More

  ದರ್ಶನ್​ಗೆ ಮತ್ತೊಂದು ಸಂಕಷ್ಟ: ವಿಜಯಲಕ್ಷ್ಮೀ ಎ1, ದಚ್ಚು ಎ3 ಆರೋಪಿ! ಗಂಡನ ಜತೆ ಪತ್ನಿಗೂ ತೊಂದರೆ

  ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಗೆಳತಿ ಪವಿತ್ರಾ ಗೌಡ ಹಾಗೂ ಸಹಚರರು ಅರೆಸ್ಟ್​ ಆಗಿರುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಡಿ-ಗ್ಯಾಂಗ್​ನ ಕೃತ್ಯ ತಿಳಿದು ಎಲ್ಲರು ಶಾಕ್​ ಆಗಿದ್ದಾರೆ. ಸ್ಟಾರ್​ ನಟನೊಬ್ಬ ಇಂತಹ ಹೇಯ ಕೃತ್ಯ ಎಸಗಿದ್ದಾನೆ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸದ್ಯ ಈ ಪ್ರಕರಣ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಾಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್​ ಕೈವಾಡವಿರುವ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

  ಸದ್ಯ ಪೊಲೀಸ್​ ಕಸ್ಟಡಿಯಲ್ಲಿರುವ ದರ್ಶನ್​ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ದರ್ಶನ್​ ಜತೆಗೆ ಪತ್ನಿ ವಿಜಯಲಕ್ಷ್ಮೀಗೂ ಈ ಕಂಟಕ ಕಾಡಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ಎ2 ಆರೋಪಿಯಾಗಿದ್ದರೆ, ಗೆಳತಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದಾರೆ. ಆದರೆ, ಈ ಪ್ರಕರಣದಲ್ಲಿ ದರ್ಶನ್​ ಪತ್ನಿ ವಿಜಯಲಕ್ಷ್ಮೀ ಎ1 ಆರೋಪಿಯಾಗಿದ್ದು, ದರ್ಶನ್​ ಎ3 ಆರೋಪಿಯಾಗಿದ್ದಾರೆ.

  ಕೊಲೆ ಪ್ರಕರಣದಲ್ಲಿ ದರ್ಶನ್​ ಬಂಧನವಾದ ಬಳಿಕ ದರ್ಶನ್​ಗೆ ಸಂಬಂಧಿಸಿದ ಸಾಕಷ್ಟು ಪ್ರರಕಣಗಳು ಹೊರಬರುತ್ತಿದ್ದು, ಇದೀಗ ವಿಜಯಲಕ್ಷ್ಮೀ ಕೂಡ ತೊಂದರೆ ಸಿಲುಕಿಕೊಂಡಿದ್ದಾರೆ. ಅಷ್ಟಕ್ಕೂ ವಿಜಯಲಕ್ಷ್ಮೀ ವಿರುದ್ಧ ದಾಖಲಾಗಿರುವ ಪ್ರರಕಣವೇನೆಂದರೆ, ದರ್ಶನ್​ ಅವರು ಮೈಸೂರಿನ ಬಳಿಯಿರುವ ತಮ್ಮ ತೋಟದ ಮನೆಯಲ್ಲಿ ಕಾನೂನು ಬಾಹಿರವಾಗಿ ವಿಶಿಷ್ಟ ಜಾತಿಯ ಬಾರ್​ ಹೆಡೆಡ್​ ಗೂಸ್​ ಬಾತುಕೋಳಿಯನ್ನು ಸಾಕಿದ್ದರು. ಈ ಪಕ್ಷಿಯನ್ನು ವಶಕ್ಕೆ ಪಡೆದಿದ್ದ ಅರಣ್ಯ ಇಲಾಖೆ ಎಫ್​ಐಆರ್​ ದಾಖಲಿಸಿ, ದರ್ಶನ್​ ಸೇರಿದಂತೆ ಸಂಬಂಧಪಟ್ಟವರಿಗೆ ವಿಚಾರಣೆಗೆ ಬರುವಂತೆ ನೋಟಿಸ್​ ನೀಡಲಾಗಿತ್ತು.

  ಹಲವು ಬಾರಿ ನೋಟಿಸ್​ ನೀಡಿದರೂ ವಿಚಾರಣೆಗೆ ದರ್ಶನ್​ ಹಾಜರಾಗದಿದ್ದಕ್ಕೆ ಇದೀಗ ದರ್ಶನ್​ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಲು ಅರಣ್ಯ ಇಲಾಖೆ ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ. ಹೀಗಾಗಿ ದರ್ಶನ್​ ಮತ್ತು ಪತ್ನಿ ವಿಜಯಲಕ್ಷ್ಮೀಗೆ ಸಂಕಷ್ಟ ಎದುರಾಗಿದೆ. ಇನ್ನು ಈ ಪ್ರಕರಣದಲ್ಲಿ ವಿಜಯಲಕ್ಷ್ಮೀ ಯಾಕೆ ಸಿಲುಕಿಕೊಂಡರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಮುಂದಿದೆ. ಮೈಸೂರಿನ ತಿ. ನರಸೀಪುರದ ಬಳಿಯಿರುವ ಫಾರ್ಮ್​ ಹೌಸ್​ ಪತ್ನಿ ವಿಜಯಲಕ್ಷ್ಮೀ ಹೆಸರಿನಲ್ಲಿದೆ. ಈ ಕಾರಣಕ್ಕೆ ಅವರನ್ನು ಈ ಪ್ರಕರಣದಲ್ಲಿ ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ.

  See also  ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ

  ಫಾರ್ಮ್​ ಆಸ್ತಿಯ ಮ್ಯಾನೇಜರ್​ ಆಗಿರುವ ನಾಗರಾಜ್​ ಅವರನ್ನು ಎ2 ಆರೋಪಿ ಹಾಗೂ ದರ್ಶನ್​ ಅವರನ್ನು ಎ3 ಆರೋಪಿಯನ್ನಾಗಿ ಮಾಡಲಾಗಿದೆ. ಸದ್ಯ ಚಾರ್ಚ್​ಶೀಟ್​ ಸಲ್ಲಿಕೆ ಸುದ್ದಿ ಹರಿದಾಡುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಅರಣ್ಯ ಇಲಾಖೆ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಚಾರ್ಜ್​ಶೀಟ್​ ಸಲ್ಲಿಸಲು ಮುಂದಾಗಿದೆ ಎನ್ನಲಾಗಿದೆ. ಇದರಿಂದ ದರ್ಶನ್​ ಮತ್ತೊಂದು ಸಂಕಷ್ಟಕ್ಕೆ ಸಿಲುಕೊಂಡಂತಾಗಿದೆ.

  ಮುಗ್ಧರಾಗಿದ್ದ ದರ್ಶನ್ ಹೀಗಾಗಲು ಅದೊಂದೆ ಕಾರಣ! ದಚ್ಚು ಮಾಡಿದ ಈ ತಪ್ಪುಗಳಿಂದಲೇ ಹೀನಾಯ ಸ್ಥಿತಿ ಬಂತು

  ದರ್ಶನ್​ ಜತೆ ಇರೋರೆಲ್ಲ ರೌಡಿಗಳು, ಬೇರೆ ನಟರಷ್ಟು ಅಭಿಮಾನಿಗಳು ಆತನಿಗಿಲ್ಲ! ನಟಿ ರಮ್ಯಾ ಸ್ಫೋಟಕ ಹೇಳಿಕೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts