Deep Fake ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಸಜ್ಜಾದ 'ನ್ಯಾಷನಲ್​ ಕ್ರಶ್'​!​ ರಶ್ಮಿಕಾಗೆ ಸಿಕ್ತು ಹೊಸ ಜವಾಬ್ದಾರಿ

actress rashmika
Published on

ಆಂಧ್ರಪ್ರದೇಶ: ಕನ್ನಡ ಚಿತ್ರರಂಗದ 'ಕಿರಿಕ್ ಪಾರ್ಟಿ' ಸಿನಿಮಾದ ಮುಖೇನ ತಮ್ಮ ಸಿನಿ ವೃತ್ತಿಯನ್ನು ಪ್ರಾರಂಭಿಸಿದ ರಶ್ಮಿಕಾ ಮಂದಣ್ಣ (Rashmika Mandanna) ಇಂದು ತೆಲುಗು, ಬಾಲಿವುಡ್​ ಚಿತ್ರಗಳಲ್ಲಿ ಅಭಿನಯಿಸಿ, ಭಾರತೀಯ ಸಿನಿಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇಷ್ಟಲ್ಲದೇ ಸ್ಟಾರ್​ ನಟಿಯರನ್ನು ಹಿಂದಿಕ್ಕಿ 'ನ್ಯಾಷನಲ್ ಕ್ರಶ್'​ ಎಂಬ ಬಿರುದನ್ನು ಪಡೆದು, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವುದು ವಿಶೇಷ ಹಾಗೂ ಗಮನಾರ್ಹ ಎಂದೇ ಹೇಳಬಹುದು. ಸದ್ಯ ಸಾಲು ಸಾಲು ಸ್ಟಾರ್​ ನಟರ ಚಿತ್ರಗಳಲ್ಲಿ ಬಿಜಿಯಾಗಿರುವ 'ಪುಷ್ಪ' ನಟಿ, ಇದೀಗ ಹೊಸ ಜವಾಬ್ದಾರಿಯನ್ನು (Deep Fake Issue) ತಮ್ಮ ಹೆಗಲ ಮೇಲೆ ಹೊತ್ತಿದ್ದಾರೆ.

ಸ್ಟಾರ್​ ಹೀರೋ ಅಥವಾ ಹೀರೋಯಿನ್ ಅಂದಮೇಲೆ ಫೇಕ್​ ವಿಡಿಯೋ, ಫೋಟೋಗಳ ಜಾಲಕ್ಕೆ ಸಿಲುಕುವುದು ಸಾಮಾನ್ಯ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅಧುನಿಕ ತಂತ್ರಜ್ಞಾನದಡಿ ಬಂದಿರುವ ಡೀಪ್​ ಫೇಕ್ (Deep Fakae)​ ವಿಡಿಯೋಗಳು ಎಂತಹ ಸ್ಟಾರ್​ ಸೆಲೆಬ್ರಿಟಿ ಮುಖವನ್ನು ಕೂಡ ನೈಜ ಮುಖದಂತೆ ತೋರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸದೆ ಹೋದಲ್ಲಿ ಇದು ಅವರದ್ದೇ ಮುಖ ಅಥವಾ ಅವರೇ ಎಂದು ಬಲವಾಗಿ ನಂಬಿಸುವಂತೆ ಮಾಡುವುದು ಸಹಜ. ಈ ಹಿಂದೆ ಇದೇ ಡೀಪ್​ ಫೇಕ್​ಗೆ ನಟಿ ರಶ್ಮಿಕಾ ಮಂದಣ್ಣ ಕೂಡ ಸಿಲುಕಿದ್ದರು. ಇದರಿಂದ ಅಂದು ತೀವ್ರ ಮುಜುಗರಕ್ಕೀಡಾಗಿದ್ದ 'ನ್ಯಾಷನಲ್ ಕ್ರಶ್'​​ ಇದೀಗ ಅದರ ವಿರುದ್ಧವೇ ಹೋರಾಡುವ ಶಕ್ತಿಯನ್ನು ಪಡೆದುಕೊಂಡಿರುವುದು ಮತ್ತೊಂದು ವಿಶೇಷ.

ಏನದು ವಿಶೇಷ ಅಧಿಕಾರ?

rashmika

ಪ್ರಸ್ತುತ ಭಾರತೀಯ ಚಿತ್ರರಂಗದಲ್ಲಿ ಸ್ಟಾರ್​ ನಟಿಯಾಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಅವರನ್ನು ಇದೀಗ ಭಾರತೀಯ ಸೈಬರ್ ಕ್ರೈಂ ಕೋಆರ್ಡಿನೇಷನ್ (I4C) ಕೇಂದ್ರದ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಇದನ್ನು ಕೇಂದ್ರ ಗೃಹ ಸಚಿವಾಲಯದ ಸೈಬರ್ ದೋಸ್ತ್ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ. ಈ ಕುರಿತು ಸ್ವತಃ ರಶ್ಮಿಕಾ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಈ ಸಂಗತಿ ಅವರ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದ್ದು, ಕಮೆಂಟ್​ನಲ್ಲಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net