ನ್ಯಾಯಾಲಯದ ಬ್ಯಾಂಕ್​ನಿಂದಲೇ 64 ಲಕ್ಷ ರೂ. ಲೂಟಿಮಾಡಿ ಅಪ್ಪಮಗನ ಫಾರಿನ್​ ಟ್ರಿಪ್​​! ನಂತರ ಆಗಿದ್ದೀಷ್ಟು..Court

Court
Published on

Court : ಜಿಲ್ಲಾ ನ್ಯಾಯಾಲಯದ ಬ್ಯಾಂಕ್ ಖಾತೆಯಿಂದ 64 ಲಕ್ಷ ರೂಪಾಯಿಗಳನ್ನು ವಂಚಿಸಿ, ವಿದೇಶ ಪ್ರವಾಸ ಮತ್ತು ದುಬಾರಿ ಮೊಬೈಲ್ ಫೋನ್‌ಗಳ ಖರೀದಿಗೆ ಖರ್ಚು ಮಾಡಿದ್ದ ಐಟಿ ತಜ್ಞ ಮತ್ತು ಆತನ ತಂದೆಯನ್ನು ಪೊಲೀಸರು ಬಂಧಿಸಿದ ಘಟನೆ ಇಂದೋರ್​​​​ನಲ್ಲಿ ಮಂಗಳವಾರ (ಜೂ.17) ನಡೆದಿದೆ.

ಈ ಪ್ರಕರಣದ ತನಿಖೆಯ ದೊರೆತ ದಾಖಲೆಗಳ ಆಧಾರದ ಮೇಲೆ ಗುಜರಾತ್‌ನ ವಲ್ಸಾದ್‌ನಿಂದ ಸಾಹಿಲ್ ರಂಗ್ರೆಜ್ (26) ಮತ್ತು ಆತನ ತಂದೆ ಸಾಜಿದ್ ಸತ್ತಾರ್ (57) ಅವರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸ್​​ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್ 5 ರಿಂದ ಜೂನ್ 11 ರ ನಡುವೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದ ಬ್ಯಾಂಕ್ ಖಾತೆಯಿಂದ 64.05 ಲಕ್ಷ ರೂ.ಗಳನ್ನು ವಂಚಿಸಿದ್ದಕ್ಕಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಇಂದೋರ್‌ನ ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೇಶ್ ದಂಡೋಟಿಯಾ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net