

Video: ಹಾಸ್ಯಮಯ ದೃಶ್ಯಗಳಿಂದ ಹಿಡಿದು ಅಚ್ಚರಿಯ ಕ್ಷಣಗಳವರೆಗೆ ಎಲ್ಲಾ ರೀತಿಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಮಾನ್ಯವಾಗಿ ವೈರಲ್ ಆಗುತ್ತವೆ.
ವಿವಾಹಕ್ಕೆ ಸಂಬಂಧಿಸಿದ ವಿಷಯಗಳು, ನಿರ್ದಿಷ್ಟವಾಗಿ, ಮದುವೆ ಸಮಾರಂಭವಾಗಿರಲಿ, ವಧು-ವರರ ನೃತ್ಯವಾಗಿರಲಿ ಅಥವಾ ಇತರ ಜನಪ್ರಿಯ ಆಚರಣೆಗಳಾಗಲಿ ಗಮನ ಸೆಳೆಯುತ್ತವೆ. ಇತ್ತೀಚೆಗೆ, ಅಂತಹ ಒಂದು ವೀಡಿಯೊವನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ವಧುವಿನ ಕುಟುಂಬವು ವರನ ಕಡೆಯವರಿಗೆ ನೀಡಿದ ಉಡುಗೊರೆಗಳನ್ನು ನೋಡಿ ಎಲ್ಲರೂ ಆಶ್ಚರಿಚಕಿತರಾಗಿದ್ದು, ಇದೀಗ ಈ ವಿಡಿಯೋ ಭಾರೀ ವೈರಲ್ ಆಗಿದೆ.
ಹೌದು, ಈ ವೈರಲ್ ವಿಡಿಯೋ 1.9 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌ಗಳನ್ನುಗಳಿಸಿದೆ.ಈ ದೃಶ್ಯಗಳು ವಧು, ವರ, ಅವರ ಕುಟುಂಬಗಳು ಮತ್ತು ಸಂಬಂಧಿಕರೆಲ್ಲರೂ ಹಾಜರಿರುವ ವಿವಾಹ ಸಮಾರಂಭವನ್ನು ಸ್ಪಷ್ಟವಾಗಿ ಸೆರೆಹಿಡಿದಿದೆ.
ವಧುವಿನ ಕುಟುಂಬವು ವರನಿಗೆ ನೀಡಿದ ಉಡುಗೊರೆಗಳನ್ನು ಘೋಷಿಸಲು ಒಬ್ಬ ವ್ಯಕ್ತಿ ಮೈಕ್ರೊಫೋನ್ ಬಳಸುವುದನ್ನು ಕಾಣಬಹುದು. ಇವುಗಳಲ್ಲಿ ಮೂರು ಕಿಲೋಗ್ರಾಂ ಬೆಳ್ಳಿ, ಒಂದು ಪೆಟ್ರೋಲ್ ಪಂಪ್ ಮತ್ತು 210 ವಿಸ್ತಿರ್ಣದ ಭೂಮಿ ಸೇರಿವೆ ಎಂದು ವ್ಯಕ್ತಿ ಕೂಗುವುದನ್ನು ಕಾಣಬಹುದು. ಇವೆಲ್ಲವೂ 15.65 ಕೋಟಿ ರೂ. ಅಧಿಕ ಬೆಲೆ ಬಾಳುತ್ತದೆ.
ಈ ವಿಡಿಯೋವನ್ನು ಸೋನು ಅಜ್ಮೀರ್ ಎಂಬುವರು (@sr_sonu_ajmer_) ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ವೀಕ್ಷಕರಿಂದ ಭಾರಿ ಕಾಮೆಂಟ್‌ಗಳ ಸುರಿಮಳೆಯೇ ಬಂದಿತ್ತು. ಇಂತಹ ದುಬಾರಿ ಉಡುಗೊರೆಗಳನ್ನು ಪಡೆದ ನಂತರ ಮದುವೆಯ ಅಗತ್ಯವೇನಿತ್ತು ಎಂದು ಒಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ. ವಧು ಆ ಸಂಪತ್ತಿನಿಂದ ಸ್ವತಂತ್ರ ಜೀವನವನ್ನು ಕಟ್ಟಬಹುದಿತ್ತು ಎಂದು ಸೂಚಿಸಿದ್ದಾರೆ.(ಏಜೆನ್ಸೀಸ್)