ಸಾಕು ನಾಯಿಯ ಮೇಲೆ ಎರಗಿದ Pit Bulls: ಹೋರಾಡಿ ರಕ್ಷಿಸಿದ 7 ತಿಂಗಳ ಗರ್ಭಿಣಿ | Video Viral

Video Viral
Published on

Video Viral: ಏಳು ತಿಂಗಳ ಗರ್ಭಿಣಿ ಮಹಿಳೆಯೊಬ್ಬಳು ಎರಡು ಪಿಟ್ ಬುಲ್‌ಗಳ ದಾಳಿಯಿಂದ ತನ್ನ ಸಾಕು ನಾಯಿಯನ್ನು ರಕ್ಷಿಸಲು ಹೋರಾಡಿದ ಘಟನೆ ಸ್ಯಾಂಟೋಸ್‌ನಲ್ಲಿ ನಡೆದಿದೆ.

ಜಿಲ್‌ನ ಗರ್ಭಿಣಿ ಮಹಿಳೆ ಥೇನಾ ಸ್ಯಾಂಟೋಸ್ ಎರಡು ಪಿಟ್ ಬುಲ್‌ಗಳ ಆಕಸ್ಮಿಕ ದಾಳಿಯಿಂದ ತನ್ನ ಸಾಕು ನಾಯಿಯನ್ನು ರಕ್ಷಿಸಲು ಹೋರಾಡಿದ್ದಾಳೆ. ಈ ಘಟನೆ ಸ್ಯಾಂಟೋಸ್‌ನಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ಸಮಯದಲ್ಲಿ ಅವರು ಏಳು ತಿಂಗಳ ಗರ್ಭಿಣಿಯಾಗಿದ್ದರು ಎಂದು ತಿಳಿದು ಬಂದಿದೆ.

ವೀಡಿಯೊದಲ್ಲಿ, ಥೇನಾ ತನ್ನ ಗೋಲ್ಡನ್ ರಿಟ್ರೈವರ್ ಅಸ್ಲಾನ್ಅನ್ನು ಪಾದಚಾರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಇದ್ದಕ್ಕಿದ್ದಂತೆ ಬಂದ ಎರಡು ಪಿಟ್ ಬುಲ್‌ಗಳು ಅವುಗಳ ಮೇಲೆ ನೇರವಾಗಿ ದಾಳಿ ಮಾಡುತ್ತವೆ. ಅದಕ್ಕೆ ಹೆದರದೆ ಗರ್ಭಿಣಿ ಮಹಿಳೆ ತನ್ನ ನಾಯಿ ಮೇಲೆ ದಾಳಿ ಮಾಡಿದ ಪಿಟ್ ಬುಲ್‌ಗಳ ಕುತ್ತಿಗೆ ಹಿಡುದು ಎಳೆಯಲು ಪ್ರಯತ್ನಿಸುತ್ತಾಳೆ, ಅವುಗಳನ್ನು ತನ್ನ ನಾಯಿಯಿಂದ ದೂರವಿಡಲು ತನ್ನ ಕೈಲಾದಷ್ಟು ಪ್ರಯತ್ನಿಸುತ್ತಾಳೆ, ಈ ಹೋರಾಟದ ಸಮಯದಲ್ಲಿ, ಅವಳು ಆಯತಪ್ಪಿ ನಾಯಿಗಳ ಮೇಲೆ ಬೀಳುತ್ತಾಳೆ.

ಬಿದ್ದ ನಂತರವೂ ಥೇನಾ ಬಿಟ್ಟುಕೊಡುವುದಿಲ್ಲ. ಅವಳು ತನ್ನ ಕೈ ಮತ್ತು ಕಾಲುಗಳನ್ನು ಬಳಸಿ ಸಾಕುನಾಯಿ ಅಸ್ಲಾನ್‌ನನ್ನು ರಕ್ಷಿಸಲು ಪ್ರಯತ್ನಿಸುತ್ತಾಳೆ. ಕೆಲವು ಸಮಯದ ನಂತರ, ಇದನ್ನು ಕಂಡ ಸ್ಥಳೀಯರು ಬಂದು ಆಕೆಗೆ ಸಹಾಯ ಮಾಡುತ್ತಾರೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದ್ದಂತೆಯೇ ಥೇನಾ ಅವರ ಧೈರ್ಯಶಾಲಿ ಸಾಹಸವನ್ನು ನೆಟ್ಟಿಗರು ಮೆಚ್ಚಿದ್ದಾರೆ. ಒಬ್ಬ ಬಳಕೆದಾರ, "ಇತರ ಎರಡು ನಾಯಿಗಳಿಗೆ ನೋವುಂಟು ಮಾಡದೆ ಅವಳು ತನ್ನ ನಾಯಿಯನ್ನು ಹೇಗೆ ರಕ್ಷಿಸಿದಳು ಮತ್ತು ಎರಡು ನಾಯಿಗಳು ಸಹ ಅವಳಿಗೆ ಏನು ಮಾಡಲಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು,"ಅದು ಶುದ್ಧ ಪ್ರೀತಿ! ಯಾರಿಗೂ ಅರ್ಥವಾಗುವುದಿಲ್ಲ" ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net