More

    ಗೋಕರ್ಣ ಭದ್ರಕಾಳಿ ದೇವಿಯ ಬಂಡಿ ಹಬ್ಬ ಸಂಪನ್ನ

    ಗೋಕರ್ಣ:ಗೋಕರ್ಣದ ಪುರಾಣ ಖ್ಯಾತ ಶ್ರೀಭದ್ರಕಾಳಿ ದೇವಿಯ ಪಾರಂಪರಿಕ ಬಂಡಿಹಬ್ಬದ ಪ್ರಧಾನ ಆಚರಣೆಯಾದ ಬಂಡಿತೇರು ಮೆರವಣಿಗೆ ಶನಿವಾರ ಸಂಜೆ ಕಿಕ್ಕಿರಿದು ತುಂಬಿದ್ದ ಅಸಂಖ್ಯಾತ ಭಕ್ತಸಾಗರದ ನಡುವೆ ಬಹು ವಿಜೃಂಭಣೆಯಿಂದ ನಡೆಯಿತು.ಕ್ಷೇತ್ರದ ರಥಬೀದಿಯಿಂದ ಶ್ರೀಭದ್ರಕಾಳಿ ಮಂದಿರದ ವರೆಗಿನ ಎರಡು ಕಿಮಿ ಉದ್ದದ ಮುಖ್ಯ ರಸ್ತೆಯಲ್ಲಿ ತುಂಬಿತುಳುಕಿದ್ದ 15 ಸಾವಿರಕ್ಕೂ ಹೆಚ್ಚಿನ ಭಕ್ತರು ವಿವಿಧ ಬಗೆಯ ಮಂಗಳ ವಾದ್ಯದೊಂದಿಗಿನ ಬಂಡಿತೇರಿನ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡು ಕೃತಾರ್ಥರಾದರು.ಮೆರವಣಿಗೆ ನಿಮಿತ್ತ ಬಂಡಿತೇರನ್ನು ಭಕ್ತರು ಅರ್ಪಿಸಿದ ಟನ್‌ಗಟ್ಟಳೆ ವಿವಿಧ ಬಗೆಯ ಫಲ-ಪುಷ್ಪ ಮತ್ತು ನೋಟಿನ ಮಾಲೆಗಳಿಂದ ಶೃಂಗರಿಸಲಾಗಿತ್ತು.
    ಪ್ರಧಾನ ಪಾತ್ರಿ ವಿನಾಯಕ ಗುನುಗರ ನೇತೃತ್ವದಲ್ಲಿ ಶ್ರೀಭದ್ರಕಾಳಿ ಕಳಸ ಉತ್ಸವವು ಸಂಜೆ ಆರು ಗಂಟೆ ಸುಮಾರಿಗೆ ಭದ್ರಕಾಳಿ ಮಂದಿರದಿAದ ಸಪರಿವಾರ ಸಮೇತ ಆಗಮಿಸಿ ಶ್ರೀಮಹಾಬಲೇಶ್ವರ ಮಂದಿರಕ್ಕೆ ಭೇಟಿಯಿತ್ತು ದರ್ಶನ ಮತ್ತು ಮಂಗಳಾರತಿ ಸೇವೆ ಸ್ವೀಕರಿಸಿತು.ಆತರುವಾಯ ರಥಬೀದಿಯ ಕಳಸದ ಮನೆಗೆ ಬಂದ ಕಳಸ ಅಲ್ಲಿನ ಸೇವೆಯನ್ನು ಪಡೆದ ನಂತರ ಬಂಡಿತೇರು ಮೆರವಣಿಗೆಗೆ ಚಾಲನೆ ನೀಡಲಾಯಿತು.ಬಂಡಿತೇರಿನ ಹಿಂದೆ ಕಳಸ ಉತ್ಸವ ಸಾಗಿತು.ಕ್ಷೇತ್ರದ ಪದ್ಧತಿಯಂತೆ ಬಂಡಿತೇರಿನ ಮುಂಭಾಗದಲ್ಲಿ ನೂರಾರು ಸುಮಂಗಲಿ ಬಾಗಿನಗಿತ್ತಿಯರು ಹೂವಿನ ಅಲಂಕಾರದೊAದಿಗೆ ಕಲಶವನ್ನು ತೆಲೆಯಲ್ಲಿ ಹೊತ್ತು ತಮ್ಮ ವಾರ್ಷಿಕ ಹರೆಕೆಯನ್ನು ಸಮರ್ಪಿಸಿದರು.ಸಂಜೆ ಆರು ಮುಕ್ಕಾಲು ಗಂಟೆಗೆ ಪ್ರಾರಂಭವಾದ ಬಂಡಿತೇರು ಮೆರವಣಿಗೆ ಒಂದು ತಾಸಿನಲ್ಲಿ ಭದ್ರಕಾಳಿ ಮಂದಿರವನ್ನು ತಲುಪಿ ಸಂಪನ್ನವಾಯಿತು.
    ಬAಡಿ ಮಹೋತ್ಸವದ ನಿಮಿತ್ತ ಪೊಲೀಸರು ಮುಖ್ಯ ರಸ್ತೆಯ ಮೇಲೆ ಎಲ್ಲ ಬಗೆಯ ವಾಹನ ಸಂಚಾರವನ್ನು ನಿರ್ಬಂಧಿಸಿದ್ದರು.ಇನಸ್ಪೆಕ್ಟರ್ ಯೋಗೇಶ ಕೆ.ಎಂ. ಮತ್ತು ಸಿಬ್ಬಂದಿ ನೇತೃತ್ವದಲ್ಲಿ ಹೆಚ್ಚಿನ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಮೇ.19ರಂದು ಶ್ರೀಭದ್ರಕಾಳಿ ಮಂದಿರದಲ್ಲಿ ಭಕ್ತರು ಸಮರ್ಪಿಸುವ ವಿಶೇಷ ಹರಕೆ ಮತ್ತು ಕಾಣಿಕೆ ಅರ್ಪಣೆಯೊಂದಿಗೆ ಎಂಟುದಿನಗಳ ವಾರ್ಷಿಕ ಬಂಡಿಹಬ್ಬ ಮಂಗಳವಾಗುವುದು.ತನ್ನಿಮಿತ್ತ ಭಾನುವಾರ ಮಧ್ಯಾನ್ಹ 4 ಗಂಟೆಗೆ ಕಳಸ ಉತ್ಸವವು ರಥಬೀದಿಯ ಕಳಸದ ಮನೆಯಿಂದ ಭದ್ರಕಾಳಿ ಮಂದಿರಕ್ಕೆ ಆಗಮಿಸಿ ಸಾಂಪ್ರದಾಯಿಕ ಸೇವಾ ಕಾರ್ಯದಲ್ಲಿ ಪಾಲ್ಗೊಂಡು ಭಕ್ತರನ್ನು ಹರಸಲಿದೆ.

    https://www.vijayavani.net/food-saftey-department-meeting

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts