ಭಾರತದಲ್ಲಾಗಿದ್ದರೆ ಬಿರಿಯಾನಿ ಸರಕು, ನ್ಯೂಜಿಲೆಂಡ್​ನಲ್ಲೇಕಾಗಿದೆ ಸಮಸ್ಯೆಗೆ ಹಾದಿ?

Newzeland feral chicken2
Published on

ಆಕ್ಲಂಡ್​: ನ್ಯೂಜಿಲೆಂಡ್​ ತನ್ನನ್ನು ತಾನು ಕರೊನಾಮುಕ್ತ ದೇಶವೆಂದು ಘೋಷಿಸಿಕೊಂಡಿದೆ. ಲಾಕ್​​ಡೌನ್​ನಿಂದಾಗಿ ಜಾರಿಯಲ್ಲಿದ್ದ ಎಲ್ಲ ನಿರ್ಬಂಧಗಳನ್ನು ಸಡಿಲಿಸಿದೆ. ಸರ್ಕಾರಿ, ಖಾಸಗಿ ಸಭೆ ಸಮಾರಂಭಗಳಿಗೂ ಅನುಮತಿ ನೀಡಿದೆ. ಬಸ್​, ಸಂಚಾರ, ವಿಮಾನ ಯಾನಕ್ಎಕ ಅವಕಾಶ ನೀಡಲಾಗಿದೆ. ಹೀಗಿದ್ದರೂ ಒಂದು ಸಂಗತಿ ಅಲ್ಲಿನ ಮಂದಿಯ ನೆಮ್ಮದಿ ಕಸಿದಿದೆ.

ಪಶ್ಚಿಮ ಆಕ್ಲಂಡ್​ನ ಗ್ರಾಮವಾದ ತಿತಿರಂಗಿಯಲ್ಲಿ ಜನರು ನೆಮ್ಮದಿಯಿಂದ ನಿದ್ದೆ ಮಾಡಲಾಗುತ್ತಿಲ್ಲ. ಇಡೀ ದಿನ ಕಾಡು ಕೋಳಿಗಳ ಕ್ಕು, ಕ್ಕು ಎಂಬ ಸದ್ದು ಕಿವಿಗಪ್ಪಳಿಸುತ್ತಲೇ ಇರುತ್ತದೆ. ಕೆಲವರು ಅವುಗಳಿಗಾಗಿ ಅಳಿದುಳಿದ ಆಹಾರ ತಂದಿಟ್ಟರೆ ಬೆಕ್ಕಿನ ಗಾತ್ರದ ಹೆಗ್ಗಣಗಳು ಅದನ್ನು ಕಬಳಿಸುತ್ತವೆ.

ಲಾಕ್​ಡೌನ್​ ಅವಧಿಯಲ್ಲಿ ಜನರ ಸಂಚಾರವೇ ಇರಲಿಲ್ಲ. ಹೀಗಾಗಿ ಕಾಡಿನಿಂದ ಗ್ರಾಮಕ್ಕೆ ದಾಳಿಯಿಟ್ಟು ಎಲ್ಲೆಂದರಲ್ಲಿ ಓಡಾಡುತ್ತಿದ್ದವು. ಆದರೆ, ಲಾಕ್​ಡೌನ್​ ಮುಗಿದ ಬಳಿಕ ಜನ, ವಾಹನಗಳ ಸಂಚಾರ ಆರಂಭವಾದರೂ ಯಾವುದಕ್ಕೂ ಹೆದರುತತ್ಇಲ್ಲ. ಮತ್ತೆ ಕಾಡಿಗೆ ತೆರಳದೇ ಜನರ ಜೀವನಕ್ಕೆ ಅಡ್ಡಿಯಾಗಿವೆ ಎಂಬುದು ಸ್ಥಳೀಯರ ಅಭಿಪ್ರಾಯ.

ಕಾಡು ಕೋಳಿಗಳಷ್ಟೇ ಅಲ್ಲ, ಕಾಡು ಕುದುರೆಗಳು ಕೂಡ ಆಪತ್ತು ತಂದೊಡ್ಡಿವೆ. ನ್ಯೂಸೌತ್​ ವೇಲ್ಸ್​ನಲ್ಲಿರುವ ಕೋಸಿವೊಸ್ಕೋ ರಾಷ್ಟ್ರೀಯ ಅಭಯಾರಣದಲ್ಲಿರುವ 4,000ಕ್ಕೂ ಅಧಿಕ ಕಾಡು ಕುದುರೆಗಳನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಹಿಡಿದು ಬೇರೆಡೆ ಬಿಡುವ ಉದ್ದೇಶವಿದ್ದರೂ ಕೆಲವನ್ನು ಕೊಲ್ಲುವುದು ಅನಿವಾರ್ಯವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ರಾಷ್ಟ್ರೀಯ ಅಭಯಾರಣ್ಯದಲ್ಲಿ ಬೆಂಕಿ ಅಪಾರ ಸಸ್ಯ ಸಂಪತ್ತು ನಾಶವಾಗಿದೆ. ಇನ್ನುಳಿದ ಸೂಕ್ಷ್ಮ ಸಸ್ಯವರ್ಗಗಳನ್ನು ಈ ಕುದುರೆಗಳು ಹಾಳ ಮಾಡುತ್ತಿವೆ. ಹೀಗಾಘಿ ಇವನ್ನು ಬೇರೆಡೆ ಕಳುಹಿಸಲಾಗುತ್ತಿದೆ. ಅಲ್ಲಿಗೆ ನ್ಯೂಜಿಲೆಂಡ್​ ಜನರು ಕರೊನಾದಿಂದ ಮುಕ್ತರಾಗಿದ್ದರೂ, ಲಾಕ್​ಡೌನ್​ನಿಂದಾದ ಹಲವು ಅವಾಂತರಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎನ್ನುವುದಂತೂ ಸತ್ಯ. ಭಾರತದಲ್ಲಾಗಿದ್ದರೆ ರಸದೌತಣವಾಗುತ್ತಿದ್ದ ಕೋಳಿಗಳು ಅಲ್ಲಿ ಸಮಸ್ಯೆಯಾಗಿರುವುದನ್ನು ದುರಂತ ಎನ್ನಲೇಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net