More

    ಹುಟ್ಟುಹಬ್ಬದಂದೇ ಕರೊನಾಗೆ ಬಲಿಯಾದ ಶಾಸಕ; ಜನಪ್ರತಿನಿಧಿ ಸಾವಿನ ಮೊದಲ ಪ್ರಕರಣ

    ಬೆಂಗಳೂರು: ಚೆನ್ನೈನ ಚೆಪಾಕ್​-ತಿರುವಲ್ಲಿಕೇನಿ ವಿಧಾನಸಭಾ ಕ್ಷೇತ್ರದ ಡಿಎಂಕೆ ಶಾಸಕ ಜೆ. ಆನ್ಬಳಗನ್​ ಕರೊನಾದಿಂದಾಗಿ ಬುಧವಾರ ಮೃತಪಟ್ಟಿದ್ದಾರೆ. ಆ ಮೂಲಕ ತಮಿಳುನಾಡಿನಲ್ಲಿ ಮೊದಲ ಬಾರಿಗೆ ಜನಪ್ರತಿನಿಧಿಯೊಬ್ಬರು ಕರೊನಾಗೆ ಬಲಿಯಾದಂತಾಗಿದೆ.

    ಸಿದ್ದಗಂಗಾ ಶ್ರೀ ಶಿವಕುಮಾರ ಶ್ರಿಗಳಿಗೆ ಚಿಕಿತ್ಸೆ ನೀಡಿದ್ದ ಚೆನ್ನೈನ ಡಾ. ರೇಲಾ ಇನ್​ಸ್ಟಿಟ್ಯೂಟ್​ ಆ್ಯಂಡ್​ ಮೆಡಿಕಲ್​ ಸೆಂಟರ್​ನಲ್ಲಿಯೇ ಆನ್ಬಳಗನ್​ ಚಿಕಿತ್ಸೆ ಪಡೆಯುತ್ತಿದ್ದರು. 62ನೇ ಹುಟ್ಟುಹಬ್ಬದ ದಿನದಂದೇ ಆನ್ಬಳಗನ್​ ಕುಟುಂಬ ವರ್ಗ, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

    ಇದನ್ನೂ ಓದಿ; ಹೊತ್ತಿ ಉರಿಯುತ್ತಿರುವ ತೈಲ ಬಾವಿ ಬೆಂಕಿ ನಂದಿಸಲು ಒಂದು ತಿಂಗಳೇ ಬೇಕು….!

    2001, 2011 ಹಾಗೂ 2016ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಪಕ್ಷ ನಿಷ್ಠೆಗೆ ಹೆಸರಾಗಿದ್ದ ಆನ್ಬಳಗನ್​, ಕೆಲ ಚಿತ್ರ ವಿತರಕರಾಗಿಯೂ ಕೆಲಸ ಮಾಡಿದ್ದರು. ಹಲವು ಬಿಗ್​ ಬಜೆಟ್​ ಚಿತ್ರಗಳ ವಿತರಣೆ ಮಾಡಿದ್ದರು.

    ಆನ್ಬಳಗನ್​ ಅಗಲಿಕೆಯಿಂದ ತಮಿಳುನಾಡು ವಿಧಾನಸಭೆಯಲ್ಲಿ ಮೂರು ಸ್ಥಾನ ತೆರವಾದಂತಾಗಿದೆ. ಈ ಮೂರು ಸ್ಥಾನಗಳಲ್ಲಿ ಡಿಎಂಕೆ ಶಾಸಕರೇ ಇದ್ದರು. ಕೆಪಿಪಿ ಸ್ವಾಮಿ (ತಿರುವತ್ತಿಯೂರು ಕ್ಷೇತ್ರ), ಎಸ್​. ಕಥಾವರಾಯನ್​ (ಗುಡಿಯಾಟ್ಟಂ ಕ್ಷೇತ್ರ) ಇತ್ತೀಚೆಗೆ ಅಗಲಿದ ಇನ್ನಿಬ್ಬರು ಡಿಎಂಕೆ ಶಾಸಕರಾಗಿದ್ದಾರೆ.

    ಕರೊನಾದಿಂದ ಕಾಪಾಡುತ್ತಿರುವ ಔಷಧಗಳಿವು; ಬೆಲೆ ಕೇಳಿದರೆ ತಲೆ ತಿರುಗುತ್ತೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts