ಖಾಸಗಿ ಶಾಲಾ ಶುಲ್ಕ ಕಡಿತ ನಿರ್ಧಾರ ಶೀಘ್ರ

Front School
Published on

ಬೆಂಗಳೂರು: ರಾಜ್ಯದ ಖಾಸಗಿ ಶಾಲೆಗಳ ಶುಲ್ಕವನ್ನು ಶೇ.25ರಿಂದ 30 ಕಡಿತ ಮಾಡಲು ಶಿಫಾರಸು ಮಾಡಿ ಶಿಕ್ಷಣ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇತ್ತೀಚಿಗೆ ಶುಲ್ಕ ವಿಚಾರವಾಗಿ ಪಾಲಕರು ಮತ್ತು ಖಾಸಗಿ ಶಾಲೆಗಳ ಜತೆ ನಡೆದ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಶಿಕ್ಷಣ ಸಚಿವರಿಗೆ ವರದಿ ಸಲ್ಲಿಸಲಾಗಿದೆ. ವರದಿ ಪರಿಶೀಲಿಸಿ ರಾಜ್ಯ ಸರ್ಕಾರ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸುವುದಾಗಿ ತಿಳಿದು ಬಂದಿದೆ. ಕುಸ್ಮಾ ಮತ್ತು ಕ್ಯಾಮ್್ಸ ಸಂಘಟನೆ ತಮ್ಮ ವ್ಯಾಪ್ತಿಯಲ್ಲಿರುವ ಶಾಲೆಗಳು ಈಗಾಗಲೇ ಶೇ.25ರಿಂದ 30 ಶುಲ್ಕ ರಿಯಾಯಿತಿ ನೀಡುತ್ತಿರುವುದಾಗಿ ಹೇಳಿದ್ದವು. ಶುಲ್ಕ ಸಂಬಂಧ ಸರ್ಕಾರಕ್ಕೆ ಈಗಾಗಲೇ ವರದಿ ಯನ್ನು ಸಲ್ಲಿಸಿದ್ದೇನೆ. ವರದಿ ನೋಡಿ ಅಧಿಕೃತ ಆದೇಶವನ್ನು ಸರ್ಕಾರ ಶೀಘ್ರವೇ ಹೊರಡಿಸಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬು ಕುಮಾರ್ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net