ಮಿಲಿಟರಿ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದ ವಿಮಾನ ಪತನ! 60ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ.. Plane Crash ವಿಡಿಯೋ ವೈರಲ್

Washington Plane Crash
Published on

ಅಮೆರಿಕಾ: ( Plane Crash )  ರೊನಾಲ್ಡ್ ರೇಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಪೊಟೊಮ್ಯಾಕ್ ನದಿಯಲ್ಲಿ, ಅಮೆರಿಕನ್ ಏರ್​ಲೈನ್ಸ್​  ವಿಮಾನವು  ಮಿಲಿಟರಿ ಹೆಲಿಕಾಪ್ಟರ್​ಗೆ ಡಿಕ್ಕಿ ಹೊಡೆದ ನಂತರ ಎರಡೂ ವಿಮಾನಗಳು  ಅಪಘಾತಕ್ಕೀಡಾಗಿವೆ.

ವಿಮಾನದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ 60 ಜನರು ಇದ್ದರು ಎಂದು ವರದಿಯಾಗಿದೆ. ವಾಷಿಂಗ್ಟನ್‌ನ ರೇಗನ್ ವಿಮಾನ ನಿಲ್ದಾಣದ ಬಳಿ ಈ ಘಟನೆ ನಡೆದಿದೆ.

60 ಜನರಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನ ಲ್ಯಾಂಡಿಂಗ್‌ಗೆ ಸಿದ್ಧವಾದಾಗ ಈ ದುರ್ಘಟನೆ ಸಂಭವಿಸಿದೆ.. ಅದು ವಾಷಿಂಗ್ಟನ್ ಮಿಲಿಟರಿ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದೆ. ಅಮೆರಿಕನ್ ಏರ್‌ಲೈನ್ಸ್ ಫ್ಲೈಟ್ ಪಿಎಸ್‌ಎ-5342, ವಿಚಿತಾ, ಕಾನ್ಸಾಸ್‌ನಿಂದ ವಾಷಿಂಗ್ಟನ್‌ಗೆ ತೆರಳುತ್ತಿದ್ದಾಗ ಅಪಘಾತದ  ಸಂಭವಿಸಿ... ಪೊಟೊಮ್ಯಾಕ್ ನದಿಗೆ ಅಪ್ಪಳಿಸಿತು.

ಸದ್ಯ ರಕ್ಷಣಾ ಕಾರ್ಯಾಚರಣೆ ವೇಗವಾಗಿ ನಡೆಯುತ್ತಿದೆ. ಯುಎಸ್ ಪಾರ್ಕ್ ಪೊಲೀಸ್, ಮೆಟ್ರೋಪಾಲಿಟನ್ ಪೊಲೀಸ್ ಮತ್ತು ಮಿಲಿಟರಿಯಂತಹ ವಿವಿಧ ಏಜೆನ್ಸಿಗಳು ಸ್ಥಳದ ಬಳಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸುತ್ತಿವೆ.

ಈ ಅಪಘಾತದಿಂದಾಗಿ ವಿಮಾನ ನಿಲ್ದಾಣದಿಂದ ಎಲ್ಲಾ ಟೇಕ್-ಆಫ್‌ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.  ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮೃತರಿಗೆ ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net