More

    ಕನ್ಯಾಕುಮಾರಿ ಸಮುದ್ರದಲ್ಲಿ ಈಜಲು ಹೋದ ಐವರು ಮೆಡಿಕಲ್​ ವಿದ್ಯಾರ್ಥಿಗಳು ನೀರುಪಾಲು!

    ಕನ್ಯಾಕುಮಾರಿ: ಸಮುದ್ರದಲ್ಲಿ ಈಜಲು ಹೋಗಿದ್ದ ಐವರು ವೈದ್ಯಕೀಯ ವಿದ್ಯಾರ್ಥಿಗಳು ನೀರಿನಲ್ಲಿ ಮುಳಗಿ ಸಾವನ್ನಪ್ಪಿರುವ ಘಟನೆ ಸೋಮವಾರ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ನಡೆದಿದೆ.

    ಇದನ್ನೂ ಓದಿ: ಸಂತ್ರಸ್ತೆ ಅಪಹರಣ ಪ್ರಕರಣ: ಎ2 ಆರೋಪಿ ಸತೀಶ್ ಬಾಬು 8 ದಿನ ಎಸ್‍ಐಟಿ ಕಸ್ಟಡಿಗೆ

    ಮೃತರನ್ನು ತಿರುಚನಾಪಳ್ಳಿಯ ಎಸ್​ಆರ್​ಎಂ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಸಹಪಾಠಿಯ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾನುವಾರ ಕನ್ಯಾಕುಮಾರಿಗೆ ಆಗಮಿಸಿತ್ತು.

    ಮದವಿಗೆ ಬಂದಿದ್ದ ವಿದ್ಯಾರ್ಥಿಗಳು ಕನ್ಯಾಕುಮಾರಿ ಬೀಚ್​ ಬಳಿ ಮುಚ್ಚಲ್ಪಟ್ಟಿರುವ ಲೇಮೂರ್​ ಬೀಚ್​ಗೆ ಸೋಮವಾರ ಬೆಳಗ್ಗೆ ಬಂದಿದ್ದರು. ಇಲ್ಲಿ ನೀರಿನ ಮಟ್ಟ ಜಾಸ್ತಿ ಇತ್ತು. ಈಜು ಬಾರದೇ ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ 5 ಜನರು ಸಾವನ್ನಪ್ಪಿದ್ದಾರೆ. ಮೂವರನ್ನು ರಕ್ಷಿಸಲಾಗಿದೆ ಎಂದು ಕನ್ಯಾಕುಮಾರಿ ವರಿಷ್ಠಾಧಿಕಾರಿ ಈ ಸುಂದರವದನಂ ತಿಳಿಸಿದ್ದಾರೆ.

    ಮೃತರನ್ನು ತಂಜಾವೂರಿನ ಚಾರುಕವಿ, ನೇವೇಲಿಯ ಗಾಯತಿರಿ, ಕನ್ನಿಯಾಕುಮಾರಿಯ ಸರ್ವದರ್ಶಿತ್, ದಿಂಡಿಗಲ್‌ನ ಪ್ರವೀಣ್ ಸ್ಯಾಮ್ ಮತ್ತು ಆಂಧ್ರಪ್ರದೇಶದ ವೆಂಕಟೇಶ್ ಎಂದು ಗುರುತಿಸಲಾಗಿದೆ.

    ಇತರ ಮೂವರು ಮಹಿಳಾ ಇಂಟರ್ನಿಗಳಾದ ಕರೂರಿನ ನೇಶಿ, ತೇಣಿಯ ಪ್ರೀತಿ ಪ್ರಿಯಾಂಕಾ ಮತ್ತು ಮಧುರೈನ ಶರಣ್ಯ ಅವರನ್ನು ರಕ್ಷಿಸಲಾಗಿದ್ದು, ಆಸರಿಪಳ್ಳಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಂಬಿಬಿಎಸ್​ ಅಂತಿಮ ವರ್ಷದ ವಿದ್ಯಾರ್ಥಿಗಳಾಗಿದ್ದ ಮೃತರು ಇನ್ನೇನು ಪದವಿ ಮುಗಿಸಿ ಕಾಲೇಜಿನಿಂದ ಹೊರಡುವವರಿದ್ದರು.

    ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಪೋಟ: 7 ವರ್ಷದ ಬಾಲಕ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts