್ಯೂಟ್​ ಸ್ಮೈಲ್​ ಮತ್ತು ಅದ್ಭುತ ವ್ಯಕ್ತಿತ್ವದಿಂದಲೇ ಹೆಸರಾಗಿರುವ ಬರ್ಫಿ ನಟಿ, ಆಗಾಗ ಮಾದಕ ಫೋಟೋಗಳನ್ನು ಹರಿಬಿಟ್ಟು ಅಭಿಮಾನಿಗಳ ಹೃದಯ ಬಡಿತವನ್ನು ಏರಿಸುತ್ತಿರುತ್ತಾರೆ.

ಸಾಕಷ್ಟು ಬಿಕಿನಿ ಫೋಟೋಗಳನ್ನು ಪೋಸ್ಟ್​ ಮಾಡುವ ಮೂಲಕ ಜಾಲತಾಣದಲ್ಲಿ ಕಿಚ್ಚು ಹಚ್ಚುವ ಇಲಿಯಾನಾ ತಮ್ಮ ವೈಯಕ್ತಿಕ ವಿಚಾರಗಳಿಂದಲೂ ಅನೇಕ ಬಾರಿ ಸುದ್ದಿಗೆ ಗ್ರಾಸವಾಗಿದ್ದಾರೆ. ಇನ್ನು ಇಲಿಯಾನಾಗೆ ವಿವಾದಗಳೇನೂ ಹೊಸತಲ್ಲ. ಸದ್ಯ ದಕ್ಷಿಣ ಭಾರತ ಸಿನಿಮಾ ರಂಗದಿಂದ ದೂರವಾಗಿ ಬಾಲಿವುಡ್​ನಲ್ಲಿ ಬೀಡು ಬಿಟ್ಟಿರುವ ಇಲಿಯಾನಾಗೆ ದಕ್ಷಿಣದ ದ್ವಾರ ಶಾಶ್ವತವಾಗಿ ಮುಚ್ಚುವ ಸ್ಥಿತಿ ಎದುರಾಗಿದೆ.

ದಕ್ಷಿಣ ಭಾರತ ಸಿನಿಮಾಗಳಿಂದ ಇಲಿಯಾನಾರನ್ನು ಬ್ಯಾನ್​ ಮಾಡಲಾಗಿದೆ. ತಮಿಳು ನಿರ್ಮಾಪಕರೊಬ್ಬರು ಇಲಿಯಾನಾ ವಿರುದ್ಧ ದೂರು ನೀಡಿದ್ದಾರೆ. ಸಿನಿಮಾವೊಂದಕ್ಕೆ ಮುಂಗಡವಾಗಿ ಹಣ ಪಡೆದುಕೊಂಡು ಈವರೆಗೂ ಶೂಟಿಂಗ್​ಗೆ ಹಾಜರಾಗಿಲ್ಲ ಮತ್ತು ತುಂಬಾ ವಿಳಂಬ ಮಾಡುತ್ತಿದ್ದಾರೆ. ಹಣವನ್ನು ಹಿಂತಿರುಗಿಸದೇ ಸತಾಯಿಸುತ್ತಿದ್ದಾರೆ. ಇಲಿಯಾನಾರ ಈ ನಡೆ ಶೂಟಿಂಗ್​ ಮೇಲೆ ಪ್ರಭಾವ ಬೀರಿದೆ ಎಂದು ಆರೋಪಿಸಿದ್ದಾರೆ.

ಇಲಿಯಾನಾ ವಿರುದ್ಧದ ದೂರು ಫಿಲ್ಮ್ ಚೇಂಬರ್​ ಬಾಗಿಲಿಗೆ ತಲುಪಿದೆ. ಇದೀಗ ಫಿಲ್ಮ್​ ಚೇಂಬರ್​ ಇಲಿಯಾನಾರನ್ನು ದಕ್ಷಿಣ ಭಾರತ ನಾಲ್ಕು ಭಾಷೆಯ ಸಿನಿಮಾಗಳಿಂದ ಬ್ಯಾನ್​ ಮಾಡಲಾಗಿದೆ. ಆದರೆ, ಈ ಬಗ್ಗೆ ಇಲಿಯಾನಾ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ಏನು ಹೇಳಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಸದ್ಯಕ್ಕೆ ಇಲಿಯಾನಾ ರಣದೀಪ್​ ಹೂಡಾ ಜತೆ ಅನ್​ಫೇರ್​ ಆ್ಯಂಡ್​ ಲವ್ಲಿ ಸಿನಿಮಾವನ್ನು ಪೂರ್ಣಗೊಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net