ಪ್ರಿಯಕರನ ಜತೆ ಚಕ್ಕಂದ ಆಡಲು ಗಂಡನನ್ನು ದುಬೈಗೆ ಕಳುಹಿಸಿದ ಪತ್ನಿ: ಮನೆಗೆ ಮರಳಿದ ಪತಿಯ ಸ್ಥಿತಿ ಗಂಭೀರ! Extramarital affairs

Extramarital affairs
Published on

Extramarital affairs : ಪತ್ನಿಯ ವಿವಾಹೇತರ ಸಂಬಂಧದಿಂದಾಗಿ ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಹೈದರಾಬಾದ್‌ನ ಆಸಿಫ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ.

ಪ್ರಕರಣದ ಸಂಪೂರ್ಣ ವಿವರಗಳನ್ನು ನೋಡುವುದಾದರೆ, ಹೈದರಾಬಾದ್​ನ ಅಮೀರ್ ಪೇಟೆಯ ಶೇಖ್ ಒಸಾಮಾ ಒಂದು ವರ್ಷದ ಹಿಂದೆ ಶೈಸ್ತಾ ಎಂಬಾಕೆಯನ್ನು ವಿವಾಹವಾದರು. ಆರ್ಥಿಕ ತೊಂದರೆ ಹಿನ್ನೆಲೆಯಲ್ಲಿ ಶೈಸ್ತಾ ತನ್ನ ಪತಿಗೆ ಕೆಲವು ವರ್ಷಗಳ ಕಾಲ ದುಬೈಗೆ ಹೋಗಿ ಹಣ ಸಂಪಾದಿಸುವಂತೆ ಹೇಳಿದಳು. ಅದರಿಂದ ತಮ್ಮ ಆರ್ಥಿಕ ಸಮಸ್ಯೆಗಳನ್ನು ತೊಡೆದುಹಾಕಿ, ಸಂತೋಷವಾಗಿರಬಹುದೆಂದು ಹೇಳಿದಳು.

ಪತ್ನಿಯ ಮಾತಿಗೆ ಓಕೆ ಎಂದ ಶೇಖ್ ಒಸಾಮಾ, ಕೆಲವು ತಿಂಗಳ ಹಿಂದೆ ದುಬೈಗೆ ಹೋದರು. ಅತ್ತ ಪತಿ, ದುಬೈಗೆ ಹೋಗಿ ಕೆಲಸ ಶುರು ಮಾಡಿದರೆ, ಇತ್ತ ಪತ್ನಿ ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಮುಂದುವರಿಸಿದಳು. ಶೈಸ್ತಾಗೆ ಜುನೈದ್​ ಘಾಜಿ ಎಂಬ ವ್ಯಕ್ತಿ ಪರಿಚಯವಾಗಿ, ಆ ಪರಿಚಯ ಇಬ್ಬರ ನಡುವೆ ವಿವಾಹೇತರ ಸಂಬಂಧಕ್ಕೆ ಕಾರಣವಾಯಿತು.

ಇತ್ತೀಚೆಗೆ ದುಬೈನಿಂದ ಹಿಂದಿರುಗಿದ ಶೇಖ್ ಒಸಾಮಾಗೆ ತನ್ನ ಪತ್ನಿಯ ವಿವಾಹೇತರ ಸಂಬಂಧದ ಬಗ್ಗೆ ತಿಳಿಯಿತು. ಈ ಬಗ್ಗೆ ಪತ್ನಿ ಶೈಸ್ತಾಳನ್ನು ಪ್ರಶ್ನಿಸಿದಾಗ ದಂಪತಿ ನಡುವೆ ಜಗಳವಾಯಿತು. ಜಗಳದ ನಂತರ, ಶೈಸ್ತಾ ತನ್ನ ಪತಿಯಿಂದ ದೂರವಾಗಿ ಗೆಳೆಯನ ಜತೆ ಇರಲು ಬಯಸಿದಳು. ಅಲ್ಲದೆ, ತಮ್ಮ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಾನೆ ಅನ್ನೋ ಕಾರಣಕ್ಕೆ ಪ್ರಿಯಕರನೊಂದಿಗೆ ಸೇರಿ, ಒಸಾಮಾನನ್ನು ಕೊಲ್ಲಲು ಸುಪಾರಿ ಗ್ಯಾಂಗ್ ಅನ್ನು ಭೇಟಿಯಾದರು. ಆದರೆ, ಸುಪಾರಿ ಗ್ಯಾಂಗ್​ ಕೇಳಿದಷ್ಟು ಹಣವನ್ನು ನೀಡಲು ಅವರು ಒಪ್ಪಲಿಲ್ಲ.

ಇದಾದ ಬಳಿಕ ಸೋಮವಾರ ರಾತ್ರಿ ಶೇಖ್ ಒಸಾಮಾ ಮೇಲೆ ಜುನೈದ್​ ಘಾಜಿ ಮತ್ತು ಆತನ ಸ್ನೇಹಿತರು ದಾಳಿ ಮಾಡಿದರು. ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದರು. ಈ ವೇಳೆ ಶೇಖ್​ ಒಸಾಮಾ ಪ್ರಜ್ಞೆ ತಪ್ಪಿದ್ದರಿಂದ ಅವರು ಸತ್ತಿದ್ದಾರೆಂದು ಭಾವಿಸಿ ಅಲ್ಲಿಂದ ಹೊರಟರು. ಸ್ಥಳೀಯರ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಗಂಭೀರ ಗಾಯಗಳೊಂದಿಗೆ ಬಿದ್ದಿದ್ದ ಶೇಖ್ ಒಸಾಮಾ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು.

ಸದ್ಯ, ಒಸಾಮಾ ಆಸ್ಪತ್ರೆಯಲ್ಲಿ ಮಾರಣಾಂತಿಕ ಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಜುನೈದ್​ ಘಾಜಿ ಮತ್ತು ಶೈಶ್ತಾ ಬಂಧನಕ್ಕೆ ಬಲೆ ಬೀಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net